*ಗೋಣಿಕೊಪ್ಪಲು, ಜ. ೧೧: ಬಾಳೆಲೆ ಗ್ರಾಮದ ಹಿರಿಯ ನಾಗರಿಕ ಹಾಗೂ ಕಾಫಿ ಬೆಳೆಗಾರ ಪೋಡಮಾಡ ಉತ್ತಪ್ಪ ಸಾವಿನ ವಿಚಾರದಲ್ಲಿ ಕರೆ ನೀಡಲಾಗಿದ್ದ ಬಾಳೆಲೆ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.ಬಾಳೆಲೆ ಕೊಡವ ಸಮಾಜ ಉತ್ತಪ್ಪ ಅವರ ಸಾವಿಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿ ಬಂದ್‌ಗೆ ಕರೆ ನೀಡಿತ್ತು. ಈ ಹಿನ್ನೆಲೆ ಸೋಮವಾರ ಬೆಳಿಗ್ಗೆ ೬ ಗಂಟೆಯಿAದ ಸಂಜೆ ೬ರ ತನಕ ಬಾಳೆಲೆ ಪಟ್ಟಣ ಸಂಪೂರ್ಣ ಬಂದ್ ಆಗಿತ್ತು. ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಪ್ರತಿ ಸೋಮವಾರ ಬಾಳೆಲೆ ಪಟ್ಟಣದಲ್ಲಿ ಸಂತೆ ನಡೆಯುತ್ತಿತ್ತು. ವಿವಿಧ ಭಾಗಗಳಿಂದ ವ್ಯಾಪಾರಸ್ಥರು ಆಗಮಿಸಿ ವ್ಯಾಪಾರ ನಡೆಸುತ್ತಿದ್ದರು. ಇಂದು ಬಂದ್ ಹಿನ್ನೆಲೆ ಬಾಳೆಲೆ ರಸ್ತೆ, ಮಾರುಕಟ್ಟೆಗಳಲ್ಲಿ ಜನಸಂದಣಿಯಿಲ್ಲದೆ ಬಿಕೋ ಎನ್ನುತ್ತಿತ್ತು. ಖಾಸಗಿ ವಾಹನಗಳ ಓಡಾಟವು ವಿರಳವಾಗಿತ್ತು. ಇಲ್ಲಿನ ಆಟೋ ಚಾಲಕರು, ವಾಹನ ಚಾಲಕರು ಕೂಡ ಬಂದ್‌ಗೆ ಬೆಂಬಲ ನೀಡಿದರು. ಈ ಸಂದರ್ಭ ಮಾತನಾಡಿದ ಬಾಳೆಲೆ ಕೊಡವ ಸಮಾಜದ ಅಧ್ಯಕ್ಷ ಮಲ್ಚೀರ ಬೋಸ್ ಚಿಟ್ಟಿಯಪ್ಪ, ಉತ್ತಪ್ಪ ಸಾವಿಗೆ ಕಾರಣರಾದವರನ್ನು ಬಂಧಿ ಸುವಲ್ಲಿ ವಿಳಂಬ ನೀತಿ ತೋರುತ್ತಿರುವ ಕಾರಣ ಬಂದ್ ನಡೆಸಿದ್ದೇವೆ. ಬಾಳೆಲೆ ವ್ಯಾಪ್ತಿಯ ಆರೋಪಿಗಳನ್ನು ತಕ್ಷಣವೇ ಬಂಧಿಸದಿದ್ದರೆ ಮುಂದಿನ ದಿನಗಳಲ್ಲಿ ಬಾಳೆಲೆ ಹೋಬಳಿಯ ೫ ಗ್ರಾಮಗಳನ್ನು ಸೇರಿಸಿ ಸಭೆ ಕರೆದು ನಂತರ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು. ನಂತರ ಪೊನ್ನಂಪೇಟೆ ತಾಲೂಕು ಬಂದ್ ಮಾಡಲು ನಿರ್ಣಯ ಕೈಗೊಳ್ಳ ಲಾಗುವುದು ಎಂದು ತಿಳಿಸಿದರು.

ನಾಗರಿಕ ಹಿತರಕ್ಷಣಾ ವೇದಿಕೆ ಸಂಚಾಲಕ ಅಜ್ಜಮಾಡ ಕಟ್ಟಿಮಂದಯ್ಯ ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಮಾಣೀರ ವಿಜಯ್ ಬಂಧಿಸದಿದ್ದರೆ ಮುಂದಿನ ದಿನಗಳಲ್ಲಿ ಬಾಳೆಲೆ ಹೋಬಳಿಯ ೫ ಗ್ರಾಮಗಳನ್ನು ಸೇರಿಸಿ ಸಭೆ ಕರೆದು ನಂತರ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು. ನಂತರ ಪೊನ್ನಂಪೇಟೆ ತಾಲೂಕು ಬಂದ್ ಮಾಡಲು ನಿರ್ಣಯ ಕೈಗೊಳ್ಳ ಲಾಗುವುದು ಎಂದು ತಿಳಿಸಿದರು.

ನಾಗರಿಕ ಹಿತರಕ್ಷಣಾ ವೇದಿಕೆ ಸಂಚಾಲಕ ಅಜ್ಜಮಾಡ ಕಟ್ಟಿಮಂದಯ್ಯ ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಮಾಣೀರ ವಿಜಯ್ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಬಾಳೆಲೆ ಗ್ರಾಮದ ಚಿಮ್ಮಣಮಾಡ ಕೃಷ್ಣ ಗಣಪತಿ, ಮೇಚಂಡ ಕಿಶಮಾಚಯ್ಯ, ಅಡ್ಡಂಗಡ ಅರುಣ್, ಅಜಯ್, ರಾಶಿ, ಕಾಂಡೇರ ಗಯದೇವಯ್ಯ, ಮಾಚಂಗಡ ಭೀಮಯ್ಯ, ಆದೇಂಗಡ ಚಂದ್ರಶೇಖರ್, ಅರಮಣಮಾಡ ಸತೀಶ್ ದೇವಯ್ಯ, ಅಡ್ಡೇಂಗಡ ಗಣೇಶ್, ಮೇಚಂಡ ಮಂದಣ್ಣ, ಮಾಪಂಗಡ ಸಂಪತ್ ಸೇರಿದಂತೆ ಹಲವರು ಹಾಜರಿದ್ದರು. ಡಿವೈಎಸ್ಪಿ ಜಯಕುಮಾರ್ ನೇತೃತ್ವದಲ್ಲಿ ಬಂದೋಬಸ್ತ್ ನಿಯೋಜಿಸಲಾಗಿತ್ತು.