ಗೋಣಿಕೊಪ್ಪ ವರದಿ, ಜ. ೧೯: ಕೇರಳ ಸರ್ಕಾರ ಬಜೆಟ್ನಲ್ಲಿ ಕಾಫಿಗೆ ಘೋಷಿಸಿರುವ ಬೆಂಬಲ ಬೆಲೆಯಂತೆ, ಕರ್ನಾಟಕ ಸರ್ಕಾರ ಕೂಡ ಘೋಷಣೆ ಮಾಡಬೇಕು ಎಂದು ರೈತ ಸಂಘ, ಹಸಿರು ಸೇನೆ ವತಿಯಿಂದ ಶ್ರೀಮಂಗಲ ಕೃಷಿ ಪತ್ತಿನ ಸಹಕಾರ ಸಂಘ ಸಭಾಂಗಣದಲ್ಲಿ ಆಯೋಜಿಸಿದ್ದ ರೈತರ ಸಭೆಯಲ್ಲಿ ಒತ್ತಾಯಿಸಲಾಯಿತು.
ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇರಳ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಯೋಜನೆಯಂತೆ ಕಾಫಿಗೆ ಉತ್ತಮ ಬೆಲೆಯನ್ನು ರಾಜ್ಯ ಸರ್ಕಾರ ಘೋಷಿಸಬೇಕು ಇಲ್ಲದಿದ್ದಲ್ಲಿ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ರೈತರು ಎಚ್ಚರಿಕೆ ನೀಡಿದರು.
ಬೆಂಬಲ ಬೆಲೆಯಾಗಿ ಕಾಫಿಗೆ ಪ್ರತೀ ಕೆ.ಜಿ.ಗೆ ರೂ. ೯೦ ನಿಗದಿಪಡಿಸಲಾಗಿದೆ. ಆದರೆ ಅತೀ ಹೆಚ್ಚು ಕಾಫಿ ಬೆಳೆಯುವ ಕೊಡಗಿನ ಬೆಳೆಗಾರರಿಗೆ ಕರ್ನಾಟಕ ಸರ್ಕಾರ ದಿಂದ ಯಾವುದೇ ಪ್ರಯೋಜನ ವಾಗುತ್ತಿಲ್ಲ, ರಾಜ್ಯದಲ್ಲಿ ಬೆಂಬಲ ಬೆಲೆ ಘೋಷಣೆ ಯಾಗದಿದ್ದಲ್ಲಿ ಜಿಲಾದ್ಯಂತ ಬೃಹತ್ ಪ್ರತಿಭಟನೆ ನಡೆಸುವಂತೆಯೂ, ಶಾಸಕರು, ಸಂಸದರು ಸರ್ಕಾರದ ಗಮನಕ್ಕೆ ತರಬೇಕು ಎಂದು ರೈತರು ಹೇಳಿದರು.
ರೈತ ತೀತಿರ ಮಂದಣ್ಣ ಗೋಣಿಕೊಪ್ಪ ವರದಿ, ಜ. ೧೯: ಕೇರಳ ಸರ್ಕಾರ ಬಜೆಟ್ನಲ್ಲಿ ಕಾಫಿಗೆ ಘೋಷಿಸಿರುವ ಬೆಂಬಲ ಬೆಲೆಯಂತೆ, ಕರ್ನಾಟಕ ಸರ್ಕಾರ ಕೂಡ ಘೋಷಣೆ ಮಾಡಬೇಕು ಎಂದು ರೈತ ಸಂಘ, ಹಸಿರು ಸೇನೆ ವತಿಯಿಂದ ಶ್ರೀಮಂಗಲ ಕೃಷಿ ಪತ್ತಿನ ಸಹಕಾರ ಸಂಘ ಸಭಾಂಗಣದಲ್ಲಿ ಆಯೋಜಿಸಿದ್ದ ರೈತರ ಸಭೆಯಲ್ಲಿ ಒತ್ತಾಯಿಸಲಾಯಿತು.
ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇರಳ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಯೋಜನೆಯಂತೆ ಕಾಫಿಗೆ ಉತ್ತಮ ಬೆಲೆಯನ್ನು ರಾಜ್ಯ ಸರ್ಕಾರ ಘೋಷಿಸಬೇಕು ಇಲ್ಲದಿದ್ದಲ್ಲಿ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ರೈತರು ಎಚ್ಚರಿಕೆ ನೀಡಿದರು.
ಬೆಂಬಲ ಬೆಲೆಯಾಗಿ ಕಾಫಿಗೆ ಪ್ರತೀ ಕೆ.ಜಿ.ಗೆ ರೂ. ೯೦ ನಿಗದಿಪಡಿಸಲಾಗಿದೆ. ಆದರೆ ಅತೀ ಹೆಚ್ಚು ಕಾಫಿ ಬೆಳೆಯುವ ಕೊಡಗಿನ ಬೆಳೆಗಾರರಿಗೆ ಕರ್ನಾಟಕ ಸರ್ಕಾರ ದಿಂದ ಯಾವುದೇ ಪ್ರಯೋಜನ ವಾಗುತ್ತಿಲ್ಲ, ರಾಜ್ಯದಲ್ಲಿ ಬೆಂಬಲ ಬೆಲೆ ಘೋಷಣೆ ಯಾಗದಿದ್ದಲ್ಲಿ ಜಿಲಾದ್ಯಂತ ಬೃಹತ್ ಪ್ರತಿಭಟನೆ ನಡೆಸುವಂತೆಯೂ, ಶಾಸಕರು, ಸಂಸದರು ಸರ್ಕಾರದ ಗಮನಕ್ಕೆ ತರಬೇಕು ಎಂದು ರೈತರು ಹೇಳಿದರು.
ರೈತ ತೀತಿರ ಮಂದಣ್ಣ ಕಾಡಾನೆ, ಹುಲಿ ದಾಳಿ, ಜಾನುವಾರು ಕಳೆದುಕೊಂಡವರಿಗೆ ಪರಿಹಾರ ವಿತರಣೆ ಮತ್ತು ಕಾಫಿ ಕೊಯ್ಲಿಗೆ ವಾಹನದಲ್ಲಿ ಬರುವ ಕಾರ್ಮಿಕರ ವಾಹನಗಳನ್ನು ತಡೆದು ಅಡ್ಡಿ ಪಡಿಸುತ್ತಿರುವ ಪೊಲೀಸರ ಕ್ರಮಕ್ಕೆ ಆಕ್ಷೇಪ ವ್ಯಕ್ತವಾಯಿತು. ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಖಜಾಂಚಿ ಸವಿತ ಭೀಮಯ್ಯ, ಮುಖಂಡ ಪುಚ್ಚಿಮಾಡ ರಾಯ್ ಸೇರಿದಂತೆ ತಾಲೂಕು ಮತ್ತು ಹೋಬಳಿ ಭಾಗದ ರೈತ ಮುಖಂಡರು ಇದ್ದರು.