ಸುಂಟಿಕೊಪ್ಪ, ಜ. ೧೭: ಸುಂಟಿಕೊಪ್ಪ ಪಟ್ಟಣದ ಅಂಗನವಾಡಿ ಮೇಲ್ಛಾವಣಿ ಶಿಥಿಲಾವಸ್ಥೆಯಲ್ಲಿದ್ದು ಅದನ್ನು ಮನಗಂಡ ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ ಮತ್ತು ಒಂದನೇ ವಿಭಾಗದ ಗ್ರಾ.ಪಂ. ಸದಸ್ಯೆ ಶಾಂತಿ ಅವರು ಭೇಟಿ ನೀಡಿ ವೀಕ್ಷಿಸಿದರು. ನಂತರ ಮಾಹಿತಿ ನೀಡಿದ ವಿಮಲಾವತಿ ಅವರು, ಮಳೆಯ ಹಿನೆÀ್ನಲೆಯಲ್ಲಿ ಮೇಲ್ಛಾವಣಿ ಶಿಥಿಲಾವಸ್ಥೆಗೆ ತಲುಪಿದ್ದು, ಈ ಬಗ್ಗೆ ಮುತುವರ್ಜಿ ವಹಿಸಿ ಸರಿಪಡಿಸುವ ಕಾರ್ಯ ಮಾಡಲಾಗುವುದು ಎಂದರಲ್ಲದೇ, ದುರಸ್ತಿ ಕಾರ್ಯ ನಿರ್ವಹಿಸಲು ಸಂಬAಧಿಸಿದ ಗುತ್ತಿಗೆದಾರರಿಗೆ ಮಾಹಿತಿ ನೀಡಿದರು.