ಗೋಣಿಕೊಪ್ಪ ವರದಿ, ಜ. ೭: ಕೊಡಗು-ಕೇರಳ ಧಾರ್ಮಿಕ ಹಿನ್ನೆಲೆ ಇರುವ ಬೈತೂರು ನಮ್ಮೆಗೆ ಕೊರೊನಾದಿಂದ ತೆರಳಲು ಆಗದ ಭಕ್ತಾದಿಗಳಿಗೆ ಪೂಜೆ ನೆರವೇರಿಸಲು ಕೊಡಗಿನ ಹಲವು ಕಡೆಗಳಲ್ಲಿ ಪೂಜಾ ರಶೀದಿ ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ತಾ. ೨೨ ರಿಂದ ೨೫ ರವರೆಗೆ ನಡೆಯುವ ಹಬ್ಬದ ಪೂಜೆಗೆ ಇಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಪೂಜೆ ನಡೆಸಿಕೊಳ್ಳುವಂತೆ ಬೈತೂರು ನಮ್ಮೆಯ ತಕ್ಕರಾದ ಪುಗ್ಗೇರ ಪೊನ್ನಪ್ಪ ಹೇಳಿಕೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪೂಜೆಗೆ ನೋಂದಣಿ ಮಾಡಿಸಿಕೊಂಡವರಿಗೆ ಅಂಚೆಯ ಮೂಲಕ ಪ್ರಸಾದ ಕಳುಹಿಸಿಕೊಡಲಾಗುವುದು. ಮೃತ್ಯುಂಜಯ ಪೂಜೆ, ದೇವರ ಭಂಡಾರ, ಸಹಾಯಧನ, ನೈವೇದ್ಯ ಅಕ್ಕಿ, ತುಪ್ಪ, ಎಣ್ಣೆ ನೀಡಬಹುದು. ಹೆಚ್ಚಿನ ಮಾಹಿತಿಗೆ ೯೬೬೩೯೭೭೩೦೪ ಸಂಪರ್ಕಿಸಬಹುದಾಗಿದೆ.

ಕೇAದ್ರಗಳ ವಿವರ ಹಾಗೂ ದೂರವಾಣಿ ಸಂಖ್ಯೆಗಳು: ವೀರಾಜಪೇಟೆ-ಕಾಫಿ ವ್ಯಾಪಾರಿ ಅಮ್ಮಣಕುಟ್ಟಂಡ ಕಿರಣ್ (೯೪೪೮೫೩೧೭೧೭), ವೀರಾಜಪೇಟೆ ಕೊಡವ ಸಮಾಜ ಕ್ಲಬ್ ಪುಗ್ಗೇರ ಮೊಣ್ಣಯ್ಯ (೯೫೩೫೨೩೨೭೩೮), ವೀರಾಜಪೇಟೆ ಶ್ರೀನಿಧಿ ಎಂಟರ್‌ಪ್ರೆöÊಸಸ್‌ನ ವಿಶ್ವನಾಥ್ (೯೮೪೫೯೬೩೯೨೦), ಪೊನ್ನಂಪೇಟೆಯಲ್ಲಿ ಐನಂಡ ಬೋಪಣ್ಣ (೯೪೪೮೬೦೭೬೯೯), ಗೋಣಿಕೊಪ್ಪದಲ್ಲಿ ಹೊಟೇಲ್ ಕ್ಲಾಸಿಕ್ ಸಣ್ಣುವಂಡ ವಿನು ವಿಶ್ವನಾಥ್, ಜಮ್ಮಡ ಜಪ್ಪು, ಚಿರಿಯಪಂಡ ನಟೇಶ್, ಸಣ್ಣುವಂಡ ವಿಜಯ ೯೯೦೨೬೧೨೩೩೩, (೮೭೬೨೧೧೦೫೧೭), ಕೇಬಲ್ ಆಫೀಸ್ ವಿ.ವಿ. ಅರುಣ್‌ಕುಮಾರ್ ೯೪೪೮೩೩೧೩೩೯, ಬೀರುಗ ಚೆಪ್ಪುಡಿಕೊಲ್ಲಿಯ ಚೆಕ್ಕೇರ ರಾಜಪ್ಪ (೯೯೦೦೩೭೧೩೧೨), ಅಮ್ಮತ್ತಿಯ ಹೊಟೇಲ್ ಬ್ರದರ್‌ನ ಕುಟ್ಟಂಡ ಬೋಜಿ ಅಯ್ಯಪ್ಪ (೯೪೪೮೯೭೬೬೬೭), ಮೂರ್ನಾಡುವಿನಲ್ಲಿ ಕಾಫಿ ವ್ಯಾಪಾರಿ ಪುದಿಯೊಕ್ಕಡ ರಮೇಶ್ (೯೫೩೫೬೦೨೯೬೮), ಸಿಮೆಂಟ್ ವ್ಯಾಪಾರಿ ಬಡುವಂಡ ಬೋಪಣ್ಣ (೯೮೮೦೮೭೮೧೦೩) ಇಲ್ಲಿ ಸಂಪರ್ಕಿಸಬಹುದಾಗಿದೆ.