ಕಣಿವೆ, ಜ. ೧೫: ಭಾರತೀಯ ಜನತಾ ಪಕ್ಷವನ್ನು ಸಮರ್ಥವಾಗಿ ಹಾಗೂ ಬಲಿಷ್ಠವಾಗಿ ಕೊಡಗು ಜಿಲ್ಲೆಯಲ್ಲಿ ಕಟ್ಟಿ ಬೆಳೆಸಿರುವ ನಮ್ಮನ್ನು ಪಕ್ಷದ ಹೈಕಮಾಂಡ್ ಕಡೆಗಣಿಸುತ್ತಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನ ವ್ಯಕ್ತಪಡಿಸಿದರು.ಶುಕ್ರವಾರ ಬೆಳಿಗ್ಗೆ ಶಾಸಕರ ನಿವಾಸದಲ್ಲಿ ನಡೆದ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ೨೫ ವರ್ಷಗಳಿಂದಲೂ ಬಿಜೆಪಿಯನ್ನು ತಳ ಮಟ್ಟದಿಂದ ಸಂಘಟಿಸಿ ಕಟ್ಟಿ ಬೆಳೆಸುತ್ತಿರುವ ನಮ್ಮನ್ನು ಹೈಕಮಾಂಡ್ ಹೀಗೆ ಕಡೆಗಣಿಸುವುದು ಸರಿಯಲ್ಲ.ನಾನು ಬೇರೆಯವರ ರೀತಿ ಪಕ್ಷದ ತತ್ವ ಸಿದ್ಧಾಂತಗಳ ವಿರುದ್ಧ ಬೀದಿ ಗಿಳಿದು ಹೋರಾಟ ನಡೆಸುವ ಜಾಯಮಾನದವನೂ ಅಲ್ಲ. ಲಾಭಿ ಮಾಡುವವನು ಅಲ್ಲ. ನಮ್ಮ ಕಾರ್ಯ ಕರ್ತರು ಹೇಳುವುದನ್ನು ಕೇಳುವವನು ನಾನು ಎಂದು ನುಡಿದರು. ಈ ಬಾರಿಯ ಸಂಪುಟದ ವಿಸ್ತರಣೆ ಸಮಯದಲ್ಲಿ ಮತ್ತೆ ನನ್ನನ್ನು ಕಡೆಗಣಿಸಿ ರುವುದರ ಮೊದಲ ಪುಟದಿಂದ) ವಿರುದ್ಧ ಪಕ್ಷದ ಹೈಕಮಾಂಡ್ ಹಾಗೂ ಸಂಘ ಪರಿವಾರದ ಜೊತೆ ಮತ್ತೆ ಮಾತನಾಡಲಿದ್ದೇನೆ. ಸಂಪುಟದಲ್ಲಿ ಅವಕಾಶ ಸಿಗದ ಇನ್ನಿತರ ಶಾಸಕರು ನನಗೆ ಕರೆ ಮಾಡಿ ಬೆಂಗಳೂರಿಗೆ ಆಹ್ವಾನಿಸಿದ್ದಾರೆ. ಶನಿವಾರ ಬೆಂಗಳೂರಿಗೆ ತೆರಳಿ ಅವರ ಜೊತೆಯೂ ಚರ್ಚೆ ನಡೆಸಲಿದ್ದೇನೆ.ಒಟ್ಟಾರೆ ಪಕ್ಷದೊಳಗೆ ನಡೆಯುತ್ತಿರುವ ಬೆಳವಣಿಗೆಗಳು ನನಗೆ ಬೇಸರ ತರಿಸಿವೆ ಎಂದು ಅವರು ನೋವು ತೋಡಿಕೊಂಡರು. ಕಷ್ಟಪಟ್ಟು ಪಕ್ಷ ಕಟ್ಟಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿರುವ ನನ್ನನ್ನು ಪಕ್ಷ ನಡೆಸಿಕೊಳ್ಳುತ್ತಿರುವ ರೀತಿಯ ವಿರುದ್ಧ ಬೇಸರವಿದೆ ಎಂದು ‘ಶಕ್ತಿ’ಯೊಂದಿಗೆ ಅಸಮಾಧಾನ ಹೊರಹಾಕಿದರು.
ಇದೇ ಸಂದರ್ಭ ಹೆಬ್ಬಾಲೆ ಜಿಲ್ಲಾ ಪಂಚಾಯಿತಿ ಸದಸ್ಯ ಶ್ರೀನಿವಾಸ್ ನೇತೃತ್ವದಲ್ಲಿ ಶಾಸಕರ ಹೊಸತೋಟದ ನಿವಾಸಕ್ಕೆ ಶುಕ್ರವಾರ ಬೆಳಿಗ್ಗೆ ತೆರಳಿದ ಪಕ್ಷದ ಕಾರ್ಯಕರ್ತರು ಮುಖ್ಯಮಂತ್ರಿಗಳು ಕೂಡಲೇ ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು. ಇದೇ ಸಂದರ್ಭ ಶಾಸಕರ ಜೊತೆ ಸಮಾಲೋಚಿಸಿದರು.