ಬ್ರಿಸ್ಬೇನ್, ಜ. ೧೯: ಭಾರತ ಆಸ್ಟೆçÃಲಿಯಾ ನಡುವಿನ ‘ಬಾರ್‌ಡರ್-ಗವಾಸ್ಕರ್’ ಟ್ರೋಫಿಯ ಕ್ರಿಕೆಟ್ ಸರಣಿಯ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಇತಿಹಾಸ ಸೃಷ್ಟಿಸಿದೆ. ಆಸ್ಟೆçÃಲಿಯಾದ ಬ್ರಿಸ್ಬೇನ್‌ನ ‘ಗ್ಯಾಬಾ’ ಮೈದಾನದಲ್ಲಿ ಕಳೆದ ೩೨ ವರ್ಷಗಳಿಂದ ಟೆಸ್ಟ್ ಪಂದ್ಯ ಸೋಲದ ಆಸ್ಟೆçÃಲಿಯಾ ಭಾರತದ ವಿರುದ್ಧ ಸೋಲುವ ಮೂಲಕ ಭಾರತ ಇತಿಹಾಸ ಸೃಷ್ಟಿಸಿದಂತಾಗಿದೆ. ೪ ಪಂದ್ಯಗಳನ್ನೊಳಗೊAಡ ಸರಣಿಯಲ್ಲಿ ೨-೧ ಗೆಲ್ಲುವ ಮೂಲಕ ಸರಣಿ ಜಯ ಸಾಧಿಸಿದೆ.
ಪ್ರಮುಖ ೮ ಆಟಗಾರರಿಲ್ಲದೆ ಜಯ!
ಕಳೆದ ವರ್ಷ ಆಸ್ಟೆçÃಲಿಯಾ ವಿರುದ್ಧ ಆಸ್ಟೆçÃಲಿಯಾದಲ್ಲಿಯೇ ೨-೧ ಅಂತರದಲ್ಲಿ ಸರಣಿ ಗೆದ್ದ ಭಾರತ ಆಸ್ಟೆçÃಲಿಯಾದಲ್ಲಿ ಮೊದಲ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿತು. ಈ ಸರಣಿಯಲ್ಲಿ ಆಸ್ಟೆçÃಲಿಯಾದ ಈರ್ವರು ಪ್ರಮುಖ ಆಟಗಾರರಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಕಾರಣಾಂತರ ಗಳಿಂದ ಭಾಗವಹಿಸಿರಲಿಲ್ಲ. ಇದನ್ನೇ ಹಲವರು ನೆಪವಾಗಿರಿಸಿಕೊಂಡ ಈರ್ವರು ಪ್ರಮುಖ ಆಟಗಾರರಿಲ್ಲದ ಕಾರಣ ಭಾರತ ಸರಣಿ ಜಯಿಸಿತು ಎಂದು ತಂಡವನ್ನು ವ್ಯಂಗ್ಯ ಮಾಡಿದರು. ಆದರೆ ಈ ಬಾರಿ ಮೊದಲನೆಯ ಪಂದ್ಯದ ಬಳಿಕ ಭಾರತದ ಕ್ಯಾಪ್ಟನ್ ವಿರಾಟ್ ಕೊಹ್ಲಿ ರಜೆಯ ಮೇಲೆ ಭಾರತಕ್ಕೆ ಹಿಂತೆರಳಿದ್ದರು. ೨ನೇ ಪಂದ್ಯದಲ್ಲಿ ಪ್ರಮುಖ ಬೌಲರ್ ಮಹಮ್ಮದ್ ಶಮಿ ಹಾಗೂ ಉಮೇಶ್ ಯಾದವ್‌ಗೆ ಗಾಯವಾಗಿತ್ತು. ೩ನೇ ಪಂದ್ಯದ ನಂತರ ಅಶ್ವಿನ್, ಜಡೆಜಾ, ಭುಂರಾ, ರಾಹುಲ್, ಹನುಮ ವಿಹಾರಿ ಗಾಯಗೊಂಡಿದ್ದು ಅನುಭವ ರಹಿತ ಭಾರತ ತಂಡ ಕ್ರಿಕೆಟ್ ದಿಗ್ಗಜರಾದ ಆಸ್ಟೆçÃಲಿಯಾದ ವಿರುದ್ಧ ೪ನೇ ಪಂದ್ಯವನ್ನು ಗೆಲ್ಲುವ ಮೂಲಕ ದೇಶದಾದ್ಯಂತ ಜನಮನ್ನಣೆಗೆ ಪಾತ್ರವಾಗಿದೆ. ಸರಣಿ ಪ್ರಾರಂಭದಲ್ಲಿ ೧೫ ಮಂದಿಯನ್ನೊಳಗೊAಡ ತಂಡದಲ್ಲಿ ಇಲ್ಲದಿದ್ದರೂ ನೂತನ ಆಟಗಾರರಾದ ನಟರಾಜನ್, ಶಾರ್‌ದುಲ್ ಠಾಕುರ್, ವಾಶಿಂಗ್‌ಟನ್ ಸುಂದರ್ ‘ನೆಟ್ ಬೌರ‍್ಸ್’ ಆಗಿ ಆಸ್ಟೆçÃಲಿಯಾಗೆ ಆಗಮಿಸಿದ್ದರು. ಪ್ರಮುಖ ಆಟಗಾರರಿಗೆ ಗಾಯವಾದ ಕಾರಣ ಈ ಕ್ರೀಡಾಪಟುಗಳಿಗೆ ಪಂದ್ಯದಲ್ಲಿ ಆಡುವ ಅವಕಾಶ ದೊರೆಯಿತು. ಈ ಮೂವರೂ ಅತ್ಯುತ್ತಮ ಆಟದ ಪ್ರದರ್ಶನ ನೀಡುವ ಮೂಲಕ ಮಾದರಿಯಾದರು. ಮತ್ತೊಬ್ಬ ಬೌಲರ್ ಮಹಮದ್ ಸಿರಾಜ್ ಸರಣಿ ನಡೆಯುವ ಮುನ್ನ ತನ್ನ ತಂದೆಯನ್ನು ಕಳೆದುಕೊಂಡಿದ್ದರು. ಆದರೂ ಕೂಡ ದೃತಿಗೆಡದೆ ಸರಣಿಯಲ್ಲಿ ಭಾಗವಹಿಸಿ ಕೊನೆಯ ಪಂದ್ಯದ ಕೊನೆಯ ಇನ್ನಿಂಗ್ಸ್ನಲ್ಲಿ ೫ ವಿಕೆಟ್ ಗಳಿಸುವುದರ ಮೂಲಕ ಭಾರತದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸ್ಕೋರ್ ವಿವರ
ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟೆçÃಲಿಯಾ ೩೬೯ ರನ್ ಗಳಿಸಿತು. ಭಾರತವು ೧೮೬ ರನ್‌ಗೆ ೬ ವಿಕೆಟ್ ಕಳೆದುಕೊಂಡು ಪರದಾಡುತ್ತಿರುವಾಗ ಬೌರ‍್ಸ್ಗಳಾದ ವಾಶಿಂಗ್‌ಟನ್ ಸುಂದರ್ ಹಾಗೂ ಶಾರ್‌ದುಲ್ ಠಾಕುರ್ ಇಬ್ಬರೂ ತಮ್ಮ ಮೊದಲನೆಯ ಅರ್ಧ ಶತಕ ಗಳಿಸುವ ಮುಖೇನ ಭಾರತ ೩೩೬ ಮೊತ್ತ ಸಾಧಿಸಿತು. ೩೩ ರನ್ ಲೀಡ್ ಪಡೆದ ಆಸ್ಟೆçÃಲಿಯಾ ೨ನೇ ಇನ್ನಿಂಗ್ಸ್ನಲ್ಲಿ ೨೯೪ಕ್ಕೆ ಆಲೌಟ್‌ಗೊಂಡಿತು. ೩೨೮ ಟಾರ್ಗೆಟ್ ಬೆನ್ನಟ್ಟಿದ ಭಾರತ ೭ ವಿಕೆಟ್ ಕಳೆದುಕೊಂಡು ೩೨೯ ರನ್ ಗಳಿಸಿ ಜಯಗೊಳಿಸಿತು. ಕೊನೆಯ ದಿನದ ಆಟವಾದ ಇಂದಿನ ಆಟ ಮುಕ್ತಾಯಗೊಳ್ಳಲು ಕೇವಲ ೩ ಓವರ್‌ಗಳಷ್ಟೆ ಬಾಕಿ ಇದ್ದವು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ೮೯ ರನ್ ಬಾರಿಸಿದ ರಿಶಬ್ ಪಂತ್ ಪಡೆದುಕೊಂಡರೆ ಸರಣಿ ಶ್ರೇಷ್ಠ ಪ್ರಶಸಿಯನ್ನು ಸರಣಿಯಲ್ಲಿ ೨೧ ವಿಕೆಟ್ ಪಡೆದ ಆಸ್ಟೆçÃಲಿಯಾದ ಪ್ಯಾಟ್ ಕಮಿನ್ಸ್ ಪಡೆದುಕೊಂಡರು.
ರೂ. ೫ ಕೋಟಿ ಬೋನಸ್
ಬೋರ್ಡ್ ಆಫ್ ಕ್ರಿಕೆಟ್ ಕಂಟ್ರೋಲ್- ಇಂಡಿಯಾ (ಬಿ.ಸಿ.ಸಿ.ಐ) ಅಧ್ಯಕ್ಷ ಹಾಗೂ ಭಾರತದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ತಂಡಕ್ಕೆ ರೂ.೫ ಕೋಟಿ ನಗದು ಬೋನಸ್ ನೀಡುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ದೇಶದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗೃಹ ಸಚಿವ ಅಮಿತ್ ಶಾ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಇತರ ರಾಜಕೀಯ ಪ್ರಮುಖರು ಭಾರತ ತಂಡದ ಗೆಲುವನ್ನು ಶ್ಲಾಘಿಸಿದ್ದಾರೆ.