ಮಡಿಕೇರಿ, ಜ. ೨: ರಾಜ್ಯದ ಗ್ರಾಮ ಪಂಚಾಯಿತಿಗಳ ಚುನಾವಣೆ ಈಗಾಗಲೇ ಪೂರ್ಣಗೊಂಡಿದ್ದು, ಮುಂದಿನ ಆಡಳಿತ ಮಂಡಳಿ ರಚನೆಯ ಕುತೂಹಲ ಆರಂಭವಾಗಿದೆ. ಇದಕ್ಕಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಮುಖವಾಗಿದ್ದು, ಚುನಾಯಿತ ಸದಸ್ಯರು ಹಾಗೂ ಜನತೆ ಈ ಬಗ್ಗೆ ಕಾತರದಿಂದಿದ್ದಾರೆ. ಈ ನಡುವೆ ರಾಜ್ಯ ಚುನಾವಣಾ ಆಯೋಗದಿಂದ ನಿನ್ನೆ ಈ ಕುರಿತಾಗಿ ಆದೇಶ ಜಾರಿಯಾಗಿದ್ದು, ಈ ಬಾರಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಅಧಿಕಾರಾವಧಿಯಲ್ಲಿ ಪೂರ್ಣ ಐದು ವರ್ಷಗಳ ಬದಲಾಗಿ ಚುನಾವಣೆ ಬಳಿಕದ ೩೦ ತಿಂಗಳಿಗೆ ನಿಗದಿಪಡಿಸಲಾಗಿದೆ. ೨೦೧೫ರ ಚುನಾವಣೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಅವಧಿಯನ್ನು ಐದು ವರ್ಷಗಳ ಒಂದೇ ಸಾಲಿಗೆ ಮುಂದುವರಿಸಲಾಗಿತ್ತು.ರಾಜ್ಯ ಚುನಾವಣಾ ಆಯೋಗವು ರಾಜ್ಯದ ೫೯೫೬ ಗ್ರಾಮ ಪಂಚಾಯಿತಿಗಳಿಗೆ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ (ಅ), ಹಿಂದುಳಿದ ವರ್ಗ (ಬ) ಮತ್ತು ಸಾಮಾನ್ಯ ವರ್ಗಗಳಿಗೆ ಹಾಗೂ ಈ ಪ್ರವರ್ಗಗಳಲ್ಲಿ ಮಹಿಳೆಯರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಸಂಖ್ಯೆಗಳನ್ನು ಈ ಆದೇಶಕ್ಕೆ ಲಗತ್ತಿಸಿರುವ ಅನುಬಂಧದಲ್ಲಿ ನಮೂದಿಸಿದಂತೆ ರಾಜ್ಯದಲ್ಲಿರುವ ಎಲ್ಲಾ ತಾಲೂಕುಗಳಿಗೆ ನಿರ್ದಿಷ್ಟಪಡಿಸಲಾಗಿದೆ. ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಹುದ್ದೆಗಳನ್ನು ಆಯಾಯ ತಾಲೂಕಿನ ಜನಸಂಖ್ಯೆಯ ಆಧಾರದ ಮೇಲೆ ನಿಗದಿಪಡಿಸಿದೆ.ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ತಾಲೂಕುವಾರು ವಿವಿಧ ವರ್ಗಗಳಿಗೆ ಮತ್ತು ಮಹಿಳೆಯರಿಗೆ ಹಾಗೂ ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಲಾಗಿರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ಈ ಕೆಳಗೆ ವಿವರಿಸಿರುವ ಪ್ರಕಾರ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಮೀಸಲಿರಿಸಿ ನಿಗದಿಪಡಿಸಬೇಕಾಗಿದೆ.ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ಗ್ರಾಮ ಪಂಚಾಯಿತಿಗಳಿಗೆ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ (ಅ), ಹಿಂದುಳಿದ ವರ್ಗ (ಬ), ಸಾಮಾನ್ಯ (ಮಹಿಳೆ) ಮತ್ತು ಸಾಮಾನ್ಯ ಈ ಕ್ರಮದಲ್ಲಿಯೇ ನಿಗದಿಪಡಿಸತಕ್ಕದ್ದು. ಅಂದರೆ ಮೊದಲು ಅನುಸೂಚಿತ ಜಾತಿ ಅಧ್ಯಕ್ಷ ಹುದ್ದೆಯನ್ನು ಪಡೆಯುವ ಗ್ರಾಮ ಪಂಚಾಯಿತಿಗಳನ್ನು ನಿಗದಿಪಡಿಸಿದ ನಂತರ ಅನುಸೂಚಿತ ಪಂಗಡ ಅಧ್ಯಕ್ಷ ಹುದ್ದೆ, ಹಿಂದುಳಿದ ವರ್ಗ (ಅ) ಅಧ್ಯಕ್ಷ ಹುದ್ದೆ, ಹಿಂದುಳಿದ ವರ್ಗ (ಬ) ಅಧ್ಯಕ್ಷ ಹುದ್ದೆ ಹೀಗೆ ಒಂದಾದ ನಂತರ ಒಂದನ್ನು ತಾಲೂಕಿನಲ್ಲಿರುವ ಗ್ರಾಮ ಪಂಚಾಯಿತಿಗಳಿಗೆ ನಿಗದಿಪಡಿಸತಕ್ಕದ್ದು. ಉಪಾಧ್ಯಕ್ಷ ಹುದ್ದೆಗಳನ್ನು ನಿಗದಿಪಡಿಸುವಾಗಲೂ ಸಹ ಮೇಲೆ ವಿವರಿಸಿದ ಕ್ರಮವನ್ನೇ ಅನುಸರಿಸತಕ್ಕದ್ದು.
ಅನುಸೂಚಿತ ಜಾತಿ ಅಧ್ಯಕ್ಷ ಹುದ್ದೆಯನ್ನು ನಿಗದಿಪಡಿಸುವಾಗ, ಆ ಪ್ರವರ್ಗದ ಸದಸ್ಯರುಗಳ ಸಂಖ್ಯೆ ಅತ್ಯಂತ ಹೆಚ್ಚು ಇರುವ ಗ್ರಾಮ ಪಂಚಾಯಿತಿಯನ್ನು ಗುರುತಿಸಿ ಆ ಗ್ರಾಮ ಪಂಚಾಯಿತಿಗಳಿಗೆ ಅನುಸೂಚಿತ ಜಾತಿ ಅಧ್ಯಕ್ಷರ ಹುದ್ದೆಯನ್ನು ನಿಗದಿಪಡಿಸತಕ್ಕದ್ದು. ಹೀಗೆ ಮಾಡುವಾಗ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಅನುಸೂಚಿತ ಜಾತಿ ಸದಸ್ಯ ಸ್ಥಾನಗಳ ಆಧಾರದ ಮೇಲೆ ಅವರೋಹಣ ಕ್ರಮದಲ್ಲಿ (ಆesಛಿeಟಿಜiಟಿg ಔಡಿಜeಡಿ) ಗ್ರಾಮ ಪಂಚಾಯಿತಿಯನ್ನು/ಗಳನ್ನು ಬರೆದುಕೊಂಡು ನಂತರ ನಿರ್ಧರಿಸತಕ್ಕದ್ದು. ಈ ರೀತಿ ಮಾಡುವಾಗ, ಸದರಿಯಂತೆ (ರೊಟೇಷನ್) ಅಂದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, ೧೯೯೩ರ ಪ್ರಕರಣ ೪೪ರ ವಿವರಣೆಯಂತೆ ‘ಈ ಪ್ರಕರಣದ ಅಡಿಯಲ್ಲಿ ಹುದ್ದೆಯ ಮೀಸಲಾತಿಯ ಉದ್ದೇಶಗಳಿಗಾಗಿ ಸರದಿಯ ಸೂತ್ರವು ೧೯೯೩ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮವು ಪ್ರಾರಂಭವಾದ ನಂತರ ನಡೆಸುವ ಪ್ರಥಮ ಚುನಾವಣೆಯಿಂದ ಪ್ರಾರಂಭವಾಗತಕ್ಕದ್ದೆAದು ಈ ಮೂಲಕ ಘೋಷಿಸಲಾಗಿದೆ.
ಹಿಂದುಳಿದ ವರ್ಗ (ಅ) ಮತ್ತು ಹಿಂದುಳಿದ ವರ್ಗ (ಬ) ಪ್ರವರ್ಗಗಳಿಗೆ ಮೀಸಲಿರಿಸಲಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ಆ ಪ್ರವರ್ಗದ ಅತಿ ಹೆಚ್ಚು ಸದಸ್ಯ ಸಂಖ್ಯೆಯಿರುವ ಗ್ರಾಮ ಪಂಚಾಯಿತಿಗಳಿಗೆ ನಿಗದಿತ ಸೂಚನೆ ಅನುಸರಿಸಿ ನಿಗದಿಪಡಿಸತಕ್ಕದ್ದು.(ಮೊದಲ ಪುಟದಿಂದ) ಮೀಸಲಿರಿಸಿದ ಪ್ರವರ್ಗಗಳ ಮಹಿಳಾ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಯನ್ನು ನಿಗದಿಪಡಿಸುವಾಗ ಮೊದಲು ಆ ಪ್ರವರ್ಗಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಯನ್ನು ಪಡೆಯುವ ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ, ಅವುಗಳನ್ನು ಮೀಸಲಿರಿಸಿದ ಆ ಪ್ರವರ್ಗಕ್ಕೆ ಸೇರಿದ ಮಹಿಳಾ ಸದಸ್ಯ ಸಂಖ್ಯೆಗೆ ಅನುಗುಣವಾಗಿ ಅವರೋಹಣ ಕ್ರಮದಲ್ಲಿ (ಆesಛಿeಟಿಜiಟಿg ಔಡಿಜeಡಿ) ಬರೆದುಕೊಂಡು ನಂತರ ಅಂತಹ ಗ್ರಾಮ ಪಂಚಾಯಿತಿಗಳಲ್ಲಿ ಆ ಮಹಿಳಾ ಸದಸ್ಯ ಸಂಖ್ಯೆಯನು ಗಣನೆಗೆ ತೆಗೆದುಕೊಂಡು ಅತಿ ಹೆಚ್ಚು ಮಹಿಳಾ ಸದಸ್ಯರಿರುವ ಗ್ರಾಮ ಪಂಚಾಯಿತಿಗಳಿಗೆ ಮಹಿಳಾ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ನಿಗದಿಪಡಿಸತಕ್ಕದ್ದು. ಹೀಗೆ ಮಾಡುವಾಗ ಸಾಧ್ಯವಾದಷ್ಟು ಮಟ್ಟಿಗೆ ಹಿಂದಿನ ಅವಧಿಯಲ್ಲಿ ಮಹಿಳಾ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ಪಡೆದಿದ್ದ ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸತಕ್ಕದ್ದು.
ಸಾಮಾನ್ಯ (ಮಹಿಳೆ) ವರ್ಗಕ್ಕೆ ಮೀಸಲಿರಿಸಲಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ಆ ವರ್ಗದ ಅತಿ ಹೆಚ್ಚು ಸದಸ್ಯ ಸಂಖ್ಯೆಯಿರುವ ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ ನಿಗದಿಪಡಿಸತಕ್ಕದ್ದು. ಹೀಗೆ ನಿಗದಿಪಡಿಸುವಾಗ ಸಾಧ್ಯವಾದಷ್ಟು ಮಟ್ಟಿಗೆ ಹಿಂದಿನ ಅವಧಿ/ಅವಧಿಗಳಲ್ಲಿ ಈ ವರ್ಗಕ್ಕೆ ಮೀಸಲಿರಿಸಲಾದ ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸತಕ್ಕದ್ದು.
ಯಾವುದೇ ಮೀಸಲಿರಿಸಿದ ವರ್ಗದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ನಿಗದಿಪಡಿಸುವಾಗ ಒಂದು ವೇಳೆ ಸದಸ್ಯರ ಸಂಖ್ಯೆಗಳು ಸಮವಾಗಿರುವ ಗ್ರಾಮ ಪಂಚಾಯಿತಿಗಳು ಹಲವು ಇದ್ದು, ಮೀಸಲಿರಿಸಬೇಕಾದ ಹುದ್ದೆಗಳು ಇಂತಹ ಗ್ರಾಮ ಪಂಚಾಯಿತಿಗಳ ಸಂಖ್ಯೆಗಿAತ ಕಡಿಮೆ ಇದ್ದಲ್ಲಿ, ಅಂತಹ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ಸಂಬAಧಪಟ್ಟ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರುಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿರವರು ಲಾಟರಿ ಎತ್ತುವ ಮೂಲಕ ನಿಗದಿಪಡಿಸತಕ್ಕದ್ದು.
ತಾಲೂಕುವಾರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ನಿಗದಿಪಡಿಸುವಾಗ ಮೊದಲು ಎಲ್ಲಾ ಅಧ್ಯಕ್ಷ ಹುದ್ದೆಗಳನ್ನು ನಿಗದಿಪಡಿಸಿ ನಂತರ ಉಪಾಧ್ಯಕ್ಷ ಹುದ್ದೆಯನ್ನು ನಿಗದಿಪಡಿಸತಕ್ಕದ್ದು.
ಆಯೋಗವು ರಾಜ್ಯದ ೫೯೫೬ ಗ್ರಾಮ ಪಂಚಾಯಿತಿಗಳನ್ನು ಗಣನೆಗೆ ತೆಗೆದುಕೊಂಡು ತಾಲೂಕುವಾರು, ವರ್ಗವಾರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಸಂಖ್ಯೆಗಳನ್ನು ಅನುಬಂಧದಲ್ಲಿರುವAತೆ ನಿಗದಿಪಡಿಸಿದೆ. ಆದುದರಿಂದ, ಜಿಲ್ಲಾಧಿಕಾರಿಗಳು ತಾಲೂಕಿನಲ್ಲಿರುವ ಎಲ್ಲಾ ಗ್ರಾಮ ಪಂಚಾಯಿತಿಗಳನ್ನು (ಚುನಾವಣೆ ನಡೆದಿರುವ ಮತ್ತು ಅವಧಿ ಮುಗಿಯದ) ಗಣನೆಗೆ ತೆಗೆದುಕೊಂಡು ಆಯೋಗವು ವರ್ಗವಾರು ನಿಗದಿಪಡಿಸಿರುವ ಎಲ್ಲಾ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ಹಂಚಿಕೆ ಮಾಡಲು ಕ್ರಮಕೈಗೊಳ್ಳತಕ್ಕದ್ದು.
ರಾಜ್ಯದಲ್ಲಿ ಇನ್ನು ಮುಂದೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಪ್ರಕರಣ ೪ರನ್ವಯ ಹೊಸದಾಗಿ ರಚಿತವಾಗುವ ಯಾವುದೇ ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ರಾಜ್ಯ ಚುನಾವಣಾ ಆಯೋಗದ ಪೂರ್ವಾನುಮತಿಯನ್ನು ಪಡೆದು ನಿರ್ಧರಿಸತಕ್ಕದ್ದು ಎಂಬದಾಗಿ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎಂ.ಪಿ. ರಂಜಿತಾ ಅವರು ಹೊಸ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.