ವೀರಾಜಪೇಟೆ, ಜ.೧೯: ಬೇತ್ರಿ ಗ್ರಾಮ ಬಳಿಯ ನಾಲ್ಕೇರಿ ಎಂಬಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ದೂರಿನ ಮೇರೆ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಅದೇ ಗ್ರಾಮದ ರಾಶೀದ್ (೨೧) ಎಂಬಾತನ ಮೇಲೆ ಪೊಕ್ಸೋ ಕಾಯ್ದೆ ಮೇರೆ ಪ್ರಕರಣ ದಾಖಲಿಸಿದ್ದಾರೆ.
ಅಪ್ರಾಪ್ತೆಯ ಪೋಷಕರು ಅತ್ಯಾಚಾರ ಯತ್ನದ ಕುರಿತು ತಾ. ೧೭ರಂದು ಸಂಜೆ ರಾಶೀದ್ನ ಪೋಷಕರಿಗೆ ದೂರು ನೀಡಲು ಮನೆಗೆ ತೆರಳಿದ್ದಾಗ ಆ ಪೋಷಕರ ಮೇಲೆ ಹಲ್ಲೆ ನಡೆಸಿದ ದೂರಿನ ಮೇರೆ ಪೊಲೀಸರು ಪೋಕ್ಸೋ ಆರೋಪಿ ರಾಶೀದ್ ಹಾಗೂ ಆತನ ತಂದೆ ಹಸೇನಾರ್ ವಿರುದ್ಧ ಹಲ್ಲೆ ಪ್ರಕರಣವನ್ನು ದಾಖಲಿಸಿದ್ದಾರೆ.
ಇಬ್ಬರ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಅಪ್ರಾಪ್ತೆ ಬಾಲಕಿಯ ಪೋಷಕರು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು, ಹಸೇನಾರ್ ಹಾಗೂ ರಾಶೀದ್ ತಲೆಮರೆಸಿಕೊಂಡಿದ್ದಾರೆ.