ಮಡಿಕೇರಿ, ಜ. ೮ : ಮಂಗಳಾದೇವಿನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲ್ಪಡಲಿರುವ ರಾಜೇಶ್ವರಿ ಗಣಪತಿ ಹಾಗೂ ನಾಗ ದೈವದ ಮೂರ್ತಿಗಳ ಮೆರವಣಿಗೆ ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು.

ಬನ್ನಿಮಂಟಪದ ಬಳಿಯಿಂದ ಅಲಂಕೃತ ಮಂಟಪದಲ್ಲಿ ಮೂರ್ತಿ ಗಳನ್ನು ಚಂಡೆ ವಾದ್ಯ ಹಾಗೂ ಮಹಿಳೆ ಯರ ಪೂರ್ಣಕುಂಭ ಸ್ವಾಗತದೊಂದಿಗೆ ರಾಜೇಶ್ವರಿ ಕ್ಷೇತ್ರಕ್ಕೆ ಕೊಂಡೊಯ್ಯ ಲಾಯಿತು. ಮೆರವಣಿಗೆಗೂ ಮುನ್ನ ಪ್ರತಿಷ್ಠಾಪಿತ ಮೂರ್ತಿಗಳಿಗೆ ಶಾಸಕ ಅಪ್ಪಚ್ಚು ರಂಜನ್ ಹಾಗೂ ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಈಡುಗಾಯಿ ಒಡೆದರು.

ಮೈಸೂರಿನ ಶಿಲ್ಪಿ ಸೂರ್ಯ ಪ್ರಕಾಶ್ ಅವರು ಕೆತ್ತಿರುವ ಇಪ್ಪತ್ತೆರಡು ಇಂಚು ಎತ್ತರದ ರಾಜೇಶ್ವರಿ ದೇವಿ, ಹದಿನೆಂಟು ಇಂಚು ಎತ್ತರದ ಗಣಪತಿ ಹಾಗೂ ಕೈಕಂಬದ ಲಕ್ಷö್ಮಣ ಅವರು ಕೆತ್ತಿರುವ ನಾಗದೇವರ ಹದಿನೇಳು ಇಂಚಿನ ಮೂರ್ತಿಗಳನ್ನು ರಾಜೇಶ್ವರಿ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಗುತ್ತಿದ್ದು, ತಾ.೧೨ ರಿಂದ ೧೮ರವರೆಗೆ ಹಲವಾರು ಧಾರ್ಮಿಕ ಕೈಂಕರ್ಯಗಳೊAದಿಗೆ ಈ ಕಾರ್ಯ ನೆರವೇರಲಿದೆ.

ಮೆರವಣಿಗೆಗೂ ಮುನ್ನ ದೇವಾಲಯ ಆಡಳಿತ ಮಂಡಳಿ ವತಿಯಿಂದ ತಾಳತ್‌ಮನೆಯ ದುರ್ಗಾ ಭಗವತಿ ದೇವಾಲಯ, ಮಡಿಕೇರಿಯ ಶಕ್ತಿ ದೇವತೆಗಳಾದ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ, ಕಂಚಿ ಕಾಮಾಕ್ಷಿ ಸೇರಿದಂತೆ ಕರವಲೆ ಭಗವತಿ, ಪೇಟೆ ಶ್ರೀರಾಮ ಮಂದಿರ, ಮುನೇಶ್ವರ, ದೇಚೂರು ಶ್ರೀ ರಾಮ ಮಂದಿರ, ಆದಿಪರಾಶಕ್ತಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.