ಸುಂಟಿಕೊಪ್ಪ, ಜ. ೧೫: ತಾ.೧೪ ರ ರಾತ್ರಿವೇಳೆ ಸುಂಟಿಕೊಪ್ಪದ ಬಳಿ ರಾಷ್ಟಿçÃಯ ಹೆದ್ದಾರಿಯಲ್ಲಿ ಚಾಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಅಚಾನಕ್ಕಾಗಿ ಕೆರೆಗೆ ಮಗುಚಿದ ಪರಿಣಾಮ ಕಾರಿನಲ್ಲಿದ್ದ ಚಾಲಕನ ಪತ್ನಿ ಹಾಗೂ ಮಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಮಡಿಕೇರಿ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆಯ ಪ್ರಥಮದರ್ಜೆ ಗುಮಾಸ್ತನಾಗಿರುವ ವೆಂಕಟೇಶ್ ತಾ.೧೪ ರಂದು ಪುತ್ತೂರಿಗೆ ತಮ್ಮ ಪತ್ನಿ ಹಾಗೂ ಮಗಳೊಂದಿಗೆ ತೆರಳಿದ್ದರು. ವೆಂಕಟೇಶ್ ಅವರ ಮಗ ಪುತ್ತೂರಿನ ಅಂಬಿಕಾ ಕಾಲೇಜಿನಲ್ಲಿ ಪಿ.ಯು. ವಿದ್ಯಾಭ್ಯಾಸ ಮಾಡುತ್ತಿದ್ದು ಕಾಲೇಜು ಶುಲ್ಕ ಪಾವತಿಸಲೆಂದು ತಮ್ಮ ಪತ್ನಿ ಬಬಿತಾ (೪೨) ಹಾಗೂ ಮಗಳು ಸುಂಟಿಕೊಪ್ಪ, ಜ. ೧೫: ತಾ.೧೪ ರ ರಾತ್ರಿವೇಳೆ ಸುಂಟಿಕೊಪ್ಪದ ಬಳಿ ರಾಷ್ಟಿçÃಯ ಹೆದ್ದಾರಿಯಲ್ಲಿ ಚಾಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಅಚಾನಕ್ಕಾಗಿ ಕೆರೆಗೆ ಮಗುಚಿದ ಪರಿಣಾಮ ಕಾರಿನಲ್ಲಿದ್ದ ಚಾಲಕನ ಪತ್ನಿ ಹಾಗೂ ಮಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಮಡಿಕೇರಿ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆಯ ಪ್ರಥಮದರ್ಜೆ ಗುಮಾಸ್ತನಾಗಿರುವ ವೆಂಕಟೇಶ್ ತಾ.೧೪ ರಂದು ಪುತ್ತೂರಿಗೆ ತಮ್ಮ ಪತ್ನಿ ಹಾಗೂ ಮಗಳೊಂದಿಗೆ ತೆರಳಿದ್ದರು. ವೆಂಕಟೇಶ್ ಅವರ ಮಗ ಪುತ್ತೂರಿನ ಅಂಬಿಕಾ ಕಾಲೇಜಿನಲ್ಲಿ ಪಿ.ಯು. ವಿದ್ಯಾಭ್ಯಾಸ ಮಾಡುತ್ತಿದ್ದು ಕಾಲೇಜು ಶುಲ್ಕ ಪಾವತಿಸಲೆಂದು ತಮ್ಮ ಪತ್ನಿ ಬಬಿತಾ (೪೨) ಹಾಗೂ ಮಗಳು ಮೃತದೇಹ ದೊರೆತಿರಲ್ಲಿಲ್ಲ. ಬಳಿಕ ರಾತ್ರಿ ೧೧ ಗಂಟೆಗೆ ಕಾರು ಹಾಗೂ ಕಾರಿನಲ್ಲಿ ಸಿಲುಕಿಕೊಂಡಿದ್ದ ಬಾಲಕಿಯ ಮೃತದೇಹವನ್ನು ಹೊರತೆಗೆಯಲಾಯಿತು.
ಸ್ಥಳಕ್ಕೆ ಸೋಮವಾರಪೇಟೆ ಡಿ.ವೈ.ಎಸ್.ಪಿ ಶೈಲೇಂದ್ರ, ವೃತ್ತ ನಿರೀಕ್ಷಕ ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಪುನೀತ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಮ್ಮ- ಮಗಳು ಸಾವು : ಅಪ್ಪ- ಮಗನ ಆಕ್ರಂದನ
ಕಣಿವೆ : ಮಗನನ್ನು ನೋಡಲು ಮನೆಯಿಂದ ಕಾರಿನಲ್ಲಿ ತೆರಳಿದ ಅಮ್ಮ ಮಗಳು ಶವವಾಗಿ ಬಂದಾಗ ಕುಶಾಲನಗರದ ಸೋಮೇಶ್ವರ ಬಡಾವಣೆಯ ಅರಣ್ಯ ಇಲಾಖೆ ನೌಕರ ವೆಂಕಟೇಶ ಅವರ ಮನೆಯಲ್ಲಿ ಶೋಕ ತುಂಬಿತ್ತು.
ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಅಮ್ಮ ಹಾಗೂ ಮಗಳ ಶವವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಯ ಬಳಿಕ ಮಧ್ಯಾಹ್ನ ೨ ಗಂಟೆಗೆ ಕುಶಾಲನಗರದ ಮನೆಗೆ ಅಮ್ಮ ಮಗಳ ಪಾರ್ಥಿವ ಶರೀರಗಳನ್ನು ತಂದಾಗ ನೆರೆದಿದ್ದವರೆಲ್ಲರ ಕಣ್ಣಾಲಿಗಳು ತೇವವಾಗಿದ್ದವು. ಅಯ್ಯೋ ವಿಧಿ ಹೀಗೂ ಉಂಟಾ ಎಂದು ಬಹುತೇಕ ಮಂದಿ ಶಪಿಸಿದರು. ಪುತ್ತೂರಿನಿಂದ ಕುಶಾಲನಗರಕ್ಕೆ ಆಗಮಿಸುವಾಗ ಮಾರ್ಗ ಮಧ್ಯೆ
(ಮೊದಲ ಪುಟದಿಂದ) ಸಂಪಾಜೆಯಲ್ಲಿ ಮೃತ ಬಬಿತಾ ಅವರ ಚಿಕ್ಕಮ್ಮನ ಮನೆಯಿದ್ದು ಅವರ ಮನೆಗೆ ತೆರಳಿ ಅಲ್ಲಿಯೇ ರಾತ್ರಿ ಊಟ ಮುಗಿಸಿ ಹೊರಟರು ಎಂದು ತಿಳಿದು ಬಂದಿದೆ.
ಮಡಿಕೇರಿಗೆ ರಾತ್ರಿ ೯.೧೫ಕ್ಕೆ ಬಂದವರು ನೇರ ಕುಶಾಲನಗರಕ್ಕೆ ಬರುವಾಗ ಹೆದ್ದಾರಿಯ ಬಾಳೆಕಾಡು ತೋಟದ ಬಳಿ ನಿಯಂತ್ರಣ ತಪ್ಪಿದ ಕಾರು ಕೆರೆಯೊಳಗೆ ಮಗುಚಿದೆ.
ಕಾರಿನೊಳಗಿದ್ದ ವೆಂಕಟೇಶ್ ಪತ್ನಿ ಬಬಿತಾ ಹಾಗೂ ಮಗಳು ಪಲ್ಲವಿಯ ಹುಡುಕಾಟ ಕತ್ತಲಲ್ಲಿ ನಡೆಸಿದರಾದರೂ ಪ್ರಕ್ರಿಯೆ ವಿಳಂಬವಾದ್ದರಿAದ ನೀರಿನಲ್ಲಿ ಎರಡು ಜೀವಗಳ ಪ್ರಾಣಪಕ್ಷಿ ಹಾಗಿ ಹೋಗಿದೆ.
ಮಗನನ್ನು ನೋಡಲು ತೆರಳಿದ್ದ ಕುಟುಂಬ ವರ್ಗ ಪುತ್ತೂರಿನ ಅಂಬಿಕಾ ಕಾಲೇಜಿನ ಪ್ರಾಂಶುಪಾಲರು ವ್ಯಾಸಂಗದ ಹಿತದೃಷ್ಟಿಯಿಂದ ಮಗ ಸೂರ್ಯನನ್ನು ಮನೆಗೆ ಕಳುಹಿಸದೆ ಇದ್ದುದರಿಂದ ಜೊತೆಯಲ್ಲಿ ಬರಬೇಕಿದ್ದ ಮಗ ಬದುಕುಳಿದ ಎಂದು ಹೇಳಲಾಗುತ್ತಿದೆ.
ಮೃತ ಬಾಲಕಿ ಪಲ್ಲವಿ ಶವವಾಗಿ ಮನೆಗೆ ಬಂದಾಗ ಮನೆಯಲ್ಲಿ ಆಕೆ ಮುದ್ದಿನಿಂದ ಸಾಕಿದ್ದ ಶ್ವಾನಗಳಾದ ಸ್ಕೂಬಿ ಹಾಗೂ ಬಾಕ್ಸಿ ಕಂಬನಿ ಮಿಡಿಯುತ್ತಿದ್ದ ಚಿತ್ರಣ ಹೃದಯ ಕಲಕುವಂತಿತ್ತು.
ಮೃತ ಪಲ್ಲವಿ ತಾನು ಕೂಡ ಚೆನ್ನಾಗಿ ವ್ಯಾಸಾಂಗ ಮಾಡಿ ಪಕ್ಕದ ಮನೆಯ ದೀಪಿಕಾ ಅಕ್ಕನ ಹಾಗೆ ಡಾಕ್ಟರ್ ಆಗುವುದಾಗಿ ಯಾವಾಗಲೂ ಅಮ್ಮನ ಜೊತೆÀ ಹೇಳಿಕೊಳ್ಳುತ್ತಿದ್ದಳೆಂದು ಪಲ್ಲವಿ ತಂದೆ ವೆಂಕಟೇಶ ಹೇಳ ಹೇಳುತ್ತಲೇ ದುಃಖಭರಿತರಾದರು.
ಇನ್ನು ಶವವಾಗಿ ಮಲಗಿದ್ದ ಅಮ್ಮ ಹಾಗೂ ತಂಗಿಯನ್ನು ಕಂಡ ಮಗ ಸೂರ್ಯನ ಕಣ್ಣುಗಳಲ್ಲಿ ಕತ್ತಲೆ ಆವರಿಸಿತ್ತು.
ವಿದ್ಯಾರ್ಥಿನಿ ಪಲ್ಲವಿಯ ಅಂತಿಮ ದರ್ಶನ ಮಾಡಲು ಆಗಮಿಸಿದ್ದ ಫಾತಿಮ ಶಾಲೆಯ ಮುಖ್ಯ ಶಿಕ್ಷಕಿ ರೊಮೊನಾ ಕೋಟ್ಸ್ ಹಾಗೂ ಶಿಕ್ಷಕರು ಕಂಬನಿ ಮಿಡಿದರು.
ಅರಣ್ಯ ಇಲಾಖೆಯ ಸಿಸಿಎಫ್ ಟಿ. ಹಿರೇಲಾಲ್ ನೇತೃತ್ವದ ಅಧಿಕಾರಿಗಳ ತಂಡ ಧಾವಿಸಿ ಅಂತಿಮ ದರ್ಶನ ಮಾಡಿದರು.
ಅರೆಗೌಡ ಸಮುದಾಯದ ಪದ್ಧತಿಯಂತೆ ವಿಧಿ ವಿಧಾನಗಳನ್ನು ಪೂರೈಸಿ ಕುಶಾಲನಗರದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.