ಮಡಿಕೇರಿ, ಜ. ೮: ಕೋವಿಡ್ ಸಂಬAಧ ಲಸಿಕೆಯನ್ನು ನೀಡುವುದಕ್ಕೆ ಜಿಲ್ಲೆ ಸಿದ್ಧವಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಜಿಲ್ಲೆಯಲ್ಲಿ ಮೊದಲನೆಯ ಹಂತದಲ್ಲಿ ೬,೩೪೪ ಆರೋಗ್ಯ ಕಾರ್ಯಕರ್ತೆಯರಿಗೆ ಕೋವಿಡ್ ಲಸಿಕೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ಸರಕಾರಿ ಆರೋಗ್ಯ ಕಾರ್ಯಕರ್ತರಿಗೆ ಸೇರಿದಂತೆ ೬,೩೪೪ ಮಂದಿಯನ್ನು ಮಡಿಕೇರಿ, ಜ. ೮: ಕೋವಿಡ್ ಸಂಬAಧ ಲಸಿಕೆಯನ್ನು ನೀಡುವುದಕ್ಕೆ ಜಿಲ್ಲೆ ಸಿದ್ಧವಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಜಿಲ್ಲೆಯಲ್ಲಿ ಮೊದಲನೆಯ ಹಂತದಲ್ಲಿ ೬,೩೪೪ ಆರೋಗ್ಯ ಕಾರ್ಯಕರ್ತೆಯರಿಗೆ ಕೋವಿಡ್ ಲಸಿಕೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ಸರಕಾರಿ ಆರೋಗ್ಯ ಕಾರ್ಯಕರ್ತರಿಗೆ ಸೇರಿದಂತೆ ೬,೩೪೪ ಮಂದಿಯನ್ನು (ಮೊದಲ ಪುಟದಿಂದ) ವ್ಯವಸ್ಥೆ ಗಳನ್ನು ಪರಿಶೀಲನೆ ನಡೆಸಿದರು. ನಂತರ ವೈದ್ಯಕೀಯ ಕಾಲೇಜಿನ ಡೀನ್ ಕಾರ್ಯಪ್ಪ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮೋಹನ್ ಅವರುಗಳಿಂದ ಮಾಹಿತಿ ಪಡೆದರು. ಈ ಸಂದರ್ಭ ವೈದ್ಯಕೀಯ ಕಾಲೇಜಿನ ಅಧೀಕ್ಷಕ ಡಾ.ಲೋಕೇಶ್, ಡಾ.ಮಹೇಶ್, ಡಾ. ಗೋಪಿನಾಥ್, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು. ಜಿಲ್ಲೆಯ ವೀರಾಜಪೇಟೆಯ ಕಾಕೋಟುಪರಂಬು ಪ್ರಾಥಮಿಕ ಆರೋಗ್ಯ ಕೇಂದ್ರ, ವೀರಾಜಪೇಟೆ ದಂತ ವೈದ್ಯಕೀಯ ಕಾಲೇಜು, ಸೋಮವಾರಪೇಟೆ ತಾಲೂಕು ಆಸ್ಪತ್ರೆ, ಮಡಿಕೇರಿ ನಗರ ಆರೋಗ್ಯ ಕೇಂದ್ರ, ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿಯೂ ಸುಸೂತ್ರವಾಗಿ ‘ಡ್ರೆöÊ ರನ್’ ನಡೆಯಿತು.

ಶಿಸ್ತುಬದ್ಧ ವ್ಯವಸ್ಥೆ

ನಗರದ ಜಿಲ್ಲಾಸ್ಪತ್ರೆಯಲ್ಲಿ ಇಂದು ೨೫ ಮಂದಿಗೆ ಲಸಿಕೆ ಪೂರ್ವಾಭ್ಯಾಸ ನಡೆಯಿತು. ಮುಂದಿನ ೧೫ ದಿನಗಳಲ್ಲಿ ನೈಜ ಲಸಿಕೆ ನೀಡುವ ಸಂದರ್ಭ ಪಾಲಿಸಬೇಕಾದ ನಿಯಮಗಳು ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಇಂದು ಪ್ರಾತ್ಯಕ್ಷಿಕವಾಗಿ ಪ್ರದರ್ಶಿಸ ಲಾಯಿತು. ‘ಕೋವಿನ್’ ಮೊಬೈಲ್ ಆ್ಯಪ್ ಮುಖಾಂತರ ನೋಂದಣಿ ಮಾಡಿಕೊಂಡಿರುವ ಮಂದಿ ತಮ್ಮ ಗುರುತಿನ ಚೀಟಿಯನ್ನು (ಆಧಾರ್ ಕಾರ್ಡ್) ಕಡ್ಡಾಯವಾಗಿ ಲಸಿಕೆ ನೀಡುವ ಸಂದರ್ಭ ತರುತ್ತಾರೆ. ಲಸಿಕೆ ಪಡೆಯಲು ಬರುವವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಬರುವಂತೆ ಲಸಿಕೆ ನೀಡುವ ಕೇಂದ್ರದ ಪ್ರವೇಶದಲ್ಲಿನ ಭದ್ರತಾ ಸಿಬ್ಬಂದಿಯ ಜವಾಬ್ದಾರಿ ಯಾಗಿರುತ್ತದೆ. ಲಸಿಕೆ ಪಡೆಯುವವರು ಒಳ ಪ್ರವೇಶಿಸಿದ ನಂತರ ಲಸಿಕೆ ನೀಡುವ ಕೊಠಡಿ ಹೊರಗೆ ಕೆಲ ಕಾಲ ಕಾಯಲು ಆಸನದ ವ್ಯವಸ್ಥೆ ಮಾಡಲಾಗುತ್ತದೆ. ‘ಕೋವಿನ್’ ಆ್ಯಪ್‌ನಲ್ಲಿ ನೋಂದಣಿ ಮಾಡಿರುವವರು ತಮ್ಮ ಆಧಾರ್ ಕಾರ್ಡ್ ಅನ್ನು ಇಲ್ಲಿನ ಸಿಬ್ಬಂದಿಗೆ ತೋರಿಸಿ ಪರಿಶೀಲನೆ ನಂತರ ಲಸಿಕೆ ನೀಡುವ ಕೊಠಡಿಗೆ ಕಳುಹಿಸಲಾಗುತ್ತದೆ. ಲಸಿಕೆ ಪಡೆದ ನಂತರ ‘ಅಬ್‌ರ‍್ವೇಷನ್’ ಕೊಠಡಿಯಲ್ಲಿ ೩ ಮಂದಿಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ೩೦ ನಿಮಿಷಗಳ ಕಾಲ ‘ವ್ಯಾಕ್ಸಿನೇಷನ್’ ಅಧಿಕಾರಿಗಳು ಲಸಿಕೆ ಪಡೆದವರನ್ನು ಗಮನಿಸುತ್ತಾರೆ. ಲಸಿಕೆಯಿಂದ ಯಾವುದೇ ರೀತಿಯ ಅಡ್ಡ ಪರಿಣಾಮವಾಗುತ್ತದೊ ಇಲ್ಲವೊ ಎಂಬುದನ್ನು ಅಧಿಕಾರಿಗಳು ಗಮನಿಸುತ್ತಾರೆ. ಅಡ್ಡ ಪರಿಣಾಮ ವಾದಲ್ಲಿ ತುರ್ತು ಚಿಕಿತ್ಸೆಗೂ ವ್ಯವಸ್ಥೆಗಳು ಮಾಡಲಾಗಿದೆ.

ಕಾಕೋಟುಪರಂಬು ಆರೋಗ್ಯ ಕೇಂದ್ರದಲ್ಲಿ ಚಾಲನೆ

ವೀರಾಜಪೇಟೆ: ಸರಕಾರದ ಸೂಚನೆಯಂತೆ ಕೋವಿಡ್ ಲಸಿಕೆ ನೀಡಲು ಎಲ್ಲ ರೀತಿಯ ಸಿದ್ಧತೆಯನ್ನು ಕಾಕೋಟುಪರಂಬು ಆರೋಗ್ಯ ಕೇಂದ್ರದಲ್ಲಿ ಮಾಡಿಕೊಳ್ಳಲಾಗಿದೆ. ಕೋವಿಡ್-೧೯ಗೆ ಲಸಿಕೆ ನೀಡಿದ ನಂತರ ಯಾರಿಗಾದರು ಅಡ್ಡಪರಿಣಾಮ ಕಂಡುಬAದರೆ ಅವರಿಗೆ ತಕ್ಷಣ ಚಿಕಿತ್ಸೆಗಾಗಿ ಆಕ್ಷಿಜನ್ ಸಹಿತ ಚಿಕಿತ್ಸೆಗೆ ಪೂರ್ವ ಸಿದ್ಧತೆಯೂ ಇದೆ ಎಂದು ಆರೋಗ್ಯ ಕೇಂದ್ರದ ವೈದ್ಯಾಧಿüಕಾರಿ ಡಾ. ಶ್ರೀಶೈನಿ ಹೇಳಿದರು

ವೀರಾಜಪೇಟೆ ತಾಲೂಕಿನಲ್ಲಿ ಗುರುತಿಸಿರುವ ಕಾಕೋಟುಪರಂಬಿನ ಏಕೈಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಕೋವಿಡ್-೧೯ಕ್ಕೆ ಲಸಿಕೆ ನೀಡುವ ಪೂರ್ವ ಸಿದ್ಧತೆಯ (ಡ್ರೆöÊರನ್) ಪ್ರಪ್ರಥಮ ಕಾರ್ಯಕ್ರಮವನ್ನು ಡಾ. ಶ್ರೀಶೈನಿ ಉದ್ಘಾಟಿಸಿ ಮಾತನಾಡಿದರು.

ಸರಕಾರದ ಮಾರ್ಗದರ್ಶನದಂತೆ ಮೊದಲ ಹಂತದಲ್ಲಿ ೨೫ ಆರೋಗ್ಯ ಕಾರ್ಯಕರ್ತರನ್ನು ಲಸಿಕೆ ನೀಡಲು (ಡ್ರೆöÊರನ್) ಆಯ್ಕೆಮಾಡಲಾಗಿದೆ. ಇವರು ಮೊದಲು ತಮ್ಮ ಆಧಾರ್ ಕಾರ್ಡ್ ಅನ್ನು ಪ್ರವೇಶ ಹಂತದಲ್ಲಿ ನೀಡಿ ಪಟ್ಟಿಯಲ್ಲಿ ತಮ್ಮ ಹೆÀಸರನ್ನು ದೃಢÀಪಡಿಸಿಕೊಳ್ಳಬೇಕು. ಲಸಿಕೆ ಪಡೆದವರು ಇವರಿಗಾಗಿ ಇರುವ ನಿಗಾಘಟಕದಲ್ಲಿ ಕನಿಷ್ಟ ೩೦ ನಿಮಿಷ ವಿಶ್ರಾಂತಿ ಇರಬೇಕು. ಇಲ್ಲಿ ಲಸಿಕೆ ಯಿಂದ ಏನಾದರೂ ಅಡ್ಡಪರಿಣಾಮ ತೊಂದರೆ ಉಂಟಾದರೆ ಅದನ್ನು ಸೂಕ್ಷö್ಮವಾಗಿ ಗಮನಿಸಲಾಗುವುದು. ನಂತರ ನಿರ್ಗಮನದ ಬಾಗಿಲಿನ ಮೂಲಕ ಅವರನ್ನು ಹೊರಗೆ ಕಳಿಸಲಾಗುವುದು. ಇವರನೆಲ್ಲಾ ಗಮನಿಸಲು ಹಾಗೂ ಕಾರ್ಯ ನಿರ್ವಹಿಸಲು ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಈ ನಿಯಮ ಮುಂದಿನ ಲಸಿಕೆ ನೀಡುವಾಗಲೂ ಮುಂದುವರಿಯುತ್ತದೆ ಎಂದು ಡಾ. ಶ್ರೀಶೈನಿ ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜು ಅವರು, ಎಲ್ಲರ ಆರೋಗ್ಯ ದೃಷ್ಟಿಯಿಂದ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ತಾಲೂಕಿನ ಕಾಕೋಟುಪರಂಬು ಆರೋಗ್ಯ ಕೇಂದ್ರವನ್ನು ಕೋವಿಡ್ ಲಸಿಕೆ ಪೂರ್ವ ಸಿದ್ಧತೆಯ ಕೇಂದ್ರವನ್ನಾಗಿ ಆಯ್ಕೆ ಮಾಡಲಾಗಿದೆ. ಜೊತೆಗೆ ಇಂದು ವೀರಾಜಪೇಟೆಯ ಕೊಡಗು ದಂತ ಮಹಾ ವಿದ್ಯಾಲಯದಲ್ಲಿಯೂ ಈ ಪ್ರಾಯೋಗಿಕ ಕಾರ್ಯಕ್ರಮ ನಡೆಯಿತು. ಮುಂದಿನ ವಾರದಿಂದ ಸಾರ್ವಜನಿಕರಿಗೂ ಇದೇ ರೀತಿ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಲಿದೆ ಎಂದು ತಿಳಿಸಿದರು.

ಲಸಿಕೆ ನೀಡುವ ಪೂರ್ವ ಸಿದ್ಧತೆಯ ಅಂಗವಾಗಿ ಇಂದು ಕಾಕೋಟುಪರಂಬು ಆರೋಗ್ಯ ಕೇಂದ್ರವನ್ನು ಸಂಪೂರ್ಣ ಸ್ಯಾನಿಟೈಸರ್ ಮಾಡಲಾಗಿತ್ತು. ಆರೋಗ್ಯ ಕಾರ್ಯಕರ್ತರು ಆರೋಗ್ಯ ಕೇಂದ್ರದ ಮುಂದೆ ಲಸಿಕೆ ಕಾರ್ಯಕ್ರಮವನ್ನು ಸ್ವಾಗತಿಸುವ ರಂಗೋಲಿ ಹಾಕಿ ಪ್ರಥಮವಾಗಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದರು.

ಈ ಸಂದರ್ಭ ಜಿಲ್ಲಾ ಚುಚ್ಚುಮದ್ದುಗಳನ್ನು ನೀಡುವ ವಿಭಾಗದ ಸಂಯೋಜಕಿ ವಸೂದ, ತಾಲೂಕು ಆರೋಗ್ಯ ಕಾರ್ಯಕರ್ತೆ ದಮಯಂತಿ, ಆರೋಗ್ಯ ಕೇಂದ್ರದ ಕಾರ್ಯಕರ್ತೆ ಯರು, ಆಶಾ ಕಾರ್ಯಕರ್ತೆಯರು ಮತ್ತಿತರ ಹಾಜರಿದ್ದರು.

ಸೋಮವಾರಪೇಟೆ ಆಸ್ಪತ್ರೆಯಲ್ಲಿ

ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ನೀಡುವ ಬಗ್ಗೆ ಅಣಕು ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ಡಾ. ರವೀಂದ್ರ, ಡಾ. ಶಿವಪ್ರಸಾದ್, ಡಾ. ಸತೀಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಹಿರಿಯ ದಾದಿ ಕಮಲ, ಅನಿತ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು. ಕೊರೊನಾ ಲಸಿಕೆ ನೀಡುವ ಮುನ್ನ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ತೊಡಕುಗಳು ಉಂಟಾಗದAತೆ ಲಸಿಕೆ ನೀಡುವ ಬಗ್ಗೆ ವೈದ್ಯರುಗಳು ಮಾಹಿತಿ ಒದಗಿಸಿದರು.

ಕುಶಾಲನಗರ ಆರೋಗ್ಯ ಕೇಂದ್ರ

ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್-೧೯ ಲಸಿಕೆ ವಿತರಣೆಯ ಪೂರ್ವಭಾವಿ ತಯಾರಿ ನಡೆಸಲಾಯಿತು. ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಮೋಹನ್ ಡ್ರೆöÊರನ್ ಸಿದ್ದತೆಗಳನ್ನು ಪರಿಶೀಲಿಸಿ ಸಿಬ್ಬಂದಿಗಳಿಗೆ ಅಗತ್ಯ ಸಲಹೆಗಳನ್ನು ನೀಡಿದರು. ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಡಾ. ಮೋಹನ್, ವಿವಿಧ ಹಂತದಲ್ಲಿ ನಡೆಯುವ ಲಸಿಕೆ ವಿತರಣೆಗೆ ಕೈಗೊಂಡ ಅಗತ್ಯ ಸಿದ್ದತೆಗಳ ಬಗ್ಗೆ ಮಾಹಿತಿ ನೀಡಿದರು. ಪ್ರಥಮ ಹಂತದಲ್ಲಿ ಆರೋಗ್ಯ ಸಹಾಯಕರು, ಆಶಾ, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಖಾಸಗಿ ಆರೋಗ್ಯ ಕ್ಷೇತ್ರದವರಿಗೆ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಎಸ್. ಗೋಪಿನಾಥ್, ಸಾಂಕ್ರಾಮಿಕ ರೋಗ ನಿಯಂತ್ರಣ ಅಧಿಕಾರಿ ಡಾ.ಮಹೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ಸಮುದಾಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಮಧುಸೂದನ್ ಸೇರಿದಂತೆ ತಂತ್ರಜ್ಞರು, ಸಿಬ್ಬಂದಿ ವರ್ಗದವರು ಇದ್ದರು.