ಮಡಿಕೇರಿ, ಜ. ೮ : ಹೆದ್ದಾರಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ರೂ. ೪೦ ಕೋಟಿ ಅನುದಾನ ಬಿಡುಗಡೆಗೊಳಿಸಲಿದ್ದು, ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ರಸ್ತೆ ನಿರ್ಮಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಹೇಳಿದರು. ನಗರದ ಇಂದಿರಾ ಕ್ಯಾಂಟಿನ್ ಮುಂಭಾಗದಲ್ಲಿ ಮಳೆ ಹಾನಿ ಪರಿಹಾರ ನಿಧಿಯ ರೂ ೧.೪೫ ಕೋಟಿ ವೆಚ್ಚದಲ್ಲಿ ೩೬೦ ಮೀಟರ್ ಉದ್ದದ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು. ಬಸ್ ನಿಲ್ದಾಣಕ್ಕೆ ವಿರೋಧವಿತ್ತು : ನಗರದಲ್ಲಿ ನಿರ್ಮಾಣಗೊಂಡಿರುವ ನೂತನ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಕಾಮಗಾರಿಗೂ ಮೊದಲೇ ನಾನು ವಿರೋಧಿಸಿದ್ದೆ ಎಂದು ಅಪ್ಪಚ್ಚು ರಂಜನ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಗಮನಕ್ಕೆ ಬಾರದೆ ಅಂದಿನ ಉಸ್ತುವಾರಿ ಸಚಿವರು ಪ್ರತಿಷ್ಠೆಗೆ ಬಿದ್ದು ಬಸ್ (ಮೊದಲ ಪುಟದಿಂದ) ನಿಲ್ದಾಣದ ಭೂಮಿಪೂಜೆ ನೆರವೇರಿಸಿ, ತರಾತುರಿಯಲ್ಲಿ ಉದ್ಘಾಟನೆ ಮಾಡಿದರು. ಇಂದು ತಂಗುದಾಣ ಸಂಪೂರ್ಣ ಶಿಥಿಲಗೊಂಡಿದೆ. ಕಾಮಗಾರಿ ನಿಜಕ್ಕೂ ನನಗೆ ತೃಪ್ತಿ ತಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಸ್ ನಿಲ್ದಾಣ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದರು.

ಗುತ್ತಿಗೆದಾರ ಕಪ್ಪು ಪಟ್ಟಿಗೆ :

ಕೊಡವ ಹೆರಿಟೇಜ್ ಸೆಂಟರ್ ನಿರ್ಮಾಣದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ತಿಳಿದು ಬಂದಿದ್ದು, ಈ ಸಂಬAಧ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ರಂಜನ್ ಹೇಳಿದರು. ಗುಣಮಟ್ಟದ ಕೆಲಸಕ್ಕೆ ಆದ್ಯತೆ ನೀಡಬೇಕು ಎಂದರು.

ಕಾಮಗಾರಿ ನಡೆಯದೆ ಬಿಲ್ ಪಾವತಿಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಸಂಬAಧ ಕೂಡ ಕ್ರಮವಹಿಸಲಾಗುತ್ತದೆ.

ಹೆರಿಟೇಜ್ ನಿರ್ಮಾಣ ವಾಗುವಾಗ ರೂ ೧.೭೪ ಕೋಟಿ ಅಂದಾಜು ಪಟ್ಟಿ ತಯಾರಿಸಿ ಕಾಮಗಾರಿ ಆರಂಭಿಸಲಾಯಿತು. ಬಳಿಕ ೨.೬೨ ಕೋಟಿ ವೆಚ್ಚ ತಗುಲಿದೆ. ರೂ ೧ ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿರುವ ಶಂಕೆ ಇದೆ. ಈ ಸಂಬAಧ ಕ್ರಮಕೈಗೊಳ್ಳಲಾಗುತ್ತದೆ. ಮೊದಲ ಹಂತವಾಗಿ ರಾಜ್ಯದಲ್ಲಿ ಮೊದಲ ಬಾರಿಗೆ ಗುತ್ತಿಗೆದಾರನನ್ನು ಬ್ಲಾö್ಯಕ್‌ಲಿಸ್ಟ್ಗೆ ಸೇರಿಸಲಾಗಿದೆ.

ಮಡಿಕೇರಿ ಸ್ಕೆ÷್ವÃರ್ ನಿರ್ಮಾಣ ಸಂಬAಧ ಪ್ರಕ್ರಿಯೆ ನಡೆಯುತ್ತಿದ್ದು, ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ ಎಂದರು.

ನಗರಸಭೆ ಪೌರಾಯುಕ್ತ ರಾಮ್‌ದಾಸ್, ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ, ಬಿಜೆಪಿ ನಗರಾಧ್ಯಕ್ಷ ಮನು ಮಂಜುನಾಥ್, ಯುವ ಮೋರ್ಚಾ ನಗರಾಧ್ಯಕ್ಷ ನವೀನ್ ಪೂಜಾರಿ, ಪ್ರಮುಖರಾದ ಅಪ್ಪಣ್ಣ, ಅರುಣ್ ಕುಮಾರ್, ಅನಿತಾ ಪೂವಯ್ಯ, ಸವಿತಾ, ಶ್ವೇತ ಸೇರಿದಂತೆ ಇನ್ನಿತರರು ಇದ್ದರು.

ಸಚಿವ ಸ್ಥಾನ ಕೊಡ್ತಾರೆ :

ಪ್ರಾಮಾಣಿಕವಾಗಿ ನಾನು ಪಕ್ಷದಲ್ಲಿ ಕೆಲಸ ಮಾಡಿದ್ದೇನೆ, ಹಿರಿತನ ಆಧಾರದಲ್ಲಿ ಸರ್ಕಾರ ನನಗೆ ಸಚಿವ ಸ್ಥಾನ ನೀಡುತ್ತೆ ಎಂದು ಶಾಸಕ ಅಪ್ಪಚ್ಚು ರಂಜನ್ ವಿಶ್ವಾಸ ವ್ಯಕ್ತಪಡಿಸಿದರು.

ಸಾಮಾಜಿಕ ನ್ಯಾಯ, ಹಿರಿತನವನ್ನು ಗಮನಿಸಿ ಸಚಿವ ಸ್ಥಾನ ಹಂಚಿಕೆ ಮಾಡಲಾಗುತ್ತದೆ. ನನಗೂ ಅವಕಾಶ ನೀಡುವ ನಿರೀಕ್ಷೆಯಲ್ಲಿದ್ದೇನೆ. ಪಕ್ಷದಲ್ಲಿ ನನಗೆ ಹಿರಿತನ ಇದೆ ಎಂದರು.