ಶ್ರೀಮಂಗಲ, ಜ. ೧೨ : ಒಕ್ಕಾಮೆ-ತಕ್ಕಾಮೆ, ಮಣ್ಣ್-ಮನಸ್ಥಾನ, ಐನ್‌ಮನೆ, ಕೈಮಡ, ಮಂದ್ ಸಂಸ್ಕೃತಿ ನೈಜ ಕೊಡವಾಮೆಯಾಗಿದ್ದು, ಇದನ್ನು ಮನಪೂರ್ವಕವಾಗಿ ಗೌರವಿಸಿ ಆಚರಿಸಿಕೊಂಡು ಬಲಪಡಿಸಿದಾಗ ಕೊಡವ ಜನಾಂಗ ಸ್ವಾಭಾವಿಕವಾಗಿಯೆ ಗÀತವೈಭವವನ್ನು ಮರಳಿ ಪಡೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕೊಡವ ಸಂಸ್ಕೃತಿಯ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ನೆಲೆಗಟ್ಟುಗಳನ್ನು ಗಟ್ಟಿಗೊಳಿಸಲು ಮುಂದಾಗಬೇಕಾಗಿದೆ ಎಂದು ಯುಕೊ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜುಚಿಣ್ಣಪ್ಪ ಅವರು ಕರೆ ನೀಡಿದರು.
ಅಮ್ಮತ್ತಿ ಒಂಟಿಯAಗಡಿಯ ಬೈರನಾಡ್‌ನ ಪಚ್ಚಾಟ್ ಊರ್ ಮಂದ್‌ನಲ್ಲಿ ೭ನೇ ವರ್ಷದ ಯುಕೊ ಕೊಡವ ಮಂದ್ ನಮ್ಮೆಯ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದುವರೆಗೆ ಕೊಡವ ಜನಾಂಗದಲ್ಲಿ ಒಗ್ಗಟ್ಟು ಇಲ್ಲ ಎಂದು ಹಿರಿಯರು ಕೊರಗುತ್ತಿದ್ದರು. ಆದರೆ, ಹಿಂದಿನ ಕಾಲದಲ್ಲಿ ಒಗ್ಗಟ್ಟು ಇತ್ತು ಎಂಬುದು ಹಿರಿಯರ ಭಾವನೆ ಯಾಗಿತ್ತು. ಅದನ್ನು ಹುಡುಕಿಕೊಂಡು ಹೋದಾಗ ನಿರ್ಲಕ್ಷಿಸಲ್ಪಟ್ಟ ಮಂದ್ ತಕ್ಕಾಮೆ, ಒಕ್ಕಾಮೆ ವಿಚಾರ ಅರ್ಥ ವಾಗಿದೆ. ಇವುಗಳು ಕೊಡವರನ್ನು ಒಂದೆಡೆ ಸೇರಿಸುವ ತಾಣವಾಗಿದ್ದವು. ಇದರ ನೆರಳಿನಲ್ಲಿ ಬೆಳೆದ ಕೊಡವ ಎಂತಹ ಸವಾಲುಗಳನ್ನು ಮಾನಸಿಕ ಹಾಗೂ ದೈಹಿಕವಾಗಿ ಎದುರಿಸಲು ಸ್ವಾಭಾವಿಕ ವಾಗಿ ಸಜ್ಜಾಗಿರುತ್ತಾನೆ ಎಂದು ಹೇಳಿದರು.
ಕೊಡವ ಜನಾಂಗಕ್ಕೆ ಗುರು ಇಲ್ಲ ಎಂದು ಪರಿತಪಿಸುತ್ತಿದ್ದರು. ಆದರೆ, ತಕ್ಕಾಮೆ ಎನ್ನುವ
(ಮೊದಲ ಪುಟದಿಂದ) ಗುರು ಎಂಬ ಮಾಣಿಕ್ಯವನ್ನು ತಮಗೆ ಅರಿವಿಲ್ಲದಂತೆ ನಿರ್ಲಕ್ಷಿಸಿದ ಪರಿಣಾಮ ಕೊಡವರು ಸಮಸ್ಯೆಗೆ ಸಿಲುಕಿದರು. ಕೊಡವರು ಎಂದು ನಾಶವಾಗುವುದಿಲ್ಲ. ಕೊಡವರಿಗೆ ಶಾಪವಿದೆ ಎಂದು ಮಾನಸಿಕವಾಗಿ ಕುಗ್ಗಿಸುವ ಷಡ್ಯಂತ್ರ ನಡೆಯುತ್ತಿದೆ. ಕೊಡವರು ಈ ಮಣ್ಣಿನ ಅವಿಭಾಜ್ಯ ಅಂಗವಾಗಿದ್ದು, ಈ ಮಣ್ಣಿಗೆ ಕೊಡವರು ಬೇಕಾಗಿದ್ದಾರೆ. ಈ ನೆಲದಲ್ಲಿ ಕೊಡವರು ಎಂದು ಇರುವುದಿಲ್ಲವೋ ಅಂದು ಈ ಕೊಡಗು ಕೊಡಗಾಗಿ ಇರುವುದಿಲ್ಲ. ಅದು ಮರುಭೂಮಿಯಾಗುತ್ತದೆ ಎಂದು ಹೇಳಿದರು.
ಕಳೆದ ೭ ವರ್ಷಗಳಿಂದ ಮಂದ್ ನಮ್ಮೆ ನಡೆಸುವ ಮೂಲಕ ಜನಾಂಗದಲ್ಲಿ ಜಾಗೃತಿಯನ್ನು ತರಲಾಗಿದೆ. ಸಂಘಟನೆಯಿAದ ಮುಚ್ಚಿ ಹೋಗಿದ್ದ ೧೦-೧೫ ಮಂದ್‌ಗಳನ್ನು ತೆರೆಯಲಾಗಿದೆ. ಆದರೆ, ಜನಾಂಗದಲ್ಲಿ ಆದ ಜಾಗೃತಿಯಿಂದ ೨೦-೨೫ ಮಂದ್‌ಗಳು ಪುನರಾರಂಭವಾಗಿದೆ. ಮಂದ್ ನಮ್ಮೆ, ಜಬ್ಬೂಮಿ ಪಾದಯಾತ್ರೆಯಿಂದ ಸಾವಿರಾರೂ ಯುವಕರು ಜಾಗೃತರಾಗಿ ಕೊಡವಾಮೆ ಕಾಪಾಡಲು ಕಾರ್ಯೋನ್ಮುಖ ರಾಗಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮದಿಂದ ನನಗೆ ಯಾವುದೇ ಲಾಭವಿಲ್ಲ. ನಮ್ಮ ಸೇವೆ ಮತ್ತು ಪರಿಶ್ರಮದಿಂದ ರಾಜಕೀಯ ವಾಗಿ ಬೆಳೆಯಬಹುದಿತ್ತು. ಆದರೆ, ಅದು ನಮ್ಮ ಆಯ್ಕೆಯೂ ಅಲ್ಲ ಆಧ್ಯತೆಯೂ ಅಲ್ಲ. ಉನ್ನತ ಶಿಕ್ಷಣ, ಹಣಸಂಪಾದನೆ, ಐಷರಾಮಿ ಜೀವನವೇ ಪರಿಪೂರ್ಣ ಬದುಕಲ್ಲ. ಸಂಸ್ಕೃತಿಯನ್ನು ನಿರ್ಲಕ್ಷಿಸಿ ಯಾವುದೇ ಉನ್ನತ ಮಟ್ಟದಲ್ಲಿದ್ದರು ಅಲ್ಲಿ ನೆಮ್ಮದಿ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಫಿ.ಮಾ.ಕಾರ್ಯಪ್ಪ ಮತ್ತು ಜ.ತಿಮ್ಮಯ್ಯ ಫೋರಂನ ಅಧ್ಯಕ್ಷ ನಿವೃತ್ತ ಕರ್ನಲ್ ಕಂಡ್ರತAಡ ಸುಬ್ಬಯ್ಯ ಅವರು ಮಾತನಾಡಿ, ಯುಕೊ ಮಂದ್ ನಮ್ಮೆ ಜಾಗೃತಿಯಿಂದ ಮುಚ್ಚಿ ಹೋಗಿದ್ದ ಹಲವಾರು ಮಂದ್‌ಗಳು ತೆರೆದಿವೆ. ಮಂದ್‌ಗಳ ಮಹತ್ವವನ್ನು ಈ ಕಾರ್ಯಕ್ರಮ ಜಾಗೃತಿ ಮೂಡಿಸಿದೆ. ಮಂದ್ ಹಾಗೂ ತಕ್ಕಾಮೆಗಳು ಕೊಡವರಿಗೆ ಮಾರ್ಗದರ್ಶನವನ್ನು ನೀಡುತ್ತದೆ. ಇವುಗಳ ಪ್ರಾಮುಖ್ಯತೆಯನ್ನು ಯುಕೊ ಸಂಘಟನೆಯ ಕಾರ್ಯಕ್ರಮಗಳು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದೆ ಎಂದು ಪ್ರಶಂಶಿಸಿದರು.
ಮುಕ್ಕಾಟೀರ ಕ್ಯಾ. ರಘು ಮಾದಪ್ಪ ಮಾತನಾಡಿ, ಕೊಡವ ಜನಾಂಗ ದವರಿಗೆ ಐನ್‌ಮನೆ, ಕೈಮಡ, ಮಂದ್ ಪವಿತ್ರ ಸ್ಥಳವಾಗಿದ್ದು, ಇವುಗಳ ಆಚರಣೆ ಹಾಗೂ ರಕ್ಷಣೆಗೆ ಪ್ರಾಮುಖ್ಯತೆ ನೀಡಬೇಕಾಗಿದೆ. ಜಿಲ್ಲೆಯಲ್ಲಿರುವ ಹಲವಾರು ಮಂದ್‌ಗಳು ಆರ್‌ಟಿಸಿಯಲ್ಲಿ ಪೈಸಾರಿ ಎಂದು ಇದ್ದು, ಇವುಗಳನ್ನು ಸೂಕ್ತ ರೀತಿಯ ದಾಖಲಾತಿಯ ಮೂಲಕ ಕಾಪಾಡಬೇಕಾಗಿದೆ. ಬಲ್ಯಮನೆ, ಕೈಮಡ, ಮಂದ್‌ಗಳ ರಕ್ಷಣೆಗೆ ಟ್ರಸ್ಟ್ ಮಾಡುವುದು ಮುಖ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಡಾ. ಅಪ್ಪನೆರವಂಡ ಸೋನಿಯ ಮಂದಪ್ಪ ಅವರು ಮಾತನಾಡಿ ಕೊಡವರು ಜನ ಸಂಖ್ಯೆಯಲ್ಲಿ ಕಡಿಮೆಯಿದ್ದರು ದೇಶಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಇಂತಹ ಹಿನ್ನೆಲೆ ಇರುವ ಜನಾಂಗವನ್ನು ಕಾಪಾಡುವ ಜವಾಬ್ದಾರಿ ನಮ್ಮದಾಗಿದೆ. ಯಾವುದೇ ರೂಪದಲ್ಲಿಯಾದರೂ ಜನಾಂಗದ ಬೆಳವಣಿಗೆ, ರಕ್ಷಣೆಗೆ ಪೂರಕವಾದ ಕೊಡುಗೆಯನ್ನು ನೀಡುವ ನಿಟ್ಟಿನಲ್ಲಿ ಕೈ ಜೋಡಿಸಿ ಎಂದು ಕರೆ ನೀಡಿದರು.
ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ ಮಾತನಾಡಿ, ಮಂದ್ ನಮ್ಮೆಯಲ್ಲಿ ಭಾಗವಹಿಸಿ ಪ್ರತಿಯೊಬ್ಬರು ಜನಾಂಗವನ್ನು ಪರಿವರ್ತಿಸಲು ಮುಂದಾಗಬೇಕು. ಮಂದ್ ನಮ್ಮೆಯ ಪ್ರೇರಣೆಯಿಂದ ಜನಾಂಗಕ್ಕೆ ಮಾರ್ಗದರ್ಶಕರಾಗಬೇಕು ಎಂದು ಕರೆ ನೀಡಿದರು.
ಗೋಣಿಕೊಪ್ಪ ಲೋಪಮುದ್ರ ಮೆಡಿಕಲ್ ಸೆಂಟರ್‌ನ ಡಾ. ಅಮೃತ್ ನಾಣಯ್ಯ ಮಾತನಾಡಿ ಕೊಡವಾಮೆ ಉಳಿಯಬೇಕು, ಬೆಳೆಯಬೇಕು ಎನ್ನುವ ಮಾತು ಬಹಳಷ್ಟು ವರ್ಷದಿಂದ ಕೇಳಿ ಬರುತ್ತಿದೆ. ಆದರೆ, ಇದಕ್ಕೆ ಯಾವ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಮ್ಮ ಮಕ್ಕಳಿಗೆ ಕೊಡವ ಭಾಷೆ ಕಲಿಸಿ ಅವರೊಂದಿಗೆ ಮಾತನಾಡಬೇಕು ಎಂದು ಸಲಹೆ ನೀಡಿದರು.
ನಾಪೋಕ್ಲು ಕೊಡವ ಸಮಾಜ ಅಧ್ಯಕ್ಷ ಅಪ್ಪಚಟ್ಟೋಳಂಡ ಮನುಮುತ್ತಪ್ಪ ಮಾತನಾಡಿ ಮಂದ್ ನಮ್ಮೆಯಿಂದ ಮಂದ್‌ಗಳು ಪುನಶ್ಚೇತನಗೊಂಡಿವೆ. ಈ ನಿಟ್ಟಿನಲ್ಲಿ ನಾಪೋಕ್ಲು ವ್ಯಾಪ್ತಿಯಲ್ಲಿಯೂ ಮುಂದಿನ ದಿನಗಳಲ್ಲಿ ಮುಚ್ಚಿ ಹೋಗಿರುವ ಮಂದ್‌ಗಳನ್ನು ತೆರೆಯುವ ಕಾರ್ಯವನ್ನು ನಾಪೋಕ್ಲು ಕೊಡವ ಸಮಾಜದಿಂದ ಕೈಗೊಳ್ಳುವುದಾಗಿ ಹೇಳಿದರು.
ವೀರಾಜಪೇಟೆ ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್‌ನ ಅಧ್ಯಕ್ಷೆ ಮನೆಯಂಡ ಕಾಂತಿ ಸತೀಶ್ ಮಾತನಾಡಿದರು.
ವೇದಿಕೆಯಲ್ಲಿ ಆರಾಯಿರ ನಾಡ್ ಪೂಮಾಲೆ ಮಂದ್ ತಕ್ಕರಾದ ಅಜ್ಜಿನೀಕಂಡ ಸುದೀರ್, ಉದ್ಯಮಿ ಕ್ಯಾಂಟ್ ಸಂಸ್ಥಾಪಕ ಗುಮ್ಮಟ್ಟೀರ ಕಿಸು ಉತ್ತಪ್ಪ, ಡಾ. ಕಾಳಿಮಾಡ ಶಿವಪ್ಪ, ಬೈರನಾಡ್‌ರ ಮಂದ್ ತಕ್ಕರಾದ ಮುಕ್ಕಾಟೀರ ಮುತ್ತಣ್ಣ, ಹಾಲುಗುಂದ ಊರ್ ತಕ್ಕರಾದ ಮೇಕೇರಿರ ನಾಣಯ್ಯ, ಚೆಂಬೆಬೆಳ್ಳೂರ್ ತಕ್ಕರಾದ ಕೊಳುವಂಡ ರಾಜರಾಮ್, ಕಣ್ಣಂಗಾಲ ಗ್ರಾಪಂ ಸದಸ್ಯರುಗಳಾದ ಸೋಮೆಯಂಡ ಪುನೀತ್ ಪೂಣಚ್ಚ, ಮಂಡೇಪAಡ ವನಿತಾಭೀಮಯ್ಯ, ಅಮ್ಮತ್ತಿ ಒಂಟಿಯAಗಡಿ ಕೊಡವ ಅಸೋಸಿಯೇಷನ್ ಅಧ್ಯಕ್ಷ ಪಾಲೆಕಂಡ ಶಾಯಿ ಕರುಂಬಯ್ಯ, ಕೊಡವ ಅಸೋಸಿಯೇಷನ್ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕುಂಞAಡ ಸೀತಮ್ಮಜಗ್ಗು, ಪಚ್ಚಟಾ ಊರ್ ಪೊಮ್ಮಕ್ಕಡ ಕೂಟ ಅಧ್ಯಕ್ಷೆ ಮಚ್ಚರಂಡ ರೀಣಾಗಿರೀಶ್, ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟ್ಟೀರ ಪ್ರವೀಣ್‌ಉತ್ತಪ್ಪ, ಬೆಂಗಳೂರು ಕೊಡವ ಸಮಾಜದ ಯೂತ್ ಕೌನ್ಸಿಲ್ ಅಧ್ಯಕ್ಷ ಚೋಕಂಡ ಸೂರಜ್, ಕೊಡವ ರೈರ‍್ಸ್ ಕ್ಲಬ್ ಅಧ್ಯಕ್ಷ ಅಜ್ಜಿಕುಟ್ಟೀರ ಪೃಥ್ವಿಸುಬ್ಬಯ್ಯ, ಹಿರಿಯರಾದ ಪುಟ್ಟಿಚಂಡ ದಾದಮುತ್ತಪ್ಪ, ಪುಟ್ಟಿಚಂಡ ಅಯ್ಯಣ್ಣ, ಟ್ರೋಫಿ ದಾನಿಗಳಾದ ಪೆಮ್ಮಡಿಯಂಡ ವೇಣುಅಪ್ಪಣ್ಣ, ಚೆಂಬAಡ ದಶಗಣಪತಿ, ಕಳ್ಳಿಚಂಡ ರತ್ನಪೂವಯ್ಯ ಮತ್ತಿತರರು ಹಾಜರಿದ್ದರು.