ಶನಿವಾರಸಂತೆ, ಜ. ೧೬: ಅತೀ ವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿದ ಕಾರು ಚರಂಡಿಗೆ ಮಗುಚಿದ ಘಟನೆ ಸಮೀಪದ ಹಿಪ್ಲಿ ಗೇಟ್ ಬಳಿ ನಡೆದಿದೆ. ಬಡಬನ ಹಳ್ಳಿಯ ನಿವಾಸಿ ದಿಲೀಪ್ ಎಂಬವರು ಚಲಾಸುತ್ತಿದ್ದ ಸ್ವಿಫ್ಟ್ ಕಾರು (ಕೆಎ ೧೨ ಎಂಎ ೭೭೧೨) ಪಲ್ಟಿಯಾದ ಪರಿಣಾಮ ಕಾರು ಜಖಂಗೊAಡಿದೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.