ನಾಪೆೆÇÃಕ್ಲು, ಜ. ೭: ನಗರದ ಮಾನವೀಯ ಸ್ನೇಹಿತರ ಒಕ್ಕೂಟದಿಂದ ಗ್ರಾ.ಪಂ. ಕಟ್ಟಡದ ಮುಂಭಾಗ ಸ್ಥಾಪಿಸಲಾದ ಔಷಧಿ ಪೆಟ್ಟಿಗೆಯನ್ನು ನಾಪೆÉÇÃಕ್ಲು ಠಾಣಾಧಿಕಾರಿ ಆರ್. ಕಿರಣ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇದೊಂದು ಉತ್ತಮ ಕಾರ್ಯವಾಗಿದ್ದು, ಇಂತಹ ಪೆಟ್ಟಿಗೆಯನ್ನು ಕೊಡಗಿನಾದ್ಯಂತ ಸ್ಥಾಪಿಸಿ ಬಡ ವರ್ಗದ ಮತ್ತು ವೃದ್ಧಾಶ್ರಮ ವಾಸಿಗಳ ಬದುಕಿಗೆ ಉಪಯೋಗವಾಗುವಂತೆ ಮಾಡ ಬೇಕು. ಮನೆಯಲ್ಲಿ ಉಪಯೋಗಕ್ಕೆ ಬಾರದ ಔಷಧಿ ಮತ್ತು ಟ್ಯಾಬ್ಲೇಟ್ ಗಳನ್ನು ಈ ಪೆಟ್ಟಿಗೆಗೆ ಹಾಕುವುದರ ಮೂಲಕ ಎಲ್ಲರೂ ನೆರವಾಗ ಬೇಕೆಂದರು. ಇದಕ್ಕೆ ಪೊಲೀಸ್ ಇಲಾಖೆಯ ಸಹಕಾರ ಇರುವು ದಾಗಿಯೂ ಅವರು ಈ ಸಂದರ್ಭ ಹೇಳಿದರು. ಜಿ.ಪಂ. ಸದಸ್ಯ ಮುರುಳೀಧರ್ ಕರುಂಬಮ್ಮಯ್ಯ ಮಾತನಾಡಿ, ಇಲ್ಲಿನ ಮಾನವೀಯ ಸ್ನೇಹಿತರ ಬಳಗ ಒಂದು ಉತ್ತಮ ಕಾರ್ಯಕ್ಕೆ ಕೈ ಹಾಕಿದ್ದು ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದರು. ಸ್ನೇಹಿತರ ಒಕ್ಕೂಟದ ಸದಸ್ಯೆ ಬಾಳೆಯಡ ದಿವ್ಯಾ ಮಂದಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು. ಈ ಸಂದರ್ಭ ಗ್ರಾ.ಪಂ. ನೂತನ ಸದಸ್ಯರಾದ ಕುಲ್ಲೇಟಿರ ಅರುಣ ಬೇಬಿ, ಶಿವಚಾಳಿಯಂಡ ಜಗದೀಶ್, ಮಚ್ಚೇಟಿರ ಕುಶು ಕುಶಾಲಪ್ಪ, ಕಾಳೆಯಂಡ ಸಾಬ ತಿಮ್ಮಯ್ಯ, ವನಜಾಕ್ಷಿ, ಕಂಗಾAಡ ಶಶಿ ಮಂದಣ್ಣ, ಚಿಯಕಪೂವಂಡ ಚೇರಿ, ಎಂ.ಎ. ಮನ್ಸೂರ್ ಆಲಿ ಮತ್ತಿತರರು ಇದ್ದರು