ಮಡಿಕೇರಿ, ಜ. ೭: ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ ವತಿಯಿಂದ ಸಹಕಾರ ತರಬೇತಿ ಸಂಸ್ಧೆಯು ದೂರಶಿಕ್ಷಣ ತರಬೇತಿಯನ್ನು ಕೊಡಗು ಹಾಗೂ ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಹಕಾರ ಸಂಘ-ಸAಸ್ಥೆಗಳು ಸಹಕಾರ ವಿಷಯ ಕುರಿತು ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ತರಬೇತಿ ಶಿಕ್ಷಣ ತರಬೇತಿ ನೀಡಲು ಶಿಕ್ಷಣ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದೂರ ಶಿಕ್ಷಣ ಕೋರ್ಸ್ ಸಹಕಾರ ಸಂಘ/ ಸಂಸ್ಥೆಗಳ ಸಿಬ್ಬಂದಿಗಳಿಗೆ ಮಾತ್ರ ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೋರ್ಸ್ ಅವಧಿ ೬ ತಿಂಗಳು. ಸಂಪರ್ಕ ರಹಿತ ಕೋರ್ಸ್ ಪ್ರವೇಶಕ್ಕೆ ಅವಕಾಶ, ಅಧ್ಯಯನ ಸಾಹಿತ್ಯ ನೀಡಲಾಗುವುದು, ತರಬೇತಿ ಕೇಂದ್ರದಲ್ಲಿ ಪ್ರವೇಶ ಪ್ರಾರಂಭವಾಗಿದ್ದು, ಆನ್ಲೈನ್ ಮೂಲಕವೂ ಸಹ ಪ್ರವೇಶ ಪ್ರಾರಂಭವಾಗಿದೆ. ೧೦ ದಿನಗಳ ಸಂಪರ್ಕ ತರಗತಿಗಳನ್ನು ನಡೆಸಲಾಗುವುದು. ಪದೋನ್ನತಿ ಹಾಗೂ ವಾರ್ಷಿಕ ಬಡ್ತಿಗೆ ಈ ಕೋರ್ಸ್ ಕಡ್ಡಾಯವಾಗಿದೆ. ಅವಶ್ಯಕತೆ ಇದ್ದಾಗ ಆನ್ಲೈನ್ ತರಗತಿ ನಡೆಸಲಾಗುವುದು. ಆನ್ಲೈನ್ ಪ್ರವೇಶಾತಿಯ ಲಿಂಕ್ ತಿತಿತಿ.ಞsಛಿಜಿಜಛಿm.ಛಿo.iಟಿ ಹೈಬ್ರಿಡ್ ಮಾದರಿಯಲ್ಲಿ ಆಪ್ಲೈನ್ ಮತ್ತು ಆನ್ಲೈನ್ ತರಗತಿಗಳು. ಹೆಚ್ಚಿನ ಮಾಹಿತಿಗೆ ೦೮೨೭೨-೨೨೮೪೩೭, ೯೮೪೫೩೧೮೩೬೪, ೯೫೩೫೨೫೦೭೦೪, ೯೪೪೯೨೪೫೦೨೪, ೮೭೬೨೧೧೦೯೫೨ ಮತ್ತು ೮೭೬೨೯೨೫೮೬೨ನ್ನು ಸಂಪರ್ಕಿಸಬಹುದು ಎಂದು ಕೆಐಸಿಎಂ ಡಾ. ಆರ್.ಎಸ್. ರೇಣುಕಾ ಅವರು ತಿಳಿಸಿದ್ದಾರೆ