ಮಡಿಕೇರಿ, ಜ. ೪: ಉಜಿರೆ ಗ್ರಾ.ಪಂ. ಮತ ಎಣಿಕೆ ಸಂದರ್ಭ ಎಸ್‌ಡಿಪಿಐ ಪಕ್ಷದ ಕಾರ್ಯಕರ್ತರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ಸುಳ್ಳು ಆರೋಪ ಮಾಡಲಾಗಿದ್ದು, ಇದು ಖಂಡನೀಯ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧ್ಯಕ್ಷ ಎಂ.ಎ. ಮನ್ಸೂರ್ ಮಾತನಾಡಿ, ಎಸ್‌ಡಿಪಿಐ ಗೆಲುವನ್ನು ಜೀರ್ಣಿಸಿಕೊಳ್ಳಲಾಗದ ಬಿಜೆಪಿ ಪಕ್ಷ ಸುಳ್ಳು ಆರೋಪ ಮಾಡಿ,ಕಾರ್ಯಕರ್ತರನ್ನು ಬಂಧಿಸುವ ಕೆಲಸ ಮಾಡಿದೆ ಎಂದು ದೂರಿದರು. ಪಾಕಿಸ್ತಾನವನ್ನು ಎಸ್‌ಡಿಪಿಐ ವಿರೋಧಿಸುತ್ತದೆ ಎಂದರಲ್ಲದೆ, ಈ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸುವAತೆ ಆಗ್ರಹಿಸಿದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕರ್, ಜಿಲ್ಲಾ ಸಮಿತಿ ಸದಸ್ಯರಾದ ಬಷೀರ್, ರಿಯಾಜ್, ನಗರಾಧ್ಯಕ್ಷ ಕಲೀಲ್, ಉಪಾಧ್ಯಕ್ಷ ಮೈಕಲ್ ವೇಗಸ್, ಪಿಎಫ್‌ಐ ಕಾರ್ಯದರ್ಶಿ ತುಫೈಲ್ ಪ್ರತಿಭಟನೆಯಲ್ಲಿ ಇದ್ದರು.