ಪೊನ್ನAಪೇಟೆ, ಜ. ೫: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎನ್‌ಸಿಸಿ ಅಧಿಕಾರಿ ಐ.ಡಿ. ಲೇಪಾಕ್ಷಿ ಅವರು ಎನ್‌ಸಿಸಿಯಲ್ಲಿ ಲೆಫ್ಟಿನೆಂಟ್ ರ‍್ಯಾಂಕ್ ಪಡೆದಿದ್ದಾರೆ. ಮಧ್ಯಪ್ರದೇಶ ರಾಜ್ಯದ ಗ್ವಾಲಿಯರ್‌ನ ಎನ್‌ಸಿಸಿ ಆಫೀಸರ್ ಟ್ರೆöÊನಿಂಗ್ ಅಕಾಡೆಮಿ ವತಿಯಿಂದ ಸೆಪ್ಟೆಂಬರ್ ೧೪ ರಿಂದ ಡಿಸೆಂಬರ್ ೧೩ ರವರೆಗೆ ೩ ತಿಂಗಳುಗಳ ಕಾಲ ಆಯೋಜಿಸಲಾಗಿದ್ದ ಎನ್‌ಸಿಸಿ ಫ್ರೀ ಕಮಿಷÀನ್ ಕೋರ್ಸ್, ಅಸೋಸಿಯೇಟ್ ಎನ್‌ಸಿಸಿ ಅಧಿಕಾರಿಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.

ತರಬೇತಿಯನ್ನು ಪೂರೈಸಿ, ಎನ್‌ಸಿಸಿಯಲ್ಲಿ ಲೆಫ್ಟಿನೆಂಟ್ ರ‍್ಯಾಂಕ್ ಪಡೆದು ಕೊಂಡಿರುತ್ತಾರೆ. ಇವರು ತರಬೇತಿಯ ಸಮಯದಲ್ಲಿ ಥ್ರೋಬಾಲ್, ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಚಿನ್ನದ ಪದಕ, ಟೇಬಲ್ ಟೆನ್ನಿಸ್‌ನಲ್ಲಿ ಬೆಳ್ಳಿ ಪದಕ ಹಾಗೂ ಡ್ರಿಲ್‌ನಲ್ಲಿ ‘ಎಕ್ಸಲೆಂಟ್’ ಸರ್ಟಿಫಿಕೆಟ್ ಪಡೆದುಕೊಂಡಿದ್ದಾರೆ.

ತರಬೇತಿಯಲ್ಲಿ ದೇಶದ ೧೦ ರಾಜ್ಯಗಳಿಂದ ಎನ್‌ಸಿಸಿ ಅಧಿಕಾರಿಗಳು ಭಾಗವಹಿಸಿದ್ದರು. ಕರ್ನಾಟಕದಿಂದ ಮೂವರು ಅಧಿಕಾರಿಗಳು ಪಾಲ್ಗೊಂಡಿದ್ದರು.

ಲೆಫ್ಟಿನೆAಟ್ ಐ.ಡಿ. ಲೇಪಾಕ್ಷಿ ಅವರು ಕೊಡವ ಬರಹಗಾರರಾಗಿದ್ದ ಬಿಳುಗುಂದ ಗ್ರಾಮದ ದಿ. ಐನಂಡ ಎಂ. ಧನಂಜಯ ಮತ್ತು ಭವಾನಿ ದಂಪತಿಯ ಪುತ್ರಿ ಹಾಗೂ ಟಿ. ಶೆಟ್ಟಿಗೇರಿ ಗ್ರಾಮದ ಚಟ್ಟಂಡ ಬೋಪಯ್ಯ ಅವರ ಪತ್ನಿ.