ಸೋಮವಾರಪೇಟೆ, ಜ. ೫: ಕೌಟುಂಬಿಕ ವಿಚಾರದಲ್ಲಿನ ಕ್ಷÄಲ್ಲಕ ಕಾರಣಕ್ಕೆ ೪ ತಿಂಗಳ ಗರ್ಭಿಣಿ ಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಿರಗಂದೂರು ಸಮೀಪದ ಗ್ರೀನ್‌ವ್ಯಾಲಿ ಎಸ್ಟೇಟ್‌ನ ಲೈನ್‌ಮನೆಯಲ್ಲಿ ನಡೆದಿದೆ.

ಗ್ರೀನ್‌ವ್ಯಾಲಿ ಎಸ್ಟೇಟ್‌ನ ಲೈನ್ ಮನೆಯಲ್ಲಿ ವಾಸವಿದ್ದ ಭಾಸ್ಕರ ಎಂಬವರ ಪತ್ನಿ ಸಂಧ್ಯಾ (೧೯) ಎಂಬಾಕೆಯೇ ನೇಣಿಗೆ ಶರಣಾದ ದುರ್ದೈವಿ. ಕುಟುಂಬದಲ್ಲಿ ನಡೆಯುತ್ತಿದ್ದ ಸಣ್ಣಪುಟ್ಟ ವಿಚಾರಕ್ಕೆ ಮನನೊಂದು ನೇಣಿಗೆ ಶರಣಾಗಿರುವದಾಗಿ ಕುಟುಂಬಸ್ಥರು ಪೊಲೀಸ್ ದೂರು ನೀಡಿದ್ದಾರೆ.

ಕುಟುಂಬಸ್ಥರು ಮನೆಯಿಂದ ಹೊರಗಿದ್ದ ಸಂದರ್ಭ ಮನೆಯೊಳಗೆ ಸೀರೆಯಿಂದ ನೇಣು ಬಿಗಿದುಕೊಂಡ ಸಂಧ್ಯಾಳನ್ನು ತಕ್ಷಣ ಇಳಿಸುವ ಪ್ರಯತ್ನ ನಡೆದರೂ, ಯಾವದೇ ಪ್ರಯೋಜನವಾಗಲಿಲ್ಲ.

ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರ ಸಮಕ್ಷಮ ಠಾಣಾಧಿಕಾರಿ ವಿರೂಪಾಕ್ಷ, ಸಿಬ್ಬಂದಿ ಗಳಾದ ಧನಲಕ್ಷಿö್ಮÃ, ಶಿವಕುಮಾರ್ ಅವರುಗಳು ಮೃತದೇಹದ ಪಂಚನಾಮೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.