ಶನಿವಾರಸಂತೆ, ಜ. ೧೯: ಶನಿವಾರಸಂತೆ ಸಮೀಪದ ಕೊಡ್ಲಿಪೇಟೆಯ ಶ್ರೀ ವೀರಭದ್ರೇಶ್ವರ ದೇವಾಲಯ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮಸೀದಿ ಏರಿಯಾ (ಎ) ಒಕ್ಕೂಟದ ವತಿಯಿಂದ ಸ್ವಚ್ಛತಾ ಕಾರ್ಯದ ಶ್ರಮದಾನ ನಡೆಯಿತು. ಅರ್ಚಕ ರಮೇಶ್ ಹಿರೇಮಠ್, ವೀರಶೈವ ಸಮಾಜದ ಅಧ್ಯಕ್ಷ ಬಿ.ಕೆ. ಯತೀಶ, ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಯತೀಶ್ ಕುಮಾರ್, ಒಕ್ಕೂಟದ ಕಾರ್ಯದರ್ಶಿ ಕಲಾವತಿ, ಸೇವಾ ಪ್ರತಿನಿಧಿ ಶಂಷಾದ್, ಸದಸ್ಯರು ಹಾಜರಿದ್ದರು.