ಮಡಿಕೇರಿ, ಜ. ೪: ನಗರದ ಸುಮಾರು ೨೦೦ವರ್ಷಗಳ ಇತಿಹಾಸವಿರುವ ಶ್ರೀ ಓಂಕಾರೇಶ್ವರ ದೇವಾಲಯದ ಸನ್ನಿಧಿಯಲ್ಲಿನ ಅಶ್ವತ್ಥಕಟ್ಟೆಯ ನಾಗನಕಟ್ಟೆ ಅಭಿವೃದ್ಧಿ ಕಾರ್ಯಕೈಗೆತ್ತಿಕೊಂಡಿದ್ದು, ಮುಂದಿನ ಫೆಬ್ರವರಿ ತಿಂಗಳಲ್ಲಿ ಪೂರ್ಣ ಗೊಳ್ಳಲಿದೆ. ಈಗಾಗಲೇ ಸನ್ನಿಧಿಯಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿದ್ದು, ತಂತ್ರಿಗಳ ಸೂಚನೆಯಂತೆ ಮುಂದಿನ ೪೮ ದಿನಗಳ ಕಾಲ ಯಾವದೇ ಅಭಿಷೇಕ, ತೀರ್ಥಪೂಜೆ ಕಾರ್ಯಗಳು ಇರುವದಿಲ್ಲವೆಂದು ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ಅಶ್ವತ್ಥಕಟ್ಟೆ ಹಾಗೂ ನಾಗನಕಟ್ಟೆ ಶಿಥಿಲಾವಸ್ಥೆಗೆ ತಲಪಿತ್ತು, ಜ್ಯೋತಿಷಿಗಳ ಪ್ರಶ್ನೆಯಲ್ಲಿ ಕೂಡ ಅಭಿವೃದ್ಧಿಪಡಿಸಬೇಕೆಂದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ವಾಸ್ತುಶಿಲ್ಪಿ ರತೀಶ್ ಕಾರಂತ್ ಅವರ ಮಾರ್ಗದರ್ಶನದಲ್ಲಿ ರೂ.೧.೯೦ಲಕ್ಷ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ. ಇನ್ನೂ ರೂ.೬೦ರಿಂದ ೭೦ಸಾವಿರ ವೆಚ್ಚದಲ್ಲಿ ನಾಗನಕಟ್ಟೆ ಅಭಿವೃದ್ಧಿಪಡಿಸ ಲಾಗುವದು. ಮುಂದಿನ ಫೆಬ್ರವರಿಯಲ್ಲಿ ಈ ಕಾರ್ಯ ನೆರವೇರಲಿದೆ ಎಂದು ತಿಳಿಸಿದರು. ಓಂಕಾರೇಶ್ವರ ದೇವಾಲ ಯದಲ್ಲಿ ಪೌಳಿ ನಿರ್ಮಿಸಲಾಗಿದ್ದು, ಭಕ್ತರಲ್ಲಿ ಹರ್ಷ ಮೂಡಿಸಿದೆ. ಆಂಜನೇಯ ದೇಗುಲ ದಲ್ಲಿಯೂ ಹೋಮ, ಪೂಜೆಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪೌಳಿ ನಿರ್ಮಾಣ ಮಾಡಲಾಗುವದೆಂದು ಅಧ್ಯಕ್ಷರು ಹೇಳಿದರು.
ಅಭಿಷೇಕವಿಲ್ಲ: ಈಗಾಗಲೇ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಕಾರ್ಯ ನೆರವೇರಿ ಸಲಾಗಿದೆ. ೨೬ ವರ್ಷಗಳ ಬಳಿಕ ಈ ಸೇವೆ ನಡೆದಿದೆ. ೨೦೧೮ರಲ್ಲಿ ನಮ್ಮ ಸಮಿತಿ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಅಂದು ದೇವಾಲಯ ಸಮಿತಿ ಕಾರ್ಯನಿರ್ವಹಣಾಧಿಕಾರಿಗಳಾಗಿದ್ದ ಯದಲ್ಲಿ ಪೌಳಿ ನಿರ್ಮಿಸಲಾಗಿದ್ದು, ಭಕ್ತರಲ್ಲಿ ಹರ್ಷ ಮೂಡಿಸಿದೆ. ಆಂಜನೇಯ ದೇಗುಲ ದಲ್ಲಿಯೂ ಹೋಮ, ಪೂಜೆಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪೌಳಿ ನಿರ್ಮಾಣ ಮಾಡಲಾಗುವದೆಂದು ಅಧ್ಯಕ್ಷರು ಹೇಳಿದರು.
ಅಭಿಷೇಕವಿಲ್ಲ: ಈಗಾಗಲೇ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಕಾರ್ಯ ನೆರವೇರಿ ಸಲಾಗಿದೆ. ೨೬ ವರ್ಷಗಳ ಬಳಿಕ ಈ ಸೇವೆ ನಡೆದಿದೆ. ೨೦೧೮ರಲ್ಲಿ ನಮ್ಮ ಸಮಿತಿ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಅಂದು ದೇವಾಲಯ ಸಮಿತಿ ಕಾರ್ಯನಿರ್ವಹಣಾಧಿಕಾರಿಗಳಾಗಿದ್ದ