ಮಡಿಕೇರಿ, ಜ. ೧೬: ವೀರಾಜಪೇಟೆ ತಾಲೂಕು ವ್ಯಾಪ್ತಿಯ ಕಾಫಿ ಬೆಳೆಗಾರರ ತೋಟಗಳ ಲೈನ್ಮನೆಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡ ಜನಾಂಗದ ಲೈನ್ಮನೆ ಸರ್ವೆ ಕಾರ್ಯವನ್ನು ಗ್ರಾಮ ಪಂಚಾಯಿತಿ ಹಂತದಲ್ಲಿ ನಡೆಸಲಾಗಿದ್ದು, ಕೆಲವು ಕುಟುಂಬಗಳನ್ನು ಕೈಬಿಟ್ಟಿರುವುದು ತಿಳಿದುಬಂದಿದೆ. ಲೈನ್ಮನೆಗಳಲ್ಲಿ ವಾಸಿಸುತ್ತಿರುವ ಜನರಿಗೆ ಇಲಾಖೆ ವತಿಯಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಕುಟುಂಬಗಳ ವಿಳಾಸ ಮತ್ತು ವಿವರ ಅಗತ್ಯವಿರುವುದರಿಂದ ಅವರುಗಳು ವಾಸಿಸುತ್ತಿರುವ ಪಂಚಾಯಿತಿ ವ್ಯಾಪ್ತಿಯ ಪಂಚಾಯಿತಿ ಕೇಂದ್ರಗಳಲ್ಲಿ ಹೆಸರನ್ನು ನಮೂದಿಸಿಕೊಳ್ಳುವಂತೆ ವೀರಾಜಪೇಟೆ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.