ಕಡಂಗ, ಜ. ೧೨: ನಂ. ೩೬೮ನೇ ಅರಪಟ್ಟು ಮತ್ತು ಕರಡ ವಿವಿದ್ದೋದ್ದೇಶ ಸಹಕಾರ ಧವಸ ಭಂಡಾರ ನಿಯಮಿತ ಇದರ ನೂತನ ಗೋದಾಮು ಕಟ್ಟಡ ಮತ್ತು ಅಂಗಡಿ ಮಳಿಗೆಯನ್ನು ಸಂಘದ ಅಧ್ಯಕ್ಷ ನಂಬಿಯಪAಡ ಮಣಿ ಅಯ್ಯಮ್ಮ ಉದ್ಘಾಟಿಸಿದರು. ೨ ಅಂಗಡಿ ಮಳಿಗೆಗಳನ್ನು ಕೆನರಾ ಬ್ಯಾಂಕು ಅರಪಟ್ಟು ಶಾಖೆಯ ವ್ಯವಸ್ಥಾಪಕ ರಾಹುಲ್ನಾಥ್ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕಡಂಗ ಶಾಖೆಯ ವ್ಯವಸ್ಥಾಪಕ ಕೆ. ನಾರಾಯಣ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ದವಸ ಭಂಡಾರದ ಉಪಾಧ್ಯಕ್ಷ ಮುಕ್ಕಾಟಿರ ಕಿರಣ್ ಬೋಪಯ್ಯ, ಆಡಳಿತ ಮಂಡಳಿ ಸದಸ್ಯರಾದ ನೆರಪಂಡ ದೀನಾ ನಾಣಯ್ಯ, ಕೋಡೀರ ಡಾಲಿ ಸುಬ್ರಮಣಿ, ಬೇಪಡಿಯಂಡ ಟಿ. ಕಟ್ಟಿ ಸುಬ್ಬಯ್ಯ, ಚೆಲುವಂಡ ಕೆ. ಕಸ್ತೂರಿ, ದೇಯಿರ ಸುಭಾಷ್ ಭೀಮಯ್ಯ, ಕೈಪಂಗಡ ವಿಠಲ ಉತ್ತಪ್ಪ ಹಾಗೂ ಕಡಂಗ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೋಡೀರ ಪ್ರಸನ್ನ ತಮ್ಮಯ್ಯ ಉಪಸ್ಥಿತರಿದ್ದರು. ಅಲ್ಲದೆ ನೂತನ ಗ್ರಾಮ ಪಂಚಾಯಿತಿ ಸದಸ್ಯ ಕೋಡೀರ ವಿನೋದ್ ನಾಣಯ್ಯ ಮತ್ತು ಇತರ ನೂತನ ಸದಸ್ಯರು ಉಪಸ್ಥಿತರಿದ್ದರು.