ಮಡಿಕೇರಿ, ಜ. ೧೨: ತಾಲೂಕಿನ ಕೆ. ನಿಡುಗಣೆ ಗ್ರಾಮ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ ೯೪ ಎಕರೆ ವಿಸ್ತೀರ್ಣದ ಜಾಗದಲ್ಲಿ ವಸತಿ ಉದ್ದೇಶಕ್ಕೆ ಕರ್ನಾಟಕ ಗೃಹ ಮಂಡಳಿ ಕೋರಿರುವ ಪ್ರಸ್ತಾವನೆಗೆ ಒಪ್ಪಿಗೆ ನೀಡಲು ಇತ್ತೀಚೆಗೆ ನಡೆದ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ಅನುಮೋದನೆ ದೊರೆತಿದೆ ಎಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ರಮೇಶ್ ಹೊಳ್ಳ ತಿಳಿಸಿದ್ದಾರೆ. ನಗರದ ಸುದರ್ಶನ ಅತಿಥಿ ಗೃಹದಲ್ಲಿ ಇತ್ತೀಚೆಗೆ ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಅವರ ಉಪಸ್ಥಿತಿ ಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಸತಿ ಉದ್ದೇಶ ವಿನ್ಯಾಸದ ನಕ್ಷೆಗೆ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.೯೪ ಎಕರೆ ಜಾಗದಲ್ಲಿ ಇಡಬ್ಲುö್ಯಎಸ್ (೪೩೯), ಎಲ್‌ಐಜಿ (೨೧೧), ಎಂಐಜಿ (೧೪೫), ಎಚ್‌ಐಜಿ-೧(೨೧೯), ಎಚ್‌ಐಜಿ-೨(೧೨೬) ಒಟ್ಟು ೧,೧೪೦ ನಿವೇಶನ ಒಳಗೊಂಡ ನಕಾಶೆ ಗೃಹದಲ್ಲಿ ಇತ್ತೀಚೆಗೆ ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಅವರ ಉಪಸ್ಥಿತಿ ಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಸತಿ ಉದ್ದೇಶ ವಿನ್ಯಾಸದ ನಕ್ಷೆಗೆ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.೯೪ ಎಕರೆ ಜಾಗದಲ್ಲಿ ಇಡಬ್ಲುö್ಯಎಸ್ (೪೩೯), ಎಲ್‌ಐಜಿ (೨೧೧), ಎಂಐಜಿ (೧೪೫), ಎಚ್‌ಐಜಿ-೧(೨೧೯), ಎಚ್‌ಐಜಿ-೨(೧೨೬) ಒಟ್ಟು ೧,೧೪೦ ನಿವೇಶನ ಒಳಗೊಂಡ ನಕಾಶೆ (ಮೊದಲ ಪುಟದಿಂದ) ಅಭಿವೃದ್ಧಿ ಪಡಿಸಿರುವ ಗದ್ದಿಗೆ ಉದ್ಯಾನ ಅಭಿವೃದ್ಧಿಪಡಿಸಲು ರಾಜಾಸೀಟು ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿತ್ತು. ಆದರೆ ಉದ್ಯಾನವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದ ಕಾರಣ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದಿಂದಲೇ ಗದ್ದಿಗೆ ಉದ್ಯಾನವನ ಅಭಿವೃದ್ಧಿ ಪಡಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ನಗರದ ಡಿಎಆರ್ ಕ್ವಾರ್ಟ್ರಸ್ ಹಿಂಭಾಗದಲ್ಲಿನ ಕೆರೆಯ ಸುತ್ತಲೂ ಇರುವ ಸರ್ಕಾರಿ ಜಾಗದಲ್ಲಿ ಪ್ರಾಧಿಕಾರ ವತಿಯಿಂದ ಪಾತ್ ವೇ ಉದ್ಯಾನವನ್ನು ನಿರ್ಮಿಸಲು ಮುಂದಾಗುವAತೆ ಹೇಳಿದರು.

ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಎಂ.ಬಿ. ದೇವಯ್ಯ ಮಾತನಾಡಿ, ಮಡಿಕೇರಿ ನಗರದಲ್ಲಿ ವಾಹನ ನಿಲುಗಡೆಗೆ ತುಂಬಾ ತೊಂದರೆಯಾಗುತ್ತಿದ್ದು, ಯೋಗ್ಯ ಸ್ಥಳ ಗುರುತಿಸುವಂತಾಗಬೇಕು. ಆ ನಿಟ್ಟಿನಲ್ಲಿ ಮಡಿಕೇರಿ-ಮಂಗಳೂರು ರಾಷ್ಟಿçÃಯ ಹೆದ್ದಾರಿಯಲ್ಲಿ ಮೇಲುಸೇತುವೆ ನಿರ್ಮಿಸುವಂತಾಗಬೇಕು. ಈಗಿರುವ ಮಂಗಳೂರು-ಮೂರ್ನಾಡು ರಸ್ತೆಯ ಪ್ರವಾಸಿ ಮಂದಿರವನ್ನು ತೆರವುಗೊಳಿಸಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು ಎಂದರು.

ಈ ಸಂಬAಧ ರಾಷ್ಟಿçÃಯ ಹೆದ್ದಾರಿ ವಿಭಾಗದ ಪ್ರಾದೇಶಿಕ ಅಧಿಕಾರಿ ಅವರಿಗೆ ಪತ್ರ ಬರೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಮಡಿಕೇರಿ ನಗರದ ಅಭಿವೃದ್ಧಿ ಸಂಬAಧ ಕೋಟೆ ಆವರಣದ ಸುತ್ತಲೂ ಇರುವ ಜಾಗದಲ್ಲಿ ನಗರಸಭೆ ವತಿಯಿಂದ ಪಾತ್ ವೇ ವ್ಯವಸ್ಥೆ ಮಾಡಬೇಕು ಎಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ ಸಲಹೆ ಮಾಡಿದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಮಡಿಕೇರಿ ನಗರಾಭಿವೃದ್ಧಿಗೆ ಸಂಬAಧಿಸಿದAತೆ ಹಲವು ಸಲಹೆ, ಮಾರ್ಗದರ್ಶನ ನೀಡಿದರು.

ಮಡಿಕೇರಿ ನಗರ ಯೋಜನಾ ಆಯುಕ್ತೆ ಎಲ್. ಲಾವಣ್ಯ, ಪೌರಾಯುಕ್ತ ಎಸ್.ವಿ. ರಾಮದಾಸ್, ಸಜೀತ್, ಕೆ.ಕೆ. ಜಯಂತಿ ಇತರರು ಇದ್ದರು.