ಕಾಲೇಜಿನ ಎನ್ಸಿಸಿ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಮೇಜರ್ ಡಾ. ರಾಘವ ಬಿ ಅವರು ಶಿಬಿರದ ಸ್ಥೂಲ ಪರಿಚಯ ನೀಡುತ್ತಾ, ಇಲ್ಲಿ ವಿದ್ಯಾರ್ಥಿಗಳಿಗೆ ಮ್ಯಾಪ್ ರೀಡಿಂಗ್, ವ್ಯಕ್ತಿತ್ವ ವಿಕಸನ ತರಬೇತಿ, ಬಂದೂಕು ತರಬೇತಿ, ಸೇನೆಯಲ್ಲಿನ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಲಾಗುತ್ತದೆ ಎಂದು ವಿವರಿಸಿದರು.
ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಭೂಮಿಕ. ಬಿ.ಜಿ. ಅವರು ನಿರೂಪಣೆ ಮಾಡಿದರು ಹಾಗೂ ಅಂತಿಮ ವಾಣಿಜ್ಯ ವಿಭಾಗದ ಯಶೋಧ ಎ.ಕೆ. ಅವರು ವಂದಿಸಿದರು.