ಶನಿವಾರಸಂತೆ, ಜ. ೫: ಶನಿವಾರಸಂತೆ ಪೊಲೀಸ್ ಠಾಣೆ ಹಾಗೂ ಕೊಡ್ಲಿಪೇಟೆ ಉಪಠಾಣೆ ವತಿಯಿಂದ ಪೊಲೀಸ್ ಕುಟುಂಬ ದವರು ಹೊಸ ವರ್ಷಾಚರಣೆ ಮಾಡಿದರು.
ಸಮಾರಂಭದಲ್ಲಿ ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ, ಬಹುಮಾನಗಳನ್ನು ವಿತರಿಸಲಾಯಿತು. ಬಹುಮಾನ ವಿತರಿಸಿದ ವೃತ್ತ ನಿರೀಕ್ಷಕ ಮಹೇಶ್ ದಂಪತಿಯನ್ನು ಪೊಲೀಸರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಠಾಣಾಧಿಕಾರಿ ಹೆಚ್.ಇ. ದೇವರಾಜ್, ಸಹಾಯಕ ಠಾಣಾಧಿಕಾರಿಗಳಾದ ಹೆಚ್.ಎಂ. ಗೋವಿಂದ್, ಶಿವಲಿಂಗ, ಕೃಷ್ಣೇಗೌಡ, ಜಯಕುಮಾರ್, ಅತಿಥಿಯಾಗಿ ಪತ್ರಕರ್ತ ನರೇಶ್‌ಶ್ಚಂದ್ರ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಠಾಣಾಧಿಕಾರಿ ದೇವರಾಜ್ ಸ್ವಾಗತಿಸಿ, ಪೊಲೀಸ್ ಹೆಡ್‌ಕಾನ್ಸ್ ಟೇಬಲ್ ಬೋಪಣ್ಣ ನಿರೂಪಿಸಿ, ಸಿಬ್ಬಂದಿ ಕೆ.ಎಂ. ಪ್ರದೀಪ್‌ಕುಮಾರ್ ವಂದಿಸಿದರು.