ಮಡಿಕೇರಿ, ಜ. ೮ : ಕೊಡವರು ಗೋಮಾಂಸ ಸೇವಿಸುತ್ತಾರೆ ಎಂಬ ಹೇಳಿಕೆ ನೀಡಿರುವ ಸಿದ್ದರಾಮಯ್ಯ ವಿರುದ್ಧ ಈಗಾಗಲೇ ದೂರು ದಾಖಲಿಸಿದ್ದು, ಕಾನೂನು ಹೋರಾಟ ಮುಂದುವರೆಸಲಾಗುತ್ತದೆ ಎಂದು ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಕೊಡವರ ಭಾವನೆಗೆ ಧಕ್ಕೆ ಉಂಟಾಗಿದೆ. ಈ ಸಂಬAಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಸೆಕ್ಷನ್ ೧೫೩ ಅಡಿಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ. ಇದು ಜಾಮೀನು ಸಿಗಬಲ್ಲ ಸೆಕ್ಷನ್ ಆಗಿದ್ದು, ಇದರ ಬದಲಾಗಿ ಪೊಲೀಸರು ೧೫೩ (ಎ) ಅಥವಾ ೨೫೯ (ಎ) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು. ಕೊಡವರ ಭಾವನೆಯನ್ನು ಘಾಸಿ ಮಾಡಿರುವ ಸಿದ್ದರಾಮಯ್ಯ ಅವರ ವಿರುದ್ಧ ಕಾನೂನು ಹೋರಾಟ ಮುಂದುವರೆಸಲಾಗುತ್ತದೆ. ಪೂಜನೀಯ ಭಾವದಲ್ಲಿ ಕೊಡವರು ಗೋವುಗಳನ್ನು ಕಾಣುತ್ತಾರೆ ಎಂದ ಅವರು, ಕಾಂಗ್ರೆಸ್ ನಾಯಕ ಬ್ರಿಜೇಷ್ ಕಾಳಪ್ಪ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿ ಕೊಂಡಿರುವುದು ಸರಿಯಲ್ಲ ಎಂದು ಕಿಡಿಕಾರಿದರು. (ಮೊದಲ ಪುಟದಿಂದ) ಕಾಂಗ್ರೆಸ್ ನಾಯಕರು ಸ್ಪಷ್ಟ ನಡೆ ತೋರಬೇಕು ಎಂದರು.

ಕಸ್ತೂರಿ ರಂಗನ್ ವರದಿ ಮರುಪರಿಶೀಲನೆಯಾಗಲಿ :

ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧವಿದ್ದು ಈ ಸಂಬAಧ ಮರುಪರಿಶೀಲನೆಯಾಗಬೇಕೆಂದು ರವಿ ಕುಶಾಲಪ್ಪ ಒತ್ತಾಯಿಸಿದರು.

‘ಏರಿಯಲ್ ಸರ್ವೇ’ ಬದಲು ಸ್ಥಳ ಪರಿಶೀಲಿಸಿ ಅಧಿಕಾರಿಗಳೇ ಸ್ಥಳ ಸರ್ವೇ ಮಾಡಬೇಕು. ೧೦ ಕಿ.ಮೀ ‘ಬಫರ್ ಝೋನ್’ನ್ನು ಶೂನ್ಯಕ್ಕೆ ಇಳಿಸಬೇಕು, ಪಶ್ಚಿಮಘಟ್ಟ ಉಳಿವಿನೊಂದಿಗೆ ಮೂಲಭೂತ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಬೇಕಾಗಿದೆ. ಕೊಡಗಿನ ಸಂಪತ್ತು ಉಳಿಯಬೇಕು. ವರದಿ ಜಾರಿ ಮಾಡಿದ್ದಲ್ಲಿ ರಾಜ್ಯ ಸರಕಾರ ಕೂಡ ವಿರೋಧಿಯೆ ಎಂದರು.

ಕೂಟಿಯಾಲ ಸೇತುವೆ ಮೂಲಕ ರಸ್ತೆ ಸಂಪರ್ಕ, ಗಾಳಿಬೀಡು ಮೂಲಕ ಸುಬ್ರಹ್ಮಣ್ಯ ರಸ್ತೆ, ದಬಡ್ಕ ರಸ್ತೆ ಅಭಿವೃದ್ಧಿಗೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವ ಹಿನ್ನೆಲೆ ಶಾಸಕರ ನೇತೃತ್ವದಲ್ಲಿ ತಾ.೧೧ ರಂದು ಸಭೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ತಾಲೂಕು ಕೃಷಿ ಮೋರ್ಚಾ ಕಾರ್ಯದರ್ಶಿ ಕೊಕ್ಕಲೇರ ಅಯ್ಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕಿಮ್ಮುಡಿರ ಜಗದೀಶ್ ಇದ್ದರು