ನಾಪೆೆÇÃಕ್ಲು, ಜ. ೪: ನಗರದ ಸ್ನೇಹಿತರ ಒಕ್ಕೂಟದಿಂದ ಬಡ ರೋಗಿಗಳಿಗೆ ಅನುಕೂಲವಾಗುವಂತೆ ಔಷಧಿ ಸಂಗ್ರಹ ಪೆಟ್ಟಿಗೆಯನ್ನು ಸ್ಥಾಪಿಸಲು ನಿರ್ಧರಿಸ ಲಾಗಿದ್ದು, ತಾ. ೫ ರಂದು ಬೆಳಿಗ್ಗೆ ೧೦ ಗಂಟೆಗೆ ಪಂಚಾಯಿತಿ ಎದುರಿನಲ್ಲಿ ಪೆಟ್ಟಿಗೆಯನ್ನು ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಗ್ರಾ. ಪಂ. ಸದಸ್ಯ ಮತ್ತು ಸ್ನೇಹಿತರ ಕೂಟದ ಮಾಚೇಟಿರ ಕುಶು ಕುಶಾಲಪ್ಪ ತಿಳಿಸಿದ್ದಾರೆ. ಇದರಲ್ಲಿ ಸಂಗ್ರಹವಾಗುವ ಔಷಧಿಯ ಗುಣಮಟ್ಟವನ್ನು ವೈದÀ್ಯರಿಂದ ಪರಿಶೀಲಿಸಿ ವೃದ್ಧಾಶ್ರಮಗಳಿಗೆ ಮತ್ತು ಅರ್ಹ ರೋಗಿಗಳಿಗೆ ಉಚಿತವಾಗಿ ನೀಡಲು ಯೋಜನೆಯನ್ನು ರೂಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.