ಮಡಿಕೇರಿ, ಜ. ೮: ಲಾರಿಯೊಂದು ರಸ್ತೆಗೆ ಅಡ್ಡಲಾಗಿ ನಿಂತು ಸುಮಾರು ಎರಡು ಗಂಟೆಗಳ ಕಾಲ ರಸ್ತೆಯಲ್ಲಿ ಸಂಚಾರ ಬಂದ್ ಆದ ಪ್ರಸಂಗ ಇಂದು ಎದುರಾಯಿತು.

ಸಂಜೆ ೪ ಗಂಟೆ ವೇಳೆಗೆ ಮಡಿಕೇರಿ - ಸೋಮವಾರಪೇಟೆ ರಸ್ತೆಯ ಸಂಪಿಗೆ ಕಟ್ಟೆ ಬಳಿ ಇರುವ ಕಾಂಕ್ರಿಟ್ ಮಿಶ್ರಣ ಘಟಕದ ಒಂದು ಕಡೆಯಿಂದ ತೆರಳಿ ಇನ್ನೊಂದು ಕಡೆಗೆ ಇಳಿದು ಟರ್ನ್ ಮಾಡುತ್ತಿದ್ದ ಸಂದರ್ಭ ಲಾರಿಯ ಮುಂಭಾಗ ರಸ್ತೆ ಬದಿಯ ತೋಟಕ್ಕೆ ನುಗ್ಗಿದೆ. ಲಾರಿಯ ಉಳಿದ ಅರ್ಧ ಭಾಗ ರಸ್ತೆಗೆ ಅಡ್ಡಲಾಗಿ ನಿಂತಿದೆ. ಮಳೆಯೂ ಬರುತ್ತಿದ್ದುದರಿಂದ ಲಾರಿ ಹಿಂದೆ - ಮುಂದೆ ಚಲಿಸಲಾಗದೆ ರಸ್ತೆ ಮಧ್ಯೆ ಉಳಿಯುವಂತಾಯಿತು. ನಂತರ ಜೆಸಿಬಿ ಸಹಾಯದಿಂದ ಎಳೆದು ಲಾರಿಯನ್ನು ತೆರವುಗೊಳಿಸಲಾಯಿತು. ೬ ಗಂಟೆಗೆ ರಸ್ತೆ ಸಂಚಾರ ಆರಂಭವಾಯಿತು. ೨ ಗಂಟೆಗಳ ಕಾಲ ಸಂಚಾರ ಬಂದ್ ಆಗಿ ವಾಹನ ಚಾಲಕರು ಪರದಾಡುವಂತಾಯಿತು. - ಚಿತ್ರ: ಮನೋಜ್ ಪಿ.ಬಿ.