ಮಡಿಕೇರಿ, ಜ. ೧೬ : ನಿಷ್ಟಾವಂತರಿಗೆ ಪಕ್ಷದಲ್ಲಿ ಮನ್ನಣೆ ಇಲ್ಲ, ಬಕೆಟ್ ಹಿಡಿಯುವವರಿಗೆ ಮಂತ್ರಿಗಿರಿ ದೊರೆಯುತ್ತಿದೆ ಎಂದು ಸರ್ಕಾರದ ವಿರುದ್ಧ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಗುಡುಗಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಮಾಣಿಕ ವಾಗಿ ಪಕ್ಷ ಕಟ್ಟಿದವರನ್ನು ಸರ್ಕಾರ ಮೂಲೆಗುಂಪು ಮಾಡುತ್ತಿದೆ. ಹೆಚ್. ವಿಶ್ವನಾಥ್ ಹೇಳುವುದರಲ್ಲಿ ಸತ್ಯವಿದೆ. ವಿಶ್ವನಾಥ್ ಸೋಲಿಗೆ ಯೋಗೇಶ್ ಕುಮಾರ್ ಕಾರಣರಾಗಿ ದ್ದಾರೆ. ಅವರನ್ನು ಇದೀಗ ಮಂತ್ರಿ ಮಾಡ ಲಾಗಿದೆ. ಪಕ್ಷದ ಘನತೆ ಉಳಿಸಿದವ ರನ್ನು ಕಡೆಗಣನೆ ಮಾಡಲಾಗಿದೆ. ಹೈಕಮಾಂಡ್‌ಗೆ ಈ ಬಗ್ಗೆ ತಿಳಿಸಲಾಗು ತ್ತದೆ. ಕೆಲವೇ ದಿನದಲ್ಲಿ ರಾಷ್ಟç ನಾಯಕ ರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಲಾಗುತ್ತದೆ ಎಂದರು.
ಜಮೀರ್ ಆಹಮ್ಮದ್ ಕ್ಷೇತ್ರಕ್ಕೆ ರೂ ೨೦೦ ಕೋಟಿ ಅನುದಾನ ನೀಡಿರು ವುದು ಸರಿಯಲ್ಲ. ಕೊಡಗು ಜಿಲ್ಲೆಗೆ ಅನುದಾನ ಅವಶ್ಯಕತೆ ಇದೆ. ಅಭಿವೃದ್ಧಿ ಯಾಗಿರುವ ನಗರ ಪ್ರದೇಶಕ್ಕೆ ಯಾಕಿಷ್ಟು ಅನುದಾನ ಎಂದು ಪ್ರಶ್ನಿಸಿದರು.