ಮಡಿಕೇರಿ, ಜ. ೧೨: ಮಡಿಕೇರಿ ತಾಲೂಕಿನ ಕೋಡಂಬೂರಿನ ನಿವಾಸಿ ಶ್ಯಾಮ್ ಮಾಚಯ್ಯ (೨೯) ತಾ. ೭ ರಂದು ತಮ್ಮ ತಾಯಿಯ ಬಳಿ ಮೂರ್ನಾಡಿಗೆ ಹೋಗುವುದಾಗಿ ಮನೆಯಿಂದ ತೆರಳಿದ್ದು, ಮನೆಗೆ ಹಿಂತಿರುಗಿಲ್ಲ ಎಂದು ಅವರ ತಾಯಿ ಲೀಲಾ ಅವರು ದೂರು ನೀಡಿದ್ದಾರೆ. ವ್ಯಕ್ತಿ ಪತ್ತೆಯಾದಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ, ದೂ: ೦೮೨೭೨-೨೨೦೧೦೦ ಸಂಪರ್ಕಿಸಲು ಕೋರಿದೆ.