ಶನಿವಾರಸಂತೆ, ಜ. ೧೩: ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಬಳೂರು ಗ್ರಾಮದಲ್ಲಿ ತಾ. ೧೫ ರಂದು ಶ್ರೀ ಬಾಣಂತಮ್ಮ ಮತ್ತು ಶ್ರೀ ಕುಮಾರಲಿಂಗೇಶ್ವರ ಜಾತ್ರಾ ಮಹೊತ್ಸವ ನಡೆಯಲಿದೆ.
ಪ್ರತಿ ವರ್ಷ ಮಕರ ಸಂಕ್ರಾತಿಯ ಮಾರನೇ ದಿನ ನಡೆಯುವ ಈ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಇಲ್ಲಿ ಭಕ್ತಾದಿಗಳ ಹರಕೆ ಈಡೇರುತ್ತದೆ ಎಂಬ ನಂಬಿಕೆಯೂ ಜನ ಮನದಲ್ಲಿದ್ದು ಜಾತ್ರೆಗೆ ಕೊಡ್ಲಿಪೇಟೆ, ಯಸಳೂರು, ಶನಿವಾರಸಂತೆ, ಹಂಡ್ಲಿ ಇತ್ಯಾದಿ ಊರುಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ.
ತಾ. ೧೪ ರಂದೇ ಶ್ರೀ ಬಾಣಂತಮ್ಮ ಜಾತ್ರೆಯ ಪೂಜಾ ಕಾರ್ಯಕ್ರಮಗಳು ಆರಂಭಗೊಳ್ಳು ತ್ತವೆ. ಅಂದು ಬೆಳಗ್ಗೆಯಿಂದ ಸಂಜೆಯ ತನಕ ಮಡೆಪೂಜೆಗಾಗಿ ಭಕ್ತಾದಿಗಳಿಂದ ಹರಕೆಯ ರೂಪದಲ್ಲಿ ಅಕ್ಕಿ, ಬೆಲ್ಲ, ತರಕಾರಿಗಳನ್ನು ಊರ ಪಟೇಲರ ಮನೆಯಲ್ಲಿ ಬಾಣಂತಮ್ಮ ಜಾತ್ರೆಯ ಪೂಜಾ ಕಾರ್ಯಕ್ರಮಗಳು ಆರಂಭಗೊಳ್ಳು ತ್ತವೆ. ಅಂದು ಬೆಳಗ್ಗೆಯಿಂದ ಸಂಜೆಯ ತನಕ ಮಡೆಪೂಜೆಗಾಗಿ ಭಕ್ತಾದಿಗಳಿಂದ ಹರಕೆಯ ರೂಪದಲ್ಲಿ ಅಕ್ಕಿ, ಬೆಲ್ಲ, ತರಕಾರಿಗಳನ್ನು ಊರ ಪಟೇಲರ ಮನೆಯಲ್ಲಿ ವಾದ್ಯಗೋಷ್ಠಿಯೊಂದಿಗೆ ಬಾಣಂತಮ್ಮನ ಕೆರೆಯ ಬಳಿ ಕೊಂಡೊಯ್ಯುತ್ತಾರೆ. ಉಪವಾಸ ಇದ್ದವರು ರಾತ್ರಿ ಅಲ್ಲಿಯೇ ಉಳಿದುಕೊಂಡು, ಅಡುಗೆ ಮಾಡಿ ಮಾರನೇ ದಿನ ದೇವರಿಗೆ ಎಡೆ ಇಟ್ಟು, ಜಾತ್ರೆಗೆ ಬಂದ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ನೀಡುತ್ತಾರೆ.
ತಾ. ೧೫ ರಂದು ಬೆಳಿಗ್ಗೆ ೯ ಗಂಟೆಯಿAದಲೇ ಜಾತ್ರೆ ಆರಂಭವಾಗಿ ಶ್ರೀ ಬಾಣಂತಮ್ಮನನ್ನು ಪೂಜಿಸಿ, ಮೆರವಣಿಗೆ ಮಾಡಲಾಗುತ್ತದೆ. ೧ ಗಂಟೆಗೆ ಪೂಜಾ ವಿಧಿ-ವಿಧಾನಗಳು ಪೂರ್ಣಗೊಳ್ಳುತ್ತವೆ. ಮಧ್ಯಾಹ್ನ ೨ ಗಂಟೆಗೆಯಿAದ ಶ್ರೀ ಕುಮಾರ ಲಿಂಗೇಶ್ವರ ಜಾತ್ರೆ ಪ್ರಾರಂಭವಾಗಿ ಸಂಜೆ ೫ ಗಂಟೆಗೆ ಮುಕ್ತಾಯಗೊಂಡು, ಜಾತ್ರೆಗೆ ತೆರೆ ಬೀಳುತ್ತದೆ.