ಗೋಣಿಕೊಪ್ಪ ವರದಿ, ಜ. ೧೯: ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಡೆಯುತ್ತಿರುವ ನರ್ಸರಿ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ನರ್ಸರಿಯಲ್ಲಿ ಸಾಧನ ಮತ್ತು ಹೊರಾಂಗಣ ಗಿಡಗಳ ನಿರ್ವಹಣೆ ಬಗ್ಗೆ ವಿಜ್ಞಾನಿ ಡಾ. ಪ್ರಭಾಕರ್ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಕೆವಿಕೆ ಕೇಂದ್ರದ ಆವರಣದಲ್ಲಿ ಗಿಡಗಳನ್ನು ನೆಡುವುದು, ತೆಗೆಯುವುದು, ನೀರು ಮತ್ತು ಗೊಬ್ಬರ ನೀಡುವುದು, ರೋಗ ಮತ್ತು ಕೀಟ ಹತೋಟಿ ಮಾಡಲು ಸಿಂಪಡಣೆ ಬಗ್ಗೆ ಮಾಹಿತಿ ನೀಡಿದರು.ಕಳೆ ತೆಗೆಯಲು ಸಾಧನಗಳು ಹೆಚ್ಚು ಅವಶ್ಯವಿದೆ. ಗುದ್ದಲಿ, ಹಾರೆ, ಪಿಕಾಸಿ, ತಳ್ಳುವ ಗಾಡಿ, ಜರಡಿ, ನೀರಿನ ಕ್ಯಾನ್, ಸಿಕೇಚರ್, ಚಾಕು, ರೇಕ್ಸ್, ಡಿಬ್ಲರ್, ಸ್ಪೆçÃಯರ್‌ಗಳ ಬಳಕೆ ಬಗ್ಗೆ ಅರಿವು ಮೂಡಿಸಿದರು.
ಹೊರಾಂಗಣದಲ್ಲಿ ಬೆಳೆಸಬಹುದಾದ ಕೆಲವೊಂದು ಹೂ ಗಿಡ, ಮರ, ಬಳ್ಳಿ ಮತ್ತು ಪಾಮ್‌ಗಳ ಬಗ್ಗೆ ಮಾಹಿತಿ ನೀಡಿ, ಅವುಗಳ ಹೆಸರು, ಬಳಸುವಿಕೆ ಮತ್ತು ಸಸ್ಯಾಭಿವೃದ್ಧಿ ವಿಧಾನಗಳ ತಿಳುವಳಿಕೆ ನೀಡಲಾಯಿತು. ಪೇಪರ್ ಹೂ, ಕ್ರೋಟಾನ್, ಅಕೈಲೀಫಾ, ಲಂಟಾನ, ಗುಲ್ಮೋರ್, ಬಸವನಪಾದ, ಅಶೋಕ, ಗಾಳಿಮರ, ಗ್ಲಿರಿಸೀಡಿಯ, ಸಿಲ್ವರ್, ಮಹಾಗನಿ, ಬಿದಿರು, ಅರೇಕಾ ಮತ್ತು ರಾಯಲ್ ಪಾಮ್, ರಂಗೂನ್ ಕ್ರಿಪರ್, ಗೋಲ್ಡನ್ ಶವರ್, ಜೇಡ್ ಗಿಡಗಳ ಅಭಿವೃದ್ಧಿ ತರಬೇತಿ ನೀಡಿದರು. ಸುಮಾರು ೨೦ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.