ಮಡಿಕೇರಿ, ಜ. ೧೧: ಕ್ಷುಲ್ಲಕ ಕಾರಣಕ್ಕೆ ತಂದೆಯನ್ನೆ ಹತ್ಯೆಗೈದು ಕಾಲು ಜಾರಿ ಬಿದ್ದು ಸತ್ತಿದ್ದಾರೆಂದು ಬಿಂಬಿಸಿದ್ದ ಪುತ್ರ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ.ಮಡಿಕೇರಿ ತಾಲೂಕಿನ ಮದೆನಾಡು ನಿವಾಸಿ ಕೆ.ಎಸ್ ಮಧುಕರ (೪೦) ಬಂಧಿತ ಆರೋಪಿ. ತಾ.೮ ರಂದು ಮದೆನಾಡು ಗ್ರಾಮದಲ್ಲಿ ಶಿವಯ್ಯ ಮೃತಪಟ್ಟಿದ್ದರು. ಮೃತ ಶಿವಯ್ಯ ಅವರ ದೇಹದಲ್ಲಿ ಗಾಯಗಳಿದ್ದ ಹಿನ್ನೆಲೆ ಸಾವನ್ನು ಶಂಕಿಸಿ ಮತ್ತೊಬ್ಬ ಪುತ್ರ ಮೋಹನ್ ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ಮಗ ಮಧುಕರ ಮತ್ತು ಅಪ್ಪ ಶಿವಯ್ಯ (ಮೊದಲ ಪುಟದಿಂದ) ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಇದರಿಂದ ರೊಚ್ಚಿಗೆದ್ದ ಪುತ್ರ ಮಧುಕರ ಹೆತ್ತ ತಂದೆಯೆAಬುದನ್ನೂ ನೋಡದೆ ದೊಣ್ಣೆ ಹಾಗೂ ಕತ್ತಿಯಿಂದ ಹಲ್ಲೆ ಮಾಡಿದ್ದ. ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ಶಿವಯ್ಯ ಮರಣ ಹೊಂದಿದ್ದರು. ಬಳಿಕ ತಂದೆ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವುದಾಗಿ ಬಿಂಬಿಸಿದ್ದ ಎಂದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ. ಸೆಕ್ಷನ್ ೧೭೪ (೩), ೩೦೨, ೨೦೧ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಕ್ಷಮ ಮಿಶ್ರ ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಡಿಕೇರಿ ಸಿಪಿಐ ದಿವಾಕರ್, ಪಿಎಸ್‌ಐ ಹೆಚ್.ಪಿ ಚಂದ್ರಶೇಖರ್, ಎಂ.ಕೆ ಸದಾಶಿವ, ಸಿಬ್ಬಂದಿಗಳಾದ ರವಿಕುಮಾರ್, ಮಂಜುನಾಥ್, ಪ್ರೇಮ್ ಕುಮಾರ್, ಸಿದ್ದರಾಮ ವಂದಲ, ಬಾಬು ಗಾಯಕ್‌ವಾಡ್ ಇದ್ದರು.

ಗ್ರಾಮಾಂತರ ಠಾಣಾ ಪೊಲೀಸರ ಯಶಸ್ವಿ ಕಾರ್ಯಾಚರಣೆಯನ್ನು ಎಸ್ ಪಿ ಕ್ಷಮಾ ಮಿಶ್ರಾ ಶ್ಲಾಘಿಸಿದ್ದಾರೆ.