ಮಡಿಕೇರಿ, ಜ. ೪: ಇತ್ತೀಚಿನ ದಿನಗಳಲ್ಲಿ ದಿನದಿಂದ ಜನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ನಿತ್ಯೋಪಯೋಗಿ ವಸ್ತುಗಳಿಂದ ಹಿಡಿದು ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ಗಳ ದರ ಏರುತ್ತಲೇ ಇದೆ. ಕೊರೊನಾದಿಂದಾಗಿ ಜನರು ಕೆಲಸವಿಲ್ಲದೆ, ಸಂಪಾದನೆಯಿಲ್ಲದೆ ಪರಿತಪಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಇದೀಗ ಬೆಲೆ ಏರಿಕೆಯ ಹೊಡೆತದಿಂದಾಗಿ ಇನ್ನಷ್ಟು ಸಂಕಷ್ಟಕ್ಕೀಡಾಗುವAತಾಗಿದೆ.ಜನರಿಗೆ ಅಗತ್ಯವಾಗಿ ಬೇಕಾಗಿರುವದು ನಿತ್ಯೋಪಯೋಗಿ ವಸ್ತುಗಳು. ಆದರೀಗ ಈ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಒಂದೊಮ್ಮೆ ಕಳೆದ ಹತ್ತು ತಿಂಗಳ ಹಿಂದೆ ಕೊರೊನಾ ಸೋಂಕು ಹರಡಿದ ಸಂದರ್ಭ ಲಾಕ್ ಡೌನ್ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿತ್ತು.ಇದನ್ನರಿತ ಸರಕಾರ, ಸ್ಥಳೀಯ ಆಡಳಿತ ಜನರ ಸಂಕಷ್ಟ ಅರಿತು ಬೆಲೆ ನಿಗದಿಪಡಿಸಿತ್ತು. ಆದರೀಗ ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೆ ಸರಕಾರವೇ ಬೆಲೆ ಏರಿಕೆ ಮಾಡುತ್ತಲೇ ಹೋಗುತ್ತಿದೆ. ಓರ್ವ ಮನುಜ ಬದುಕಬೇಕಾದರೆ ಆಹಾರ ಅತ್ಯಾವಶÀ್ಯ. ಆದರೀಗ ಆಹಾರ ಉತ್ಪನ್ನಗಳ ಬೆಲೆ ಗಗನಕ್ಕೇರುತ್ತಿದೆ. ಅಡುಗೆಗೆ ಅತ್ಯಾವಶÀ್ಯವಾದ ಎಣ್ಣೆಯ ಬೆಲೆ ೧೧೫ ಇದ್ದದ್ದು ಇದೀಗ ೧೩೦ ಆಗಿದೆ. (ಮೊದಲ ಪುಟದಿಂದ) ತೆಂಗಿನ ಎಣ್ಣೆ ೧೫೦ ಇದ್ದದ್ದು ೨೦೦ ದಾಟಿದೆ. ಬೇಳೆಕಾಳು ೮೦ ಇದ್ದದ್ದು ೧೦೦ಕ್ಕೇರಿದೆ. ಸಂಬಾರ, ಉದ್ದಿನ ಬೇಳೆ ಬೆಲೆ ಒಂದು ಕೆಜಿಗೆ ೩೦ ರೂಪಾಯಿಯಷ್ಟು ಹೆಚ್ಚಾಗಿದೆ. ಸಕ್ಕರೆ,ಈರುಳ್ಳಿ, ಬೆಳ್ಳುಳ್ಳಿ, ಜೀರಿಗೆ, ಸಾಸಿವೆ, ಬಟಾಣಿ, ಆಲೂಗೆಡ್ಡೆ, ಬೆಲ್ಲ, ಕಡಲೆ, ಸೇರಿದಂತೆ ಇತರ ಎಲ್ಲ ದಿನಸಿ ಸಾಮಗ್ರಿಗಳ ಬೆಲೆ ಕೆಜಿಗೆ ಹತ್ತು ರೂಪಾಯಿಯಷ್ಟು ಹೆಚ್ಚಾಗಿದೆ.
ಅನಿಲ, ತೈಲ ಏರಿಕೆ ಇನ್ನು ಜೀವನೋಪಯೋಗಕ್ಕೆ ಅತಿ ಅಗತ್ಯವಾದ ಅಡುಗೆ ಅನಿಲ ಹಾಗೂ ತೈಲ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಎರಡು ತಿಂಗಳ ಅವಧಿಯಲ್ಲಿ ಅನಿಲ ಬೆಲೆ ಎರಡು ಬಾರಿ ಏರಿಕೆ ಕಂಡಿದೆ. ಮೊದಲ ಅವಧಿಯಲ್ಲಿ ೫೦ರೂಪಾಯಿ ಹಾಗೂ ಇನ್ನೊಂದು ತಿಂಗಳಲ್ಲಿ ೫೦ ರೂಪಾಯಿಯಂತೆ ಒಟ್ಟು ೧೦೦ ರೂಪಾಯಿ ಏರಿಕೆಯಾಗಿದೆ. ಪ್ರಸ್ತುತ ಅನಿಲದ ಬೆಲೆ ಸಿಲಿಂಡರ್ಗೆ ರೂ.೭೧೨ ರಷ್ಟಿದೆ.
ತೈಲ ಬೆಲೆ ಕೂಡ ಏರಿಕೆ ಕಾಣುತ್ತಿದೆ. ಪೆಟ್ರೋಲ್ ಬೆಲೆ ಕಳೆದ ತಾ.೬ರವರೆಗೆ ೮೭.೧೭ರಷ್ಟಿತ್ತು. ಡೀಸೆಲ್ ಬೆಲೆ ೭೮.೭೮ರಷ್ಟಿತ್ತು. ತಾ. ೭ರಿಂದ ಬೆಲೆ ಏರಿಕೆಯಾಗಿದೆ. ಪಟ್ರೋಲ್ ಬೆಲೆ ೩೧ ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ ೨೮ ಪೈಸೆ ಏರಿಕೆಯಾಗಿದೆ. ಪ್ರಸ್ತುತ ಪೆಟ್ರೋಲ್ ಬೆಲೆ ರೂ. ೮೭.೪೮ರಷ್ಟಿದ್ದರೆ, ಡೀಸೆಲ್ ಬೆಲೆ ೭೯.೦೬ರಷ್ಟಿದೆ. ಪ್ರತಿನಿತ್ಯ ಬೆಲೆ ಏರಿಕೆಯಿಂದಾಗಿ ಜನತೆ ಪರಿತಪಿಸುವಂತಾಗಿದೆ.