(ವಿಶೇಷ ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಜ. ೩: ಅತ್ಯಂತ ಕೆಳ ಸ್ತರದಲ್ಲಿರುವ ಆದಿವಾಸಿಗಳು ಸಮಾಜದ ಮುಖ್ಯ ವಾಹಿನಿಯಲ್ಲಿ ಬರಬೇಕು ಎಂಬ ಮೂಲ ಕಲ್ಪನೆಯೊಂದಿಗೆ ಜಾರಿಯಾದ ಅರಣ್ಯ ಹಕ್ಕು ಕಾ�ರಿಂi�� ��U�ರಿP�g� ��್ಬP�ಂi�� ��ĺ����s�ಯ್ದೆ ೨೦೦೬ರ ಮಸೂದೆ ಇನ್ನೂ ಕೂಡ ಸರಿಯಾದ ರೀತಿಯಲ್ಲಿ ಜಾರಿಯಾಗಿಲ್ಲ.

ಸ್ಥಳೀಯವಾಗಿ ಲಭ್ಯವಿರುವ ದಾಖಲೆಗಳನ್ನು ಮೂಲವಾಗಿಟ್ಟುಕೊಂಡು ಆದಿವಾಸಿಗಳಿಗೆ ಹಕ್ಕುಗಳನ್ನು ನೀಡಬೇಕೆಂಬ ನಿಯಮವಿದ್ದರೂ ಇವುಗಳ ಬಗ್ಗೆ ಅಷ್ಟಾಗಿ ಆಸಕ್ತಿ ವಹಿಸದ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು ಆದಿವಾಸಿಗಳಿಗೆ ಹಕ್ಕುಗಳನ್ನು ಸರಿಯಾದ ಪ್ರಮಾಣದಲ್ಲಿ ನೀಡಲು ಅಡ್ಡಗಾಲು ಹಾಕಿದ್ದಾರೆ.

ವೈಯಕ್ತಿಕ ಹಕ್ಕು ಹಾಗೂ ಸಮುದಾಯ ಹಕ್ಕುಗಳನ್ನು ಒಟ್ಟಾಗಿ ನೀಡಬೇಕಿದೆ. ಇಂತಹ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಕಾಯ್ದೆ ಜಾರಿಗೊಂಡು ೧೪ ವರ್ಷ ಕಳೆದರೂ ಇನ್ನು ಕೂಡ ಇದರ ಪ್ರಯೋಜನ ಅರ್ಹ ಆದಿವಾಸಿಗಳಿಗೆ ದೊರಕದಿರುವುದು ನಮ್ಮ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ದಕ್ಷಿಣ ಕೊಡಗಿನ ನಾಗರಹೊಳೆ ವನ್ಯಜೀವಿ ಸರಹದ್ದಿನ ಗದ್ದೆ ಹಾಡಿಯಲ್ಲಿ ವಾಸವಿರುವ ೬೦ ಆದಿವಾಸಿ ಕುಟುಂಬಗಳು ಇಂದಿಗೂ ಮೂಲಭೂತ ಸೌಕರ್ಯದಿಂದ ವಂಚಿತಗೊAಡು ಅರಣ್ಯ ಕಾಯ್ದೆ ಮಸೂದೆಯಿಂದ ಇಂದೋ, ನಾಳೆಯೋ ಪ್ರಯೋಜನ ಸಿಗಬಹುದು, ನಮ್ಮ ಬದುಕು ಹಸನಾಗಬಹುದು ಎಂಬ ಆಸೆ ಕಣ್ಣುಗಳಿಂದ ಎದುರು ನೋಡುತ್ತಿದ್ದಾರೆ.

ನಾಗರಹೊಳೆ ಸಮೀಪದ ಗದ್ದೆಹಾಡಿಯಲ್ಲಿ ನೂರಾರು ಎಕರೆ ಜಾಗವಿದ್ದು ಅರಣ್ಯ ಹಕ್ಕು ನಿಯಮದಡಿ ಇಲ್ಲಿರುವ ಕುಟುಂಬಗಳಿಗೆ ಕನಿಷ್ಟ ೧೦ ಎಕರೆ ಭೂಮಿ ಸಿಗಬೇಕಾಗಿದೆ. ಶತಮಾನಗಳಿಂದ ಪ್ರಕೃತಿಯನ್ನು ದೇವರೆಂದು ನಂಬಿರುವ ಇಲ್ಲಿಯ ಜನತೆಗೆ ಆಗಿನ ಕಾಲದಲ್ಲಿ ಆನೆ ಕಂದಕ ಮಾದರಿಯಲ್ಲಿ ನಿರ್ಮಾಣಗೊಂಡಿರುವ ಕುಂತೂರು ಕೋಟೆ ದೇವಾಲಯ, ಇಲ್ಲಿರುವ ನಾಯಿ, ಹುಲಿ, ಆನೆಯ ವಿಗ್ರಹಗಳು ಶತಮಾನಗಳಿಂದ ದೇವರನ್ನು ಇಲ್ಲಿಯ ಆದಿವಾಸಿಗಳು ಪೂಜಿಸುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ನಿಂತಿವೆ. ಅಲ್ಲದೆ ೧೯೫೮ರಲ್ಲಿ ಈ ಭಾಗದಲ್ಲಿ ಆದಿವಾಸಿಗಳಿಗೆ ನಿರ್ಮಿಸಿರುವ ಕಾಲೋನಿಗಳು, ಕುಡಿಯಲು ಬಳಸುವ ನೀರಿನ ಬಾವಿ, ವ್ಯವಸಾಯಕ್ಕೆ ಬೇಕಾದ ಕೆರೆ ಹಾಗೂ ವ್ಯವಸಾಯ ಬದುಗಳು ಇನ್ನು ಕೂಡ ಜೀವಂತವಾಗಿವೆ. ಆದರೆ ಹಕ್ಕುಗಳು ಕಾಯ್ದೆಯಾಗಿ ಜಾರಿಗೊಂಡರೂ ಆದಿವಾಸಿಗಳ ಜೀವನಕ್ಕೆ ಇನ್ನು ಕೂಡ ಪೂರ್ತಿಯಾಗಿ ಕೈಸೇರಿಲ್ಲ.

೧೯೫೨ರಲ್ಲಿ ಜೇನುಕುರುಬ ಸಮುದಾಯವನ್ನು ಪ್ರಾಚೀನ ಬುಡಕಟ್ಟು ಎಂದು ಘೋಷಣೆ ಮಾಡಿದೆ. ವನ್ಯಜೀವಿ ಕಾಯ್ದೆ, ಹುಲಿ ಸಂರಕ್ಷಿತ ಪ್ರದೇಶ ಹಾಗೂ ಅಭಯಾರಣ್ಯವನ್ನು ಮೀರಿದ ಕಾಯ್ದೆ ಇದಾಗಿದ್ದು ಸಮುದಾಯಗಳಿಗೆ ಆಹಾರ ನೀರು ಸೇರಿದಂತೆ ವ್ಯವಸಾಯ ಭೂಮಿ, ಮನೆ ನಿರ್ಮಾಣ, ಎಲ್ಲವೂ ಈ ಕಾಯ್ದೆಯಿಂದ ನೀಡಬೇಕಾಗಿದೆ. ಕೇವಲ ಕುಂಟು ನೆಪಗಳ ಮೂಲಕ ಆದಿವಾಸಿಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಹಕ್ಕುಗಳು ಇನ್ನೂ ಕೂಡ ಸಿಕ್ಕಿಲ್ಲ. ಕಾಯ್ದೆಯಲ್ಲಿ ಹೇಳಿರುವಂತೆ ೨೦೦೯-೧೦ನೇ ಸಾಲಿನಲ್ಲಿ ವೈಯಕ್ತಿಕ ಹಾಗೂ ಸಮುದಾಯದ ಹಕ್ಕುಗಳನ್ನು ನೀಡುವಂತೆ ಹಲವು ಬಾರಿ ಅರಣ್ಯ ಹಕ್ಕು ಸಮಿತಿಯಲ್ಲಿ ಸಭೆ ಸೇರಿ ಸಭೆಯ ನಿರ್ಣಯವನ್ನು ಠರಾವು ಮಂಡಿಸಿ ಇಲಾಖೆಗೆ ಕಳುಹಿಸಿದ್ದರು. ಬಹುಮುಖ್ಯವಾಗಿ ನಡೆಸಿದ ಅರಣ್ಯ ಹಕ್ಕು ಗ್ರಾಮ ಸಭೆಯ ನಿರ್ಣಯಕ್ಕೆ ಬೆಲೆಯೇ ಇಲ್ಲದಂತಾಗಿದೆ