ಶನಿವಾರಸಂತೆ, ಜ. ೩: ಶನಿವಾರಸಂತೆ ನಗರದಲ್ಲಿ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ದ್ವಿಚಕ್ರ ವಾಹನ ಸವಾರರುಗಳ ಜಾಥಾ ಹಮ್ಮಿಕೊಳ್ಳಲಾಯಿತು. ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಇ.ಹೆಚ್. ದೇವರಾಜ್ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ಬಳಿ ಜಾಥಾವನ್ನು ಉದ್ದೇಶಿಸಿ, ದ್ವಿಚಕ್ರ ವಾಹನ ಸವಾರರಿಗೆ ಸಂಚಾರ ನಿಯಮಗಳ ಬಗ್ಗೆ ಹಾಗೂ ಹೆಲ್ಮೆಟ್‌ನ ಮಹತ್ವದ ಬಗ್ಗೆ ಅರಿವು ಮೂಡಿಸಿದರು.

ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಗುಡುಗಳಲೆವರೆಗೆ ದ್ವಿಚಕ್ರ ವಾಹನಗಳ ಸವಾರರು ತಮ್ಮ ವಾಹನಗಳಲ್ಲಿ ಹೆಲ್ಮೆಟ್ ಧರಿಸಿ ಜಾಥಾ ನಡೆಸಿದರು. ಈ ಸಂದರ್ಭ ಠಾಣಾಧಿಕಾರಿ ದೇವರಾಜ್ ಸಿಬ್ಬಂದಿಗಳಾದ ಬೋಪಣ್ಣ, ಸಫೀರ್, ಪ್ರದೀಪ್, ಹರೀಶ್, ಲೋಕೇಶ್, ಮಹಿಳಾ ಸಿಬ್ಬಂದಿಗಳಾದ ಶಶಿ, ಪೂರ್ಣಿಮ ಹಾಗೂ ಇತರರು ಪಾಲ್ಗೊಂಡಿದ್ದರು.