ಮಡಿಕೇರಿ, ಜ. ೩: ಚೇರಂಬಾಣೆ ಪ್ರಾ.ಕೃ.ಪ. ಸಹಕಾರ ಸಂಘ ನಿ., ಚೇರಂಬಾಣೆ ಇದರಲ್ಲಿ ರೂ. ೧೩,೪೭,೯೬೦.೧೮ ಲಾಭಗಳಿಸಿ ಸಂಘವು ‘ಎ’ ತರಗತಿ ಹೊಂದಿದೆ ಎಂದು ಸಂಘದ ಅಧ್ಯಕ್ಷ ಬಾಚರಣಿಯಂಡ ಪಿ. ಸುಮನ್ ತಿಳಿಸಿದರು. ಸಂಘದ ೨೦೧೯-೨೦ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ಬಿ.ಪಿ. ಸುಮನ್ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಸಕ್ತ ಸಾಲಿನಲ್ಲಿ ಸಂಘವು ಒಟ್ಟು ರೂ. ೧೩೧.೫೨ ಲಕ್ಷ ವಾರ್ಷಿಕ ವ್ಯವಹಾರವನ್ನು ನಡೆಸಿದೆ. ಸಂಘದಲ್ಲಿ ಒಟ್ಟು ೧೪೩೯ ಸದಸ್ಯರಿದ್ದು, ೭೭೦ ಸದಸ್ಯರು ಸಾಲದ ವ್ಯವಹಾರದಲ್ಲಿ ಪಾಲ್ಗೊಂಡಿದ್ದಾರೆ. ಸಂಘವು ರೂ. ೧೨೩.೨೭ ಲಕ್ಷ ಬಂಡವಾಳವನ್ನು ಹೊಂದಿದ್ದು, ರೂ. ೮೪.೨೦ ಲಕ್ಷ ಷೇರು ಬಂಡವಾಳವನ್ನು ರೂ. ೩೮೧.೭೦ ಲಕ್ಷ ಠೇವಣಿಯನ್ನು ರೂ. ೪೧.೪೫ ಲಕ್ಷ ಕ್ಷೇಮ ನಿಧಿಯನ್ನು ಹೊಂದಿರುತ್ತದೆ.

ಪ್ರಸಕ್ತ ಸಾಲಿಗೆ ಕೃಷಿ ಸಾಲ ರೂ. ೮೨೦.೬೭ ಲಕ್ಷ ಹಾಗೂ ಕೃಷಿಯೇತರ ಸಾಲ ರೂ. ೧೫೪.೪೧ ಲಕ್ಷ ವಿತರಿಸಲಾಗಿದೆ. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿAದ ೬೨೨.೩೭ ಲಕ್ಷ ಕೆಸಿಸಿ ಸಾಲವನ್ನು ಹೊಂದಿಕೊAಡಿದ್ದು, ಶೇ. ೧೦೦ ಕೆಸಿಸಿ ಸಾಲ ವಸೂಲಾತಿ ಮಾಡಲಾಗಿದೆ. ಸದಸ್ಯರಿಗೆ ಶೇ. ೯.೫ ರಷ್ಟು ಡಿವಿಡೆಂಟ್ ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಂಘವು ಮುಂದಿನ ಸಾಲಿನಲ್ಲಿ ಪ್ರಧಾನಮಂತ್ರಿ ಅವರ ಆತ್ಮನಿರ್ಭರ ಯೋಜನೆಯಲ್ಲಿ ನಬಾರ್ಡ್ ಮುಖಾಂತರ ಸಾಲ ಪಡೆದು ಗೋದಾಮು ನಿರ್ಮಾಣ, ಗ್ರಾಹಕರ ಮಳಿಗೆ ನಿರ್ಮಾಣ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದು ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಪಿ.ಟಿ. ಶ್ರೀನಿವಾಸ್, ನಿರ್ದೇಶಕರಾದ ಬಿ.ಬಿ. ಗಣಪತಿ, ಕೆ.ಎಂ. ಸುಗುಣ, ಎ.ಬಿ. ಬೆಳ್ಯಪ್ಪ, ಕೆ.ವಿ. ಕಿಶೋರ್‌ಕುಮಾರ್, ಎನ್.ಸಿ. ಜೀವನ್, ಎ.ಎ. ದೇವಯ್ಯ, ಟಿ.ಎಸ್. ಚೇತಕ್, ಕೆ.ಎ. ಸುಶೀಲ, ಪಿ.ಎಸ್. ಲೈಲಾ, ಎಂ. ಸರಸಮ್ಮ, ಎಂ.ಕೆ. ವಸಂತ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಬಿ. ಜ್ಯೋತಿ ಉಪಸ್ಥಿತರಿದ್ದರು.