ನಾಪೋಕ್ಲು, ಜ. ೮ : ಶಿವಾಜಿ ಕ್ಲಬ್ ವತಿಯಿಂದ ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ನಾಲ್ಕುನಾಡು ಹಾಕಿ ಟೂರ್ನಿಯಲ್ಲಿ ಮುಂದಿನ ಸುತ್ತಿಗೆ ೮ ತಂಡಗಳು ಪ್ರವೇಶಿಸಿತು.

ಶಿವಾಜಿ ಗ್ರೀನ್ಸ್ ಹಾಗೂ ಅಪೊಲೋ ಬಲ್ಲಮಾವಟಿ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಶಿವಾಜಿ ಗ್ರೀನ್ಸ್ ೩-೦ ಗೋಲುಗಳಿಂದ ಜಯ ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು. ಶಿವಾಜಿ ಗ್ರೀನ್ಸ್ ಪರ ಅಪ್ಪಚ್ಚು, ಪೆಮ್ಮಯ್ಯ ಹಾಗೂ ತಿಮ್ಮಯ್ಯ ತಲಾ ಒಂದು ಗೋಲು ಬಾರಿಸಿದರು. ಕುಂಜಿಲ ೧ ಹಾಗೂ ನಾಲಡಿ ಬಿ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ನಾಲಡಿ ತಂಡ ಟೈಬ್ರೇಕರ್‌ನಲ್ಲಿ ಗೋಲು ದಾಖಲಿಸಿ ಗೆಲುವು ಸಾಧಿಸಿತು.

೩ ಗೋಲುಗಳನ್ನು ಗಳಿಸುವುದರ ಮೂಲಕ ಕೊಳಕೇರಿ ತಂಡವು ಗೆಲುವು ಸಾಧಿಸಿತು. ಕೊಳಕೇರಿ ತಂಡದ ಪ್ರೀತಂ, ಕುಶಾಲಪ್ಪ ಹಾಗೂ ವಿಕಾಸ್ ಒಂದು ಗೋಲು ಗಳಿಸಿದರು.

ನಾಲ್ಕನೇ ಪಂದ್ಯದಲ್ಲಿ ನಾಲಡಿ ಎ ೨ ತಂಡ ಒಂದು ಗೋಲು ಗಳಿಸಿ ನಾಪೋಕ್ಲು ತಂಡದ ವಿರುದ್ದ ಗೆಲುವು ಸಾಧಿಸಿತು.

ಐದನೇ ಪಂದ್ಯದಲ್ಲಿ ನೆಲಜಿ ಎ೩ ತಂಡವು ಅಜ್ಜಿಮುಟ್ಟ ತಂಡದ ವಿರುದ್ದ ಗೆಲುವು ಸಾಧಿಸಿತು. ತಂಡದ ಆಟಗಾರರಾದ ದಿಲೀಪ್ ಒಂದು ಹಾಗೂ ಮೋನಿಷ್ ಎರಡು ಗೋಲು ಗಳಿಸಿದರು.

ಆರನೇ ಪಂದ್ಯದಲ್ಲಿ ಯವಕಪಾಡಿ ತಂಡವು ಬೇತು ತಂಡದ ವಿರುದ್ದ ಜಯಗಳಿಸಿತು. ಏಳನೇ ಪಂದ್ಯದಲ್ಲಿ ಪುಲಿಕೋಟು ತಂಡವು ನೆಲಜಿ ಬ್ಲೂ ತಂಡದ ವಿರುದ್ದ ಗೆಲುವು ಸಾಧಿಸಿತು.

ಎಂಟನೇ ಪಂದ್ಯದಲ್ಲಿ ಮರಂದೋಡ ತಂಡವು ಬೇತು ತಂಡದ ವಿರುದ್ದ ಜಯಗಳಿಸಿ ಮುಂದಿನ ಸುತ್ತು ಪ್ರವೇಶಿಸಿತು.