ವೀರಾಜಪೇಟೆ, ಜ. ೧೯: ವೀರಾಜಪೇಟೆ ತಾಲೂಕಿನ ಆರು ಹೋಬಳಿಗಳ ಪೈಕಿ ಅಮ್ಮತ್ತಿ ಹೋಬಳಿ ಹೊರತುಪಡಿಸಿದಂತೆ ಐದು ಹೋಬಳಿಗಳ ನಿವೇಶನ ರಹಿತ ಬುಡಕಟ್ಟು ಸೇರಿದಂತೆ ನಿರ್ಗತಿಕರು, ಹಿಂದುಳಿದವರು ಎಲ್ಲ ಕಾರ್ಮಿಕ ಫಲಾನುಭವಿಗಳಿಗೆ ನಿವೇಶನದ ಹಕ್ಕು ಪತ್ರ ವಿತರಿಸಲಾಗುವುದು; ಇದಕ್ಕಾಗಿ ಫಲಾನುಭವಿಗಳು ಇನ್ನು ಮುಂದೆ ತಾಲೂಕು ಕಚೇರಿಗೆ ಬರುವುದು ಬೇಡ ಎಂದು ತಾಲೂಕು ತಹಶೀಲ್ದಾರ್ ಯೋಗಾನಂದ ಅವರು ಬುಡಕಟ್ಟು ಕಾರ್ಮಿಕ ಸಂಘಟನೆಗೆ ಭರವಸೆ ನೀಡಿದರು. ಕೊಡಗು ಜಿಲ್ಲಾ ಬುಡಕಟ್ಟು ವೀರಾಜಪೇಟೆ, ಜ. ೧೯: ವೀರಾಜಪೇಟೆ ತಾಲೂಕಿನ ಆರು ಹೋಬಳಿಗಳ ಪೈಕಿ ಅಮ್ಮತ್ತಿ ಹೋಬಳಿ ಹೊರತುಪಡಿಸಿದಂತೆ ಐದು ಹೋಬಳಿಗಳ ನಿವೇಶನ ರಹಿತ ಬುಡಕಟ್ಟು ಸೇರಿದಂತೆ ನಿರ್ಗತಿಕರು, ಹಿಂದುಳಿದವರು ಎಲ್ಲ ಕಾರ್ಮಿಕ ಫಲಾನುಭವಿಗಳಿಗೆ ನಿವೇಶನದ ಹಕ್ಕು ಪತ್ರ ವಿತರಿಸಲಾಗುವುದು; ಇದಕ್ಕಾಗಿ ಫಲಾನುಭವಿಗಳು ಇನ್ನು ಮುಂದೆ ತಾಲೂಕು ಕಚೇರಿಗೆ ಬರುವುದು ಬೇಡ ಎಂದು ತಾಲೂಕು ತಹಶೀಲ್ದಾರ್ ಯೋಗಾನಂದ ಅವರು ಬುಡಕಟ್ಟು ಕಾರ್ಮಿಕ ಸಂಘಟನೆಗೆ ಭರವಸೆ ನೀಡಿದರು. ಕೊಡಗು ಜಿಲ್ಲಾ ಬುಡಕಟ್ಟು ಮನೆಗೆ ತೆರಳಿ ಅಲ್ಲಿಯೇ ಹಕ್ಕುಪತ್ರ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ವಿತರಿಸುತ್ತಾರೆ ಎಂದು ತಿಳಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ವೈ.ಬಿ. ಗಪ್ಪು ಅವರ ನೇತೃತ್ವದಲ್ಲಿ ಧರಣಿ ಮುಷ್ಕರ ನಡೆಯಿತು. ಸಂಘಟನೆಯ ಸೀತೆ ಕಲ್ಲೂರು, ಇತರ ಪ್ರಮುಖರು ಹಾಜರಿದ್ದರು. ತಹಶೀಲ್ದಾರ್ ಭರವಸೆಯ ಮೇರೆ ಧರಣಿ ಮುಷ್ಕರವನ್ನು ತಾತ್ಕಾಲಿವಾಗಿ ಮುಂದೂಡಲಾಯಿತು. ವೃತ್ತ ನಿರೀಕ್ಷಕ ಕ್ಯಾತೆಗೌಡ, ನಗರ ಪೊಲೀಸ್ ಸಬ್ಇನ್ಸ್ಪೆಕ್ಟರ್ ಜಗದೀಶ್ ಬಂದೋಬಸ್ತ್ನಲ್ಲಿದ್ದರು.