ಮಡಿಕೇರಿ, ಜ. ೮: ಇ-ವಾಹನ ಪೋರ್ಟಲ್‌ನಲ್ಲಿ ನಮೂದಾಗಿ, ನೋಂದಾಣಿಯಾಗದೇ ಉಳಿದಿರುವ ಭಾರತ್ ಸ್ಟೇಜ್-೪ ಮಾಪನದ ಎಲ್ಲಾ ವಾಹನಗಳನ್ನು ೨೦೨೧ ರ ತಾ. ೧೬ ರೊಳಗೆ ನೋಂದಾಯಿಸಿಕೊಳ್ಳಲು ಕೊನೆಯ ಅವಕಾಶವಿದ್ದು, ೨೦೨೦ರ ಮಾರ್ಚ್ ೩೧ ರವರೆಗೆ ಮಾರಾಟವಾಗಿ ಇ-ವಾಹನ ಪೋರ್ಟಲ್‌ನಲ್ಲಿ ನಮೂದಾಗಿ ನೋಂದಣಿಯಾಗದೇ ಬಾಕಿ ಉಳಿದಿರುವ ಮಾಲೀಕರು ಮಾತ್ರ ಈ ಅವಧಿಯಲ್ಲಿ ತಮ್ಮ ವಾಹನಗಳನ್ನು ನೋಂದಾಯಿಸಿಕೊಳ್ಳಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ್ ಶಿರಾಲಿ ತಿಳಿಸಿದ್ದಾರೆ