ನವದೆಹಲಿ, ಜ. ೮: ವಿಶ್ವದಲ್ಲಿ ಭಾರತದಲ್ಲೆ ಅತ್ಯಂತ ಹೆಚ್ಚು ಅರಣ್ಯ ಇಲಾಖೆಯ ಅಧಿಕಾರಿಗಳು ಕರ್ತವ್ಯದಲ್ಲಿರುವಾಗ ಹತ್ಯೆಗೀಡಾಗುತ್ತಿರುವದಾಗಿ ಹೇಳಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವು ಅರಣ್ಯ ಅಧಿಕಾರಿಗಳಿಗೆ ಗುಂಡು ನಿರೋಧಕ ಜಾಕೆಟ್ ಮತ್ತು ಸೂಕ್ತ ಶಸ್ತಾçಸ್ತçಗಳನ್ನು ಒದಗಿಸುವಂತೆ ಆದೇಶಿಸಿದೆ.

ತಾ. ೮ರಂದು ವಿಚಾರಣೆಯೊಂದರ ಸಂಬAಧ ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಎ. ಬೊಬ್ಡೆ ನೇತೃತ್ವದ ನ್ಯಾಯಪೀಠದ ಮುಂದೆ ಹಾಜರಾದ ಹಿರಿಯ ವಕೀಲ ಶ್ಯಾಮ್ ದಿವಾನ್ ವಿಶ್ವದ ಅರಣ್ಯ ಇಲಾಖೆ ಸಿಬ್ಬಂದಿಗಳಲ್ಲಿ ಭಾರತದ ಅರಣ್ಯ ಸಿಬ್ಬಂದಿಗಳ ಸಾವು ನೋವಿನ ಪಾಲು ಶೇಕಡಾ ೩೦% ಇದೆ ಎಂದು ತಿಳಿಸಿದರು.

ಆಗ ನ್ಯಾಯಮೂರ್ತಿ ಬೊಬ್ಡೆ ಅವರು ಅರಣ್ಯ ಅಧಿಕಾರಿಗಳು ಅತ್ಯಂತ ಶಕ್ತಿಯುತ ಶಕ್ತಿಯ ವಿರುದ್ಧ ಕರ್ತವ್ಯ ನಿರ್ವಹಿಸುತಿದ್ದಾರೆ ಅರಣ್ಯ ಅಪರಾಧಗಳ ಮೌಲ್ಯ ಮಿಲಿಯನ್ ಗಟ್ಟಲೆ ಡಾಲರ್‌ಗಳಲ್ಲಿದೆ. ಇದು ಅಂತರರಾಷ್ಟಿçÃಯ ಅಪರಾಧ ಆಗಿದೆ. ಪ್ಯಾಂಗೊಲಿನ್ ಪ್ರಾಣಿಯ ಚರ್ಮದ ಅನಧಿಕೃತ ವ್ಯಾಪಾರವು ಚೀನಾಕ್ಕೆ ವಿಸ್ತರಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಹೇಳಿದರಲ್ಲದೆ ಅರಣ್ಯ ಸಿಬ್ಬಂದಿಗೆ ಸಹಾಯ ಮಾಡಲು ಸಿಬಿಐನಂತಹ ಪ್ರಮುಖ ಸಂಸ್ಥೆಗಳನ್ನು ಬಳಸಿಕೊಳ್ಳಲು ಕೇಂದ್ರವು ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಕಳ್ಳ ಬೇಟೆಗಾರರ ಅಪರಾಧಗಳು ಮತ್ತು ಅವರ ಅಪರಾಧಗಳ ಆದಾಯವನ್ನು ಪತ್ತೆಹಚ್ಚಲು ಮತ್ತು ತನಿಖೆ ಮಾಡಲು ಪ್ರಾಮಾಣಿಕ ಅಧಿಕಾರಿಗಳೊಂದಿಗೆ ಜಾರಿ ನಿರ್ದೇಶನಾಲಯದಲ್ಲಿ ಪ್ರತ್ಯೇಕ ವಿಭಾಗ ಅಥವಾ ವನ್ಯಜೀವಿ ವಿಭಾಗ ಇರಬೇಕು. ಅರಣ್ಯ ಅಪರಾಧಗಳಲ್ಲಿ ಒಳಗೊಂಡಿರುವ ಮೊತ್ತವು ದೊಡ್ಡದಾಗಿರುವುದರಿಂದ ಪ್ರತ್ಯೇಕ ವಿಭಾಗವು ಅವಶ್ಯಕ ಎಂದು ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಅವರು ಕೇಂದ್ರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಉದ್ದೇಶಿಸಿ ಹೇಳಿದರು ಅಸ್ಸಾಂನ ಅರಣ್ಯ ರೇಂಜರ್‌ಗಳು ಶಸ್ತçಸಜ್ಜಿತವಾಗಿರುವುದಾಗಿ ಅವರು ಈ ಸಂದರ್ಭ ಮಾಹಿತಿ ನೀಡಿದರು.

ನಗರಗಳಲ್ಲಿನ ಪೊಲೀಸ್ ಅಧಿಕಾರಿಗಳಿಗಿಂತ ಅರಣ್ಯ ಅಧಿಕಾರಿಗಳಿಗೆ ದೊಡ್ಡ ಜವಾಬ್ದಾರಿಗಳಿವೆ. ಅವರು ಜನವಸತಿಯಿಲ್ಲದ ಕಾಡುಗಳ ದೊಡ್ಡ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಾರೆ. ಅರಣ್ಯ ಸಿಬ್ಬಂದಿಯೊಬ್ಬರು ತಮ್ಮ ಕರ್ತವ್ಯದಲ್ಲಿ ಏಕಾಂಗಿಯಾಗಿರುತ್ತಾರೆ, ನಗರದ ಪೊಲೀಸ್ ಅಧಿಕಾರಿಯು ನೆರವಿಗಾಗಿ ಕೂಡಲೇ ಕರೆ ಮಾಡಬಹುದು. ಆದರೆ ಅರಣ್ಯ ರಕ್ಷಕರಿಗೆ ಅದು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಹೇಳಿದರು.

ನಿರ್ದಿಷ್ಟ ಶ್ರೇಣಿಯ ಮೇಲಿರುವ ಅರಣ್ಯ ಅಧಿಕಾರಿಗಳಿಗೆ ಸ್ವರಕ್ಷಣೆಗಾಗಿ ಬುಲೆಟ್ ಪ್ರೂಫ್ ಜಾಕೆಟ್ , ಹೆಲ್ಮೆಟ್, ಶಸ್ತಾçಸ್ತç ಮತ್ತು ವಾಹನಗಳನ್ನು ಒದಗಿಸಬೇಕಿದೆ. ಅರಣ್ಯ ಪಡೆ ಸಿಬ್ಬಂದಿಗಳು ಅಸಹಾಯಕರಾಗಿದ್ದಾರೆ ಮತ್ತು ಅಪಾಯದಲ್ಲಿದ್ದಾರೆ, ಆದರೆ ಕಳ್ಳ ಬೇಟೆಗಾರರು ದುಷ್ಕೃತ್ಯಗಳನ್ನು ಮಾಡಿ ಲಾಭವನ್ನು ಪಡೆದುಕೊಳ್ಳುತ್ತಾರೆ. ಭಾರಿ ಶಸ್ತçಸಜ್ಜಿತ ಕಳ್ಳ ಬೇಟೆಗಾರರ ವಿರುದ್ಧ ನಿರಾಯುಧರಾಗಿರುವ ಅರಣ್ಯ ಸಿಬ್ಬಂದಿಯು ಯಾವುದೇ ಕಾನೂನನ್ನು ಹೇಗೆ ಜಾರಿಗೊಳಿಸಬಹುದು ಎಂದು ಊಹಿಸಿಕೊಳ್ಳುವುದು ಕಷ್ಟ ಎಂದೂ ಬೊಬ್ಡೆ ಹೇಳಿದರು.

ನ್ಯಾಯಾಲಯವು ಸಾಲಿಸಿಟರ್ ಜನರಲ್, ರಾವ್ ಮತ್ತು ಶ್ಯಾಮ್ ದಿವಾನ್ ಅವರನ್ನು ಅರಣ್ಯ ಸಿಬ್ಬಂದಿಯು ಭಯವಿಲ್ಲದೆ ತಮ್ಮ ಕರ್ತವ್ಯವನ್ನು ಹೇಗೆ ಮಾಡಬಹುದು ಎಂಬ ಕ್ರಮಗಳ ಬಗ್ಗೆ ಜಂಟಿ ವರದಿ ಸಲ್ಲಿಸುವಂತೆ ಸೂಚಿಸಿತು. - ಕೊವರ್‌ಕೊಲ್ಲಿ ಇಂದ್ರೇಶ್