ಮಡಿಕೇರಿ, ಜ. ೫: ಮೊಬೈಲ್ ಫೋನ್ ನೀಡುವ ಆಸೆಯೊಡ್ಡಿ ಸೋನ್ ಪಪ್ಡಿ ಹಾಗೂ ಅತೀ ಕಡಿಮೆ ದರದ ಸರ ಒಂದನ್ನು ಪಾರ್ಸಲ್ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

ಬೆಂಗಳೂರಿನಿAದ ಯುವಕನೋರ್ವ ಮಡಿಕೇರಿ ಮುತ್ತಪ್ಪ ದೇವಾಲಯದ ನಿವಾಸಿ ಗಂಗಮ್ಮ (ಹೆಸರು ಬದಲಿಸಲಾಗಿದೆ) ಎಂಬವರಿಗೆ ಕರೆ ಮಾಡಿ ‘ನಿಮ್ಮ ಫೋನ್ ಸಂಖ್ಯೆಗೆ ಬಹುಮಾನ ದೊರೆತಿದೆ. ಹೊಸ ಫೋನ್ ಒಂದು ನಿಮ್ಮ ಕೈ ಸೇರಲಿದೆ’ ಎಂಬ ಆಸೆ ಹುಟ್ಟಿಸಿ ವಿಳಾಸ ಪಡೆದುಕೊಂಡಿದ್ದಾನೆ. ನಂತರ ಆ ವಿಳಾಸಕ್ಕೆ ಅಂಚೆ ಇಲಾಖೆಯ ‘ವ್ಯಾಲ್ಯೂ ಪೇಯೆಬಲ್ ಪೋಸ್ಟ್ (ಗಿPP)’ ಸೌಲಭ್ಯದ ಮೂಲಕ ‘ಪಾರ್ಸಲ್’ ಒಂದನ್ನು ಕಳಿಸಿದ್ದಾರೆ. ‘ಪಾರ್ಸಲ್’ ಅನ್ನು ಪಡೆಯಲು ರೂ. ೧,೫೦೦ ಮೊತ್ತ ನೀಡಿದ ಗಂಗಮ್ಮ ಮನೆಗೆ ಬಂದು ನೋಡಿದಾಗ ಸೋನ್ ಪಪ್ಡಿ ಹಾಗೂ ಅತೀ ಕಡಿಮೆ

ದರದ ಸರವನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಸೋನ್ ಪಪ್ಡಿಯು ದುರ್ವಾಸನೆ ಬರುತ್ತಿರುವುದಾಗಿಯೂ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಅಂಚೆ ಇಲಾಖೆಯನ್ನು ಸಂಪರ್ಕಿಸಿದಾಗ ‘ಗಿPP’ ಮೂಲಕ ಬರುವ ಪಾರ್ಸಲ್‌ಗಳ ಪೈಕಿ ಈ ರೀತಿ ಅನೇಕ ಮೋಸದ ಪ್ರಕರಣಗಳು ವರದಿಯಾಗಿವೆ. ಪ್ರಸ್ತುತ ಪ್ರಕರಣದಲ್ಲಿಯೂ ಅದೇ ರೀತಿ ಆಗಿದೆ. ಈ ‘ಪಾರ್ಸಲ್’ ಅನ್ನು ಪಡೆಯಲು ಬಂದ ಗಂಗಮ್ಮ ಅವರಿಗೆ ಈ ಕುರಿತು ಜಾಗೃತಿ ಮೂಡಿಸಲು ಪ್ರಯತ್ನಿಸಿದರೂ ಅವರು ನಮ್ಮ ಮಾತು ಕೇಳಲಿಲ್ಲ. ಹಣ ಪಾವತಿಸಿ ‘ಪಾರ್ಸಲ್’ ಮನೆಗೆ ತೆಗೆದುಕೊಂಡು ಹೋಗಿ ತೆರೆÀದ ನಂತರ ಅಂಚೆ ಕಚೇರಿಗೆ ಬಂದು ತಾವು ಮೋಸದ ಬಲೆಗೆ ಸಿಲುಕಿಕೊಂಡಿರುವುದಾಗಿ ಹೇಳಿದ್ದಾರೆ. ಒಮ್ಮೆ ‘ಪಾರ್ಸಲ್’ ತೆರೆದರೆ ಅದನ್ನು ಹಿಂಪಡೆಯುವ ಸೌಲಭ್ಯವಿಲ್ಲ. ಗಿPP ಮುಖಾಂತರ ಯಾರು ‘ಪಾರ್ಸಲ್’ ಕಳುಹಿಸಿದ್ದಾರೊ ಅವರಿಗೆ ನಾವು ‘ಪಾರ್ಸಲ್’ನ ಮೊತ್ತ ನೀಡಲೇಬೇಕಾಗುತ್ತದೆ ಎಂದು ಅಂಚೆ ಇಲಾಖೆಯ ಸಿಬ್ಬಂದಿಯೋರ್ವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಹೆಬ್ಬಾಲೆ ಸಮೀಪದ ಬಾಲಾಜಿ ನಗರದಿಂದ ‘ಪಾರ್ಸಲ್’ ಬಂದಿರುವುದಾಗಿ ಅವರು ತಿಳಿಸಿದ್ದಾರೆ.