ಶನಿವಾರಸಂತೆ, ಜ. ೧೯: ಲಯನ್ಸ್ ಕ್ಲಬ್ ಆಫ್ ಕಾವೇರಿ ಸೆಂಟಿನಲ್ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಿಸಲಾಯಿತು. ಇಲ್ಲಿನ ಭಾರತಿ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಹರೀಶ್ ವಿವೇಕಾನಂದರ ಬಗ್ಗೆ ಉಪನ್ಯಾಸ ನೀಡಿದರು.
ಸಭೆಯಲ್ಲಿ ಖಜಾಂಚಿ ಚಿಣ್ಣಪ್ಪ, ಲಯನ್ಸ್ ಉಪಾಧ್ಯಕ್ಷರುಗಳಾದ ಜಿ. ನಾರಾಯಣಸ್ವಾಮಿ, ಎನ್.ಕೆ. ಅಪ್ಪಸ್ವಾಮಿ, ಜಿ.ಬಿ. ಪರಮೇಶ್, ಸದಸ್ಯರುಗಳಾದ ಜಿ.ಪಿ. ಪುಟ್ಟಪ್ಪ, ಸಿ.ಪಿ. ಹರೀಶ್, ಟಿ.ಆರ್. ಕೇಶವಮೂರ್ತಿ, ಎಸ್.ಜಿ. ನರೇಶ್ಚಂದ್ರ, ಮಲ್ಲೇಶ್, ಭಾರತಿ ವಿದ್ಯಾಸಂಸ್ಥೆಯ ನಿರ್ದೇಶಕ ಎಂ.ಎ. ಮಹಮದ್ ಪಾಶ, ಪ್ರಾಂಶುಪಾಲರುಗಳಾದ ಅಶೋಕ್, ದಯಾನಂದ್, ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮನಸ್ವಿ ತಂಡದವರಿAದ ಪ್ರಾರ್ಥನೆಯೊಂದಿಗೆ, ಕಾರ್ಯಕ್ರಮದ ನಿರೂಪಣೆ ಮಾಡಿದ ಶಿಕ್ಷಕಿ ಭವಾನಿ, ಶಿಕ್ಷಕ ಗೋಪಾಲ್ ಸ್ವಾಗತಿಸಿ, ವಂದಿಸಿದರು.