ಮಡಿಕೇರಿ, ಜ. ೪: ಮಾಯಮುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. ೧೮.೧೮ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಚೆಪ್ಪುಡೀರ ಎಂ. ಅಪ್ಪಯ್ಯ ತಿಳಿಸಿದರು.
ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದಸ್ಯರುಗಳಿಗೆ ಶೇ. ೧೪ ಡಿವಿಡೆಂಡ್ ನೀಡಲಾಗುವುದು. ೨೦೧೯-೨೦ನೇ ಸಾಲಿನಲ್ಲಿ ರೂ. ೫೫೬.೫೨ ಲಕ್ಷ ಠೇವಣಿ ಇದ್ದು, ಕೃಷಿ ಹಾಗೂ ಕೃಷಿಯೇತರ ಸಾಲ ರೂ. ೯೬೮.೫೮ ಲಕ್ಷ ನೀಡಿದ್ದು, ವಸೂಲಾತಿ ಪ್ರಗತಿಯಲ್ಲಿದೆ.
ಸಂಘದಲ್ಲಿ ರೈತರಿಗೆ ಉಪಯೋಗ ವಾಗುವಂತೆ ಕೃಷಿ ಉಪಕರಣಗಳು (ಫೈಬರ್ ಏಣಿ, ಗೆಮಕ್ಷನ್, ಕಾಫಿ ತಾಟ್) ಮಾರಾಟಕ್ಕೆ ಲಭ್ಯವಿದ್ದು, ಕಾಫಿ ಔಟರ್ನ್ ಟೆಸ್ಟ್ ಯಂತ್ರವಿದ್ದು, ಸದಸ್ಯರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಉಪಾಧ್ಯಕ್ಷ ಜಂಗಮರ ಎಸ್. ಲೋಕೇಶ್, ಸಂಘದ ವಸೂಲಾತಿ ಪ್ರಗತಿಯಲ್ಲಿದೆ.
ಸಂಘದಲ್ಲಿ ರೈತರಿಗೆ ಉಪಯೋಗ ವಾಗುವಂತೆ ಕೃಷಿ ಉಪಕರಣಗಳು (ಫೈಬರ್ ಏಣಿ, ಗೆಮಕ್ಷನ್, ಕಾಫಿ ತಾಟ್) ಮಾರಾಟಕ್ಕೆ ಲಭ್ಯವಿದ್ದು, ಕಾಫಿ ಔಟರ್ನ್ ಟೆಸ್ಟ್ ಯಂತ್ರವಿದ್ದು, ಸದಸ್ಯರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಉಪಾಧ್ಯಕ್ಷ ಜಂಗಮರ ಎಸ್. ಲೋಕೇಶ್, ಸಂಘದ ಮಲ್ಲೇಂಗಡ ಪಿ. ಮುತ್ತಮ್ಮ, ಹರಿಜನರ ಡಿ. ರಮೇಶ್, ಪಂಜರಿಯರವರ ಪಿ. ಅಪ್ಪಣ್ಣ ಹಾಗೂ ಕೆಡಿಸಿಸಿ ಬ್ಯಾಂಕಿನ ಗೋಣಿಕೊಪ್ಪಲು ಶಾಖೆಯ ವ್ಯವಸ್ಥಾಪಕ ಕೆ.ಜೆ. ಆಂಟೋನಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಕೆ. ಇಸ್ಸಾರ್ ಹಾಜರಿದ್ದರು.