ಚೆಟ್ಟಳ್ಳಿ, ಜ. ೧೬ : ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ವತಿಯಿಂದ ಕೊಡಗು ಜಿಲ್ಲಾ ಮಹಿಳಾ ಫುಟ್ಬಾಲ್ ತಂಡದ ಆಯ್ಕೆ ಪ್ರಕ್ರಿಯೆ ತಾ. ೨೪ ರಂದು ನಡೆಯಲಿದೆ.
ಅಮ್ಮತ್ತಿಯ ಪ್ರೌಢಶಾಲಾ ಮೈದಾನದಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಆಸಕ್ತ ಮಹಿಳಾ ಕ್ರೀಡಾಪಟುಗಳು ಭಾಗವಹಿಸಲು ಕೊಡಗು ಫುಟ್ಬಾಲ್ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಯಾವುದೇ ವಯೋಮಾನದ ಅಭ್ಯಂತರವಿಲ್ಲ. ಭಾಗವಹಿಸುವ ಕ್ರೀಡಾಪಟುಗಳು, ಕ್ರೀಡಾ ಉಡುಪುಗಳನ್ನು ಅವರೇ ತರತಕ್ಕದ್ದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ನಾಗೇಶ್ ಪಿ.ಎ. ೯೫೩೫೫೩೧೨೪೪, ದೇಚಮ್ಮ ೯೪೮೨೬೬೮೮೩೯, ಇಬ್ರಾಹಿಂ ೮೬೧೮೩೦೩೬೨೩ ಸಂಪರ್ಕಿಸಲು ಕೋರಿದೆ.