ಮಡಿಕೇರಿ, ಜ. ೧೯ : ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಸಂಘದ ಸಭೆ ನಗರದಲ್ಲಿ ನಡೆಯಿತು. ಗ್ರಾ.ಪಂ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸಂಘದ ಸದಸ್ಯರುಗಳಾದ ಜಾನ್ಸನ್ ಪಿಂಟೋ ಮಡಿಕೇರಿ, ಸಬಾಸ್ಟಿನ್ ಸುಂಟಿಕೊಪ್ಪ, ಫಿಲೋಮಿನಾ ಕೂಡಿಗೆ ಅವರನ್ನು ಸಭೆಯಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎಸ್.ಎಂ.ಡಿಸಿಲ್ವಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಹಾಜರಿದ್ದರು.