ನವದೆಹಲಿ, ಜ. ೧೨: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಕಳೆದ ೪೮ ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಸುಪ್ರೀಂ ಕೋರ್ಟ್, ಸಮಸ್ಯೆ ಬಗೆಹರಿಕೆಗೆ ಸಮಿತಿ ಯೊಂದನ್ನು ಮಂಗಳವಾರ ರಚನೆ ಮಾಡಿದ್ದು, ೩ ಕಾಯ್ದೆಗಳಿಗೆ ತಡೆ ನೀಡಿದೆ.ವಿವಾದಿತ ಕೃಷಿ ಮಸೂದೆ ಕುರಿತು ಸಲ್ಲಿಕೆಯಾಗಿರುವ ವಿವಿಧ ಅರ್ಜಿಗಳ ಕುರಿತು ವಿಚಾರಣೆ ನಡೆಸಿರುವ ಸರ್ವೋಚ್ಛ ನ್ಯಾಯಾಲಯವು, ಯಾವುದೇ ಶಕ್ತಿಗೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಈಗಿರುವ ಸಮಸ್ಯೆಯನ್ನು ನಾವು ಇತ್ಯರ್ಥ ಪಡಿಸಲೇಬೇಕಾಗಿದೆ. ಆದ್ದರಿಂದ ನಾವುಸಮಿತಿಯೊಂದನ್ನು ರಚನೆ ಮಾಡುತ್ತಿದ್ದೇವೆ. ಸಮಿತಿಯಲ್ಲಿ ಕಾಯ್ದೆ ಕುರಿತ ಸಾಧಕ ಹಾಗೂ ಬಾಧಕಗಳ ಕುರಿತು ಚರ್ಚೆ ನಡೆಸುತ್ತೇವೆ. ರೈತರು ಈ ಕುರಿತಾಗಿ ನಮ್ಮೊಂದಿಗೆ ಸಹಕಾರ ನೀಡಬೇಕೆಂದು ಹೇಳಿದೆ.ಕುರಿತು ವಿಚಾರಣೆ ನಡೆಸಿರುವ ಸರ್ವೋಚ್ಛ ನ್ಯಾಯಾಲಯವು, ಯಾವುದೇ ಶಕ್ತಿಗೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಈಗಿರುವ ಸಮಸ್ಯೆಯನ್ನು ನಾವು ಇತ್ಯರ್ಥ ಪಡಿಸಲೇಬೇಕಾಗಿದೆ. ಆದ್ದರಿಂದ ನಾವು ಸಮಿತಿಯೊಂದನ್ನು ರಚನೆ ಮಾಡುತ್ತಿದ್ದೇವೆ. ಸಮಿತಿಯಲ್ಲಿ ಕಾಯ್ದೆ ಕುರಿತ ಸಾಧಕ ಹಾಗೂ ಬಾಧಕಗಳ ಕುರಿತು ಚರ್ಚೆ ನಡೆಸುತ್ತೇವೆ. ರೈತರು ಈ ಕುರಿತಾಗಿ ನಮ್ಮೊಂದಿಗೆ ಸಹಕಾರ ನೀಡಬೇಕೆಂದು ಹೇಳಿದೆ.ಪ್ರಯತ್ನಿಸುತ್ತಿದ್ದೇವೆ. ಶಾಸನವನ್ನು ಅಮಾನತುಗೊಳಿಸುವ ಮತ್ತು ಸಮಿತಿಯನ್ನು ರಚನೆ ಮಾಡುವ ಅಧಿಕಾರ ನಮಗಿದೆ. ಸಮಿತಿಯು ನಮಗಾಗಿಯೇ ಆಗಿರುತ್ತದೆ. ನಮ್ಮೊಂದಿಗೆ ಸಹಕಾರ ನೀಡಬೇಕು. ಸಮಿತಿಯು ಯಾವುದೇ ಆದೇಶÀ ನೀಡುವುದಿಲ್ಲ. ಕಾಯ್ದೆ ಕುರಿತ ಸಾಧಕ, ಬಾಧಕಗಳನ್ನು ಪರಿಶೀಲಿಸಿ ಸಮಿತಿ ವರದಿ ಸಲ್ಲಿಸಲಿದೆ ಎಂದು ಹೇಳಿದ್ದಾರೆ.

ಸಮಿತಿಯನ್ನು ರಚನೆ ಮಾಡುವುದರಿಂದ ಕಾಯ್ದೆ ಕುರಿತು ನಮಗೆ ಸ್ಪಷ್ಟ ಚಿತ್ರಣ ಲಭಿಸಲಿದೆ. ನಮಗೆ ಈ ಕುರಿತು ಇನ್ನೂ ಯಾವುದೇ ವಾದ ಪ್ರತಿವಾದಗಳು ಬೇಕಿಲ್ಲ. ನಾವು ಸಮಸ್ಯೆ ಬಗೆಹರಿಸಲೇ ಬೇಕಿದೆ. ನಿಮಗೆ ಪ್ರತಿಭಟನೆ ನಡೆಸುವುದೇ ಬೇಕಿದ್ದರೆ, ಪ್ರತಿಭಟನೆ ನಡೆಸಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ರಾಮ್‌ಲೀಲಾ ಮೈದಾನ ಅಥವಾ

(ಮೊದಲ ಪುಟದಿಂದ) ಇತರ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲು ರೈತರು ಇಚ್ಚಿಸಿದರೆ ಅವರು ದೆಹಲಿ ಪೊಲೀಸ್ ಆಯುಕ್ತರಿಗೆ ಅನುಮತಿಗಾಗಿ ಅರ್ಜಿ ಸಲ್ಲಿಸಬಹುದು. ಇದನ್ನು ನಮ್ಮ ಆದೇಶದಲ್ಲಿ ಉಲ್ಲೇಖಿಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದರು. ಸಮಿತಿ ಈ ಪ್ರಕರಣದಲ್ಲಿ ನ್ಯಾಯಾಂಗ ಪ್ರಕ್ರಿಯೆಯ ಭಾಗವಾಗಿದೆ. ನಾವು ಕಾನೂನಿಗೆ ತಡೆ ನೀಡಲು ಚಿಂತಿಸುತ್ತಿದ್ದೇವೆ. ಆದರೆ ಅನಿರ್ದಿಷ್ಟಾವಧಿಯಾಗಿ ಅಲ್ಲ ಎಂದು ತಿಳಿಸಿದರು.

ಅರ್ಜಿದಾರರೊಬ್ಬರ ಪರ ಹಾಜರಾದ ವಕೀಲ ಹರೀಶ್ ಸಾಳ್ವೆಯರು ಮಾತನಾಡಿ, ಕಾನೂನುಗಳ ಜಾರಿಗೆ ನೀಡಲಾಗುವ ತಡೆಯನ್ನು ರಾಜಕೀಯ ವಿಜಯವೆಂದು ನೋಡಬಾರದು. ಕಾಯ್ದೆಗಳ ಬಗ್ಗೆ ವ್ಯಕ್ತವಾದ ಕಳವಳಗಳ ಗಂಭೀರ ಪರೀಕ್ಷೆ ಎಂಬAತೆ ಅದನ್ನು ನೋಡಬೇಕು ಎಂದು ಅಭಿಪ್ರಾಯಪಟ್ಟರು.

‘ಈ ಪ್ರತಿಭಟನೆ ಹಿಂದೆ ನಿಷೇಧಿತ ಸಂಸ್ಥೆ ಇದೆ ಎಂದು ವಾದಿಸಿದ ಅರ್ಜಿಯೊಂದು ನಮ್ಮ ಮುಂದೆ ಇದೆ. ಅಟಾರ್ನಿ ಜನರಲ್ ಅದನ್ನು ಒಪ್ಪುವರೇ ಅಥವಾ ನಿರಾಕರಿಸುವರೇ,' ಎಂದು ಮುಖ್ಯನ್ಯಾಯಮೂರ್ತಿ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ‘ಪ್ರತಿಭಟನೆಯಲ್ಲಿ ಖಲಿಸ್ತಾನಿಗಳು ನುಸುಳಿದ್ದಾರೆ ಎಂದು ನಾವು ಹೇಳಿದ್ದೇವೆ' ಎಂದರು. ಷೇಧಿತ ಸಂಘಟನೆ ಹೋರಾಟದ ತೆರೆಮರೆಯಲ್ಲಿದ್ದರೆ, ಆ ಬಗ್ಗೆ ನಮ್ಮ ಮುಂದೆ ಆರೋಪ ಮಾಡುತ್ತಿರುವವರು ನಾಳೆಯೊಳಗೆ ಅಫಿಡವಿಟ್ ಸಲ್ಲಿಸಿ ಎಂದು ಮುಖ್ಯನ್ಯಾಯಮೂರ್ತಿಗಳು ಅಟಾರ್ನಿ ಜನರಲ್‌ಗೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಅಟಾರ್ನಿ ಜನರಲ್, ಈ ಕುರಿತ ಅಫಿಡವಿಟ್ ಸಲ್ಲಿಸುವುದಾಗಿ ತಿಳಿಸಿದರು.

ಬಳಿಕ ಸುದೀರ್ಘ ವಿಚಾರಣೆ ಬಳಿಕ ವಿವಾದಿತ ೩ ಕಾಯ್ದೆಗಳಿಗೆ ತಡೆ ನೀಡಿದ ಸುಪ್ರೀಂಕೋರ್ಟ್, ತಜ್ಞರ ಸಮಿತಿಯನ್ನು ರಚನೆ ಮಾಡುವುದಾಗಿ ಪ್ರಕಟಿಸಿತು. ಸಮಿತಿಯಲ್ಲಿ ಬಿಕೆಯು ಅಧ್ಯಕ್ಷ ಭುಪಿಂದರ್ ಸಿಂಗ್ ಮಾನ್, ಕೃಷಿ ಅರ್ಥಶಾಸ್ತçಜ್ಞ ಅಶೋಕ್ ಗುಲಾಟಿ, ಒಳನೀತಿಗಳ ಮುಖ್ಯಸ್ಥ ಡಾ. ಪ್ರಮೋದ್ ಕುಮಾರ್ ಜೋಷಿ, ಅನಿಲ್ ಧನಾವತ್ ಇವರುಗಳನ್ನು ನೇಮಕ ಮಾಡಲಾಗಿದೆ.