*ಗೋಣಿಕೊಪ್ಪಲು, ಜ. ೪: ಮಡಿಕೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಮಹಿಳೆಯರ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಕೊಡಗು ಮ್ಯಾವ್ರಿಕ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಡಿಕೇರಿಯ ಮ್ಯಾನ್ಸ್ ಕಾಂಪೌAಡ್ ಮೈದಾನದಲ್ಲಿ ನಡೆದ ಪಂದ್ಯಾಟದಲ್ಲಿ ಕೊಡಗು ಮ್ಯಾವ್ರಿಕ್ಸ್ ತಂಡ ಮ್ಯಾಡ್ರೀಡ್ ತಂಡದ ವಿರುದ್ಧ ೨೨-೨೦ ಅಂತರದಿAದ ಜಯ ಸಾಧಿಸಿತು. ಕೊಡಗು ಮ್ಯಾವ್ರಿಕ್ಸ್ ತಂಡದ ಪರವಾಗಿ ಕುಲ್ಲಚಂಡ ನಿಕಿತಬೋಪಣ್ಣ, ನವಿತಬೋಪಣ್ಣ, ಕುಪ್ಪಂಡ ನಕ್ಷಾಕಾವೇರಿ, ರಹಚಿಣ್ಣಪ್ಪ, ಆದಿತಿಭಾನುಪ್ರಕಾಶ್, ರಿಚತಂಗಮ್ಮ, ಲಕ್ಷ್ದೇಚಮ್ಮ ಆಡಿದರು. ತರಬೇತುದಾರರಾಗಿ ಕುಲ್ಲಚಂಡ ಬೋಪಣ್ಣ ಕಾರ್ಯನಿರ್ವಹಿಸಿದರು.