ಕೂಡಿಗೆ, ಜ. ೩: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲೇನಹಳ್ಳಿ- ಮದಲಾಪುರ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಯಿಂದಾಗಿ ಬೆಳೆ ನಷ್ಟವಾಗಿವೆ. ಬೆಂಡೆ ಬೆಟ್ಟದ ಕಡೆಯಿಂದ ಬಂದ ಕಾಡಾನೆಗಳು ಕೂಡಿಗೆಯ ಸೈನಿಕ ಶಾಲೆಯ ತಡೆಗೋಡೆಯ ಸಮೀಪದ ದಾರಿಯಲ್ಲಿ ಬಂದು ಹಾರಂಗಿ ನದಿಯನ್ನು ದಾಟಿ ಮಲ್ಲೇನಹಳ್ಳಿ ಮದಲಾಪುರ ಕೊಪ್ಪಲು ಭಾಗದ ಹಾರಂಗಿ ಅಚ್ಚುಕಟ್ಟು ಪ್ರದೇಶದ ಭತ್ತದ ಬೆಳೆಯನ್ನು ತಿಂದು ತುಳಿದು, ನಷ್ಟಪಡಿಸಿವೆ.
ಬೆಳೆಯನ್ನು ಕುಯಿಲು ಮಾಡಿ ಮನೆಗೆ ಬಂದಿದ್ದರು. ಮರು ದಿನ ಜಮೀನಿಗೆ ಹೋಗುವಷ್ಟರಲ್ಲಿ ಬೆಳೆ ಸಂಪೂರ್ಣ ಹಾಳಾಗಿದೆ. ಈ ವ್ಯಾಪ್ತಿಯ ಕೆ.ಪಿ. ಸೋಮಣ್ಣ, ಮೋಹನ್, ಸುರೇಶ, ವೆಂಕಟೇಶ ಎಂಬವರ ಬೆಳೆ ಸಂಪೂರ್ಣವಾಗಿ ಹಾನಿಗೀಡಾಗಿದೆ. ಸ್ಥಳಕ್ಕೆ ಕಣಿವೆ ಉಪ ವಲಯ ಅರಣ್ಯ. ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.